ಮೂಡಬಿದ್ರೆ: `ಆಳ್ವಾಸ್ ಮೀಡಿಯಾ ಬಝ್’ ರಾಷ್ಟ್ರೀಯ ವಿಚಾರ ಸಂಕಿರಣ, ಮಾಧ್ಯಮ ಉತ್ಸವ

Spread the love

ಮೂಡಬಿದ್ರೆ: ಆಳ್ವಾಸ್ ಕಾಲೇಜು ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಹಾಗೂ ಪದವಿ ವಿಭಾಗದ ವತಿಯಿಂದ `ಮೀಡಿಯಾ ಬಝ್’ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಮಾಧ್ಯಮ ಉತ್ಸವವನ್ನು ಆಯೋಜಿಸಲಾಗುತ್ತದೆ. ಕಾರ್ಯಕ್ರಮವನ್ನು ಇದೇ ಮಾರ್ಚ್ 11 ಮತ್ತು 12 ರಂದು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಸಲಾಗುತ್ತಿದೆ.ತನಿಖಾ ಪತ್ರಿಕೋದ್ಯಮದ ಮೇಲೆ  ಈ ರಾಷ್ಟ್ರೀಯ ವಿಚರ ಸಂಕಿರಣವು ನಡೆಯಲಿದೆ. ಮಾರ್ಚ್ 11ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಹಿರಿಯ ಪತ್ರಕರ್ತ ಅನಂತ ಚಿನಿವಾರ್ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಅಧ್ಯಕ್ಷೆ ಡಾ.ವಹೀದಾ ಸುಲ್ತಾನಾ ಅವರು ಪಾಲ್ಗೊಳ್ಳಲಿದ್ದಾರೆ.

 ಮಾರ್ಚ್ 11 ರಂದು ಬೆಳಗ್ಗೆ 11.10ಕ್ಕೆ `ತನಿಖಾ ಪತ್ರಿಕೋದ್ಯಮ-ಆಯಾಮಗಳು ಮತ್ತು ಪ್ರಾಯೋಗಿಕ ಅನ್ವಯಗಳು’ ಎಂಬ ವಿಷಯದ ಕುರಿತಂತೆ `ವಿಶ್ವವಾಣಿ’ ದಿನಪತ್ರಿಕೆಯ ಮಂಗಳೂರು ವಿಭಾಗದ ವಿಶೇಷ ವರದಿಗಾರರಾದ ಜಿತೇಂದ್ರ ಕುಂದೇಶ್ವರ ಅವರು ಮಾತನಾಡಲಿದ್ದಾರೆ.

 ಮಾರ್ಚ್ 12ರಂದು ರಾಷ್ಟ್ರೀಯ ವಿಚಾರ ಸಂಕಿರಣದ ಮುಖ್ಯ ಭಾಗ ತೆರೆದುಕೊಳ್ಳಲಿದ್ದು, ತನಿಖಾ ಪತ್ರಿಕೋದ್ಯಮ ಕುರಿತಾಗಿ ಚರ್ಚೆ ನಡೆಯಲಿದೆ. ಚರ್ಚೆಯಲ್ಲಿ ಸುವರ್ಣ ನ್ಯೂಸ್ 24*7 ನ ಸೀನಿಯರ್ ಕರೆಸ್ಪಾಂಡೆಂಟ್ ಆದ ವಿಜಯಲಕ್ಷ್ಮಿ ಶಿಬರೂರು ಹಾಗೂ ಉಡುಪಿ ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಅವರು ಭಾಗವಹಿಸುತ್ತಿದ್ದಾರೆ.

ಮಾರ್ಚ್ 12ರಂದು ಮಧ್ಯಾಹ್ನ 3.00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ `ಡೆಕ್ಕನ್ ಹೆರಾಲ್ಡ್’ ದಿನಪತ್ರಿಕೆಯ ಮಂಗಳೂರು ವಿಭಾಗದ ಸ್ಥಾನಿಕ ಸಂಪಾದಕ ಹಾಗೂ ಮಂಗಳೂರು ಪ್ರೆಸ್‍ಕ್ಲಬ್‍ನ ಅಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಮತ್ತು ಮೂಡುಬಿದಿರೆ ಪ್ರೆಸ್‍ಕ್ಲಬ್‍ನ ಅಧ್ಯಕ್ಷ, `ಹೊಸದಿಗಂತ’ ದಿನಪತ್ರಿಕೆಯ ಕರೆಸ್ಪಾಂಡೆಂಟ್ ಎಂ. ಗಣೇಶ್ ಕಾಮತ್ ಅವರು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟೀ ವಿವೇಕ್ ಆಳ್ವ ಅವರು ವಹಿಸಿಕೊಳ್ಳಲಿದ್ದಾರೆ.

ಮೀಡಿಯಾ ಬಝ್ ಮಾಧ್ಯಮ ಉತ್ಸವ

  ಉಳಿದಂತೆ ವಿದ್ಯಾರ್ಥಿಗಳಿಗಾಗಿ ಮಾಧ್ಯಮ ಉತ್ಸವ ನಡೆಯಲಿದ್ದು, ಅನೇಕ ಸ್ಪರ್ಧೆಗಳಿಗೆ ಮೀಡಿಯಾ ಬಜ್ó ವೇದಿಕೆ ನೀಡುತ್ತಿದೆ. ಫೋಟೋಗ್ರಫಿ, ವಿಜೆ ಹಂಟ್, ಲೈವ್‍ರಿಪೋರ್ಟಿಂಗ್, ಪೇಜಿನೇಶನ್, ಮ್ಯಾಡ್ ಆ್ಯಡ್, ಮಾಕ್‍ಪ್ರೆಸ್, ಪ್ರೊಡಕ್ಟ್ ಪ್ರೊಮೋಶನ್, ಕಿರುಚಿತ್ರ, ಸಾಕ್ಷ್ಯ ಚಿತ್ರ, ರೇಡಿಯೋ ಫೀಚರ್, ಕ್ವಿಜ್ó ಹೀಗೆ ಸುಮಾರು 11 ವಿವಿಧ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದೆ.

  ಪ್ರತಿಯೊಬ್ಬ ವಿದ್ಯಾರ್ಥಿಯು ಇಲ್ಲಿ ನಡೆಸುವ ವಿಚಾರ ಸಂಕಿರಣದ ಮೂಲಕ ತನ್ನ ಜ್ಞಾನದ ಪರಿಮಿತಿಯನ್ನು ವಿಶಾಲಗೊಳಿಸುವುದು ಹಾಗೂ ಮೀಡಿಯಾ ಫೆಸ್ಟ್‍ನ ಮೂಲಕ ತನ್ನನ್ನು ತಾನು ಪತ್ರಿಕಾ ಬದುಕಿಗೆ ಅಣಿಯಾಗಿಸುವುದು ಮಿಡಿಯಾ ಬಝ್‍ನ ಒಟ್ಟು ಉದ್ದೇಶವಾಗಿದೆ.


Spread the love