ಮೂಡಿಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಸಮಾಧಾನದಕಿಡಿ

Spread the love

ಮೂಡಿಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಸಮಾಧಾನದ ಕಿಡಿ

ಮೂಡಿಗೆರೆ : ಸಮ್ಮೇಳನ ತಯಾರಿ ವೇಳೆ ಹಾಗೂ ಶುಕ್ರವಾರ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮತ್ತು ಉದ್ಘಾಟನೆ ವೇಳೆ ಹಾಗೂ ವೇದಿಕೆಯಲ್ಲಿ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಇದ್ದರೂ, ಸ್ಥಳೀಯ ಶಾಸಕ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾದ ಎಂ.ಪಿ.ಕುಮಾರಸ್ವಾಮಿ ಅವರು ಗೈರು ಹಾಜರಾಗಿದ್ದು ತೀವ್ರ ಅಸಮಧಾನಕ್ಕೆ ಕಾರಣವಾಗಿದೆ. ಕನ್ನಡದ ಕೆಲಸಕ್ಕಿಂತ ರಾಜಕಾರಣವೇ ಅವರಿಗೆ ಮುಖ್ಯ ಗುರಿಯಾಗಿದೆ ಎಂಬ ಅಸಮಧಾನ ವ್ಯಕ್ತವಾಗಿದೆ. ಅಲ್ಲದೇ ಕನ್ನಡ ಹಬ್ಬದಲ್ಲಿ ತಾಲೂಕಿನ ಹಿರಿಯ ಕವಿಗಳು, ಪ್ರಸಿದ್ಧ ಬರಹಗಾರರು ಮತ್ತು ಕೆಲ ಪತ್ರಕರ್ತರಿಗೆ ಆಹ್ವಾನ ಪತ್ರಿಕೆ ನೀಡದೇ ದೂರವಿಡಲಾಗಿದೆ. ಎಂಬ ಸುದ್ದಿ ಹುಟ್ಟಿಕೊಂಡಿದ್ದರಿಂದ ಸಮ್ಮೇಳನದಲ್ಲಿ ಆಸನಗಳು ಖಾಲಿ ಖಾಲಿಯಾಗಿದ್ದು, ಅಸಮಧಾನ ಎದ್ದು ಕಾಣುತ್ತಿತ್ತು.

ಜಿಲ್ಲಾ ಕನ್ನಡ ಹಬ್ಬದ ಆಹ್ವಾನ ಪತ್ರಿಕೆಯಲ್ಲಿ ದಲಿತರು, ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಮೂಡಿಗೆರೆ ವಿಧಾನಸಭೆ ಕ್ಷೇತ್ರದ 49 ಗ್ರಾ.ಪಂ.ಯ ಅಧ್ಯಕ್ಷರು, ಉಪಾಧ್ಯಕ್ಷರನ್ನು ಸಮ್ಮೇಳನಕ್ಕೆ ಆಹ್ವಾನಿಸದೇ ದೂರವಿಟ್ಟಿದ್ದರೆಂಬ ಆರೋಪಗಳು ಕೇಳಿ ಬಂದವು. ಜಿಲ್ಲಾ ಮಟ್ಟದಲ್ಲಿ ನಡೆದ ಪ್ರಥಮ ದಿನದ ಸಮ್ಮೇಳನದಲ್ಲಿ ಶಿಕ್ಷಕರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಕೆಲವು ಶಿಕ್ಷಕರು ವೇದಿಕೆಯ ಹತ್ತಿರ ತಮ್ಮ ಕಾರ್ಯದಲ್ಲಿ ತೊಡಗಿಕೊಂಡಿದ್ದು ಬಿಟ್ಟರೆ ವಿದ್ಯಾರ್ಥಿಗಳೆ ಆಹಾರ ಬಡಿಸುತ್ತಿದ್ದಿದ್ದು ಕಂಡು ಬಂತು. ವಿದ್ಯಾರ್ಥಿಗಳೆ ಎಲ್ಲಾ ನೋಡುತ್ತಿದ್ದರೆ ಜಿಲ್ಲೆಯಲ್ಲಿರುವ ಶಿಕ್ಷಕರು ಎಲ್ಲಿ ಹೋದರೆಂಬುವುದೇ ಯಕ್ಷ ಪ್ರಶ್ನೆಯಾಗಿತ್ತು. ಹಾಗೂ ಮೂಡಿಗೆರೆ ಹ್ಯಾಂಡ್ ಪೋಸ್ಟ್ ಸಮೀಪ ತೋರಣ ಕಾರ್ಯಕ್ರಮಕ್ಕೆ ಮೊದಲೇ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

 

ಬೆಳಗಿನ ತಿಂಡಿ ವಿಚಾರದಲ್ಲಿ ಆ ದೇವನೇ ಬಲ್ಲ. ಹೇಳುವವರೂ ಕೇಳುವವರೂ ಇಲ್ಲದೆ ಇದ್ದ ಕಾರಣ ತಿಂಡಿ ಬಡಿಸುವ ಜಾಗದಲ್ಲೆ ತಿಂದ ಪದಾರ್ಥಗಳನ್ನು ಅಲ್ಲೆ ಬಿಸಾಡಿದ್ದು, ಅಶುಚಿತ್ವವವನ್ನು ಕಂಡ ಜಿಲ್ಲಾ ಪತ್ರಕರ್ತರು ಬೆಚ್ಚಿ ಬಿದ್ದರು. ತಾವು ತಮ್ಮ ಜೀವಮಾನದಲ್ಲಿ ಎಲ್ಲೂ ಕಾಣದಂತ ಗಬ್ಬೆದ್ದ ಸಮ್ಮೇಳನದ ಬಗ್ಗೆ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳನ್ನು ಹೊರತು ಪಡಿಸಿದರೆ ಸಾರ್ವಜನಿಕರು ಇಲ್ಲದೆ ಇರುವುದು ಕಂಡು ಬೇಸರ ಪಟ್ಟರು. ಒಟ್ಟಿನಲ್ಲಿ ಈ ಸಮ್ಮೇಳನ ಹಣ ಮಾಡುವ ಉದ್ದೇಶದಿಂದ ಕೂಡಿದ್ದಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿ ಬರುತ್ತಿದೆ.


Spread the love