ಮೂಳೂರು : ಹಿಂದು ರಕ್ಷಾ ವೆಲ್‍ಫೇರ್ ಟ್ರಸ್ಟ್ ವತಿಯಿಂದ 1200ಕ್ಕೂ ಅಧಿಕ ಮಂದಿಗೆ ಉಚಿತವಾಗಿ ಆಟಿದ ಮದ್ದು ವಿತರಣೆ

Spread the love

ಮೂಳೂರು : ಹಿಂದು ರಕ್ಷಾ ವೆಲ್‍ಫೇರ್ ಟ್ರಸ್ಟ್ ವತಿಯಿಂದ 1200ಕ್ಕೂ ಅಧಿಕ ಮಂದಿಗೆ ಉಚಿತವಾಗಿ ಆಟಿದ ಮದ್ದು ವಿತರಣೆ

ಕಾಪು : ಮೂಳೂರು ಹಿಂದು ರಕ್ಷಾ ವೆಲ್‍ಫೇರ್ ಟ್ರಸ್ಟ್ ವತಿಯಿಂದ ಆಟಿ ಅಮಾವಾಸ್ಯೆಯ ಪ್ರಯುಕ್ತ ಹಾಳೆಯ ಮರದ ತೊಗಟೆಯ ಮದ್ದನ್ನು ಸಿದ್ಧಪಡಿಸಿ ಉಚಿತವಾಗಿ ಸುಮರು 1200ಕ್ಕೂ ಅಧಿಕ ಸಾರ್ವಜನಿಕರಿಗೆ ವಿತರಿಸಲಾಯಿತು.

ಕಾಪು ಪುರಸಭಾ ವ್ಯಾಪ್ತಿಯ ಮೂಳೂರು ಪಡುವಿನ ಹಳೆ ಭಜನಾ ಮಂದಿರದ ಬಳಿಯಲ್ಲಿ ಈ ಕಷಾಯದ ವಿತರಣೆಯನ್ನು ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಮಾಡಲಾಗುತ್ತಿದ್ದು, ಸರ್ವ ಧರ್ಮೀಯರು ಸಹಿತ ನೂರಾರು ಮಂದಿ ದೂರದ ಊರುಗಳಿಂದಲೂ ಆಗಮಿಸಿ ಆಟಿಯ ಅಮಾವಾಸ್ಯೆಯ ಪ್ರಯುಕ್ತ ಹಾಳೆಮರದ ತೊಗಟೆಯಿಂದ ತಯಾರಿಸಿದ ಮದ್ದನ್ನು ಸ್ವೀಕರಿಸಿದ್ದರು.

ಈ ಸಂದರ್ಭ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಧೀರೇಶ್ ಡಿ.ಪಿ., ತುಳುನಾಡಿನ ಸಂಸ್ಕೃತಿಯಲ್ಲಿ ಒಂದಾದ ಆಟಿ ಅಮಾವಾಸ್ಯೆ ಆಚರಣೆ ಧಾರ್ಮಿಕವಾಗಿ. ವೈಜ್ಞಾನಿಕವಾಗಿ ಅತಿ ಮಹತ್ವ ಹೊಂದಿದೆ. ಹಾಳೆ ಮರವು ಹೂ ಬಿಡುವ ಒಂದು ತಿಂಗಳ ಮೊದಲೇ ಆಟಿ ಅಮಾವಾಸ್ಯೆ ಬರುವುದರಿಂದ ಮರದ ತೊಗಟೆಯಲ್ಲಿ ಔಷಧೀಯ ಗುಣಧರ್ಮ ಹೆಚ್ಚಿರುದರಿಂದ ಅದರಿಂದ ತಯಾರಿಸಿದ ಮದ್ದು / ಕಷಾಯ ಕುಡಿಯುವುದರಿಂದ ಅನೇಕ ರೋಗ ರುಜಿನಗಳು ದೂರವಾಗುತ್ತದೆ ಎಂದು ಪುರಾತನ ಕಾಲದ ಪಂಡಿತರಿಂದ ಹಿಡಿದು ಈಗಿನ ವೈಜ್ಞಾನಿಕ ಸಂಶೋದಕರು ಕೂಡ ಧೃಡ ಪಡಿಸಿದ್ದಾರೆ. ಕಳೆದ ವರ್ಷ ಉಡುಪಿ ಕುತ್ಪಾಡಿ ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜಿನ ಜನಪದ ವೈದ್ಯಕೀಯ ಸಂಶೋಧನಾ ಸಂಸ್ಥೆ ಕೂಡಾ ಆಟಿ ಅಮಾವಾಸ್ಯೆಯ ದಿನ ಹಾಲೆಮರದ ತೊಗಟೆಯಲ್ಲಿ ಔಷದೀಯ ಗುಣಧರ್ಮ ಹೆಚ್ಚಾಗಿರುವುದು ಧೃಡಪಡಿಸಿರುತ್ತದೆ. ಆ ನಿಟ್ಟಿನಲ್ಲಿ ಧಾರ್ಮಿಕ ಆಚರಣೆಯು ನಿರಂತರವಾಗಿರಲು ಆಟಿ ಮದ್ದು ವಿತರಣೆಯ ಸೇವೆಯನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸುತ್ತಾ ಬರಲಾಗಿದೆ ಎಂದು ತಿಳಿಸಿದರು.

ಈ ಬಾರಿ ಕೈಪುಂಜಾಲು, ಕಾಪು, ಪೊಲಿಪು, ಎರ್ಮಾಳು, ಉಚ್ಚಿಲ, ಪಣಿಯೂರು, ಮೂಳೂರು ಮತ್ತಿತರ ಪ್ರದೇಶಗಳಿಂದ ಆಗಮಿಸಿ ಮದ್ದು ಪಡೆದುಕೊಂಡಿರುತ್ತಾರೆ. ಸಂಜೀವ ಅಮೀನ್ ಮತ್ತು ಟ್ರಸ್ಟ್ ಸದಸ್ಯರ ಸಹಕಾರದಿಂದ ಸಿದ್ಧಪಡಿಸಲಾಗಿತ್ತು.

ಈ ಸಂದರ್ಭ ಮೂಳೂರು ಹಿಂದು ರಕ್ಷಾ ವೆಲ್‍ಫೇರ್ ಟ್ರಸ್ಟ್‍ನ ಅಧ್ಯಕ್ಷ ಚಂದ್ರಕಾಂತ್ ಕೆ. ಮೆಂಡನ್, ಗೌರವ ಸಲಹೆಗಾರ ಅಶೋಕ್ ಪುತ್ರನ್, ಉಪಾಧ್ಯಕ್ಷ ಪ್ರದೀಪ್ ಎಸ್.ಪುತ್ರನ್, ದಿನೇಶ್ ಪಾಣಾರ, ಸಂಜೀವ ಅಮೀನ್, ಸುಖೇಶ್ ಡಿ,. ಪ್ರತೀಕ್ ಸುವರ್ಣ, ನಾಗೇಶ್, ಮಧುಕಿರಣ್ ಶ್ರೀಯಾನ್, ಅರುಣ್ ಕುಲಾಲ್, ಸುನಿಲ್ ಕರ್ಕೇರ, ಜಿತೇಶ್ ಕುಮಾರ್, ಮೊದಲಾದರವು ಆಟಿ ಮದ್ದು ತಯಾರಿ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದರು.


Spread the love