ಮೇ 14 ರವರೆಗೆ ಮಂಗಳೂರು ನಗರದಲ್ಲಿ ಡ್ರೋನ್ ಬಳಕೆ ನಿಷೇಧ: ಕಮಿಷನರ್ ಅನುಪಮ್ ಅಗರ್ವಾಲ್
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಎಲ್ಲ ರೀತಿಯ ಡ್ರೋನ್ ಬಳಕೆ ಹಾರಾಟ ಮತ್ತು ಚಿತ್ರೀಕರಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸಾರ್ವಜನಿಕ ಸುರಕ್ಷತೆ, ಹಿತದೃಷ್ಠಿಯಿಂದ ಡ್ರೋನ್ ರೂಲ್ಸ್ 2021ರ ರೂಲ್ಸ್ 24ರ ಅಡಿಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಡ್ರೋನ್‌ಗಳ ಬಳಕೆ ಹಾರಾಟ ಮತ್ತು ಡ್ರೋನ್ ಮೂಲಕ ಚಿತ್ರೀಕರಣ ನಡೆಸುವುದನ್ನು ಮೇ 10ರ ಸಂಜೆ 4 ರಿಂದ ಮೇ 14ರ ಸಂಜೆ 4 ಗಂಟೆಯ ತನಕ ಸಂಪೂರ್ಣವಾಗಿ ನಿಷೇಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಅನುಪಮ್ ಅಗರ್ವಾಲ್ ಆದೇಶ ನೀಡಿದ್ದಾರೆ.
ಮಂಗಳೂರು ನಗರ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣಾಧಿಕಾರಿಗಳು ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಡ್ರೋನ್‌ಗಳ ಬಳಕೆ ಮತ್ತು ಹಾರಾಟವಾಗದಂತೆ ಅಗತ್ಯದ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.