ಮೇ 27 ರಂದು ಗಣ್ಯರ ಉಪಸ್ಥಿತಿಯಲ್ಲಿ “ಬನ್ನೀ ಬಾರ್ಕೂರಿಗೆ” ದ್ರಶ್ಯ ಕಾವ್ಯ ಬಿಡುಗಡೆ

Spread the love

ಮೇ 27 ರಂದು ಗಣ್ಯರ ಉಪಸ್ಥಿತಿಯಲ್ಲಿ  “ಬನ್ನೀ ಬಾರ್ಕೂರಿಗೆ” ದ್ರಶ್ಯ ಕಾವ್ಯ ಬಿಡುಗಡೆ

ಉಡುಪಿ: ಇತಿಹಾಸ ಪ್ರಸಿದ್ದ ಬಾರ್ಕೂರಿನ ಹಿರಿಮೆ ಗರಿಮೆಯನ್ನು ತಿಳಿಸುವ ರಕ್ಷಿತ್ ಬಾರ್ಕೂರು ಸಾರತಥ್ಯದ ದ್ರಶ್ಯ ಕಾವ್ಯ “ಬನ್ನೀ ಬಾರ್ಕೂರಿಗೆ” ಬಿಡುಗಡೆ ಸಮಾರಂಭ ಮೇ 27 ರ ಸಂಜೆ 7 ಗಂಟೆಗೆ ಬಾರ್ಕೂರಿನ ಸಂಕಮ್ಮ ತಾಯಿ ರೆಸಾರ್ಟ್ ನಲ್ಲಿ ಜರುಗಲಿದೆ.

ತೌಳವ ವಿಭವದ ವಸನನುಟ್ಟು ಮತ್ತು ಬಿಂಕದಿ ನೀಂತಿದೆ ಬಾರಕೂರು ಎಂಬ ಕವಿವಾಣಿಯಂತೆ ತುಳುನಾಡಿಗರಿಗೆ ಬಾರಕೂರು ಎಂದೆಂದಿಗೂ ಮರೆಯಲಾಗದ ರಾಜಧಾನಿಯಾಗಿ ಉಳಿದಿದೆ. ಕ್ರಿ.ಶ. 76ರಲ್ಲಿ ಭೂತಾಳ ಪಾಂಡ್ಯನ ಪಟ್ಟಾಧಿಕಾರದ ಮೂಲಕ ಪ್ರಾರಂಭಗೊಂಡು ಬಾರಕೂರು ಸಾಮ್ರಾಜ್ಯ ಕರ್ನಾಟಕದ ಇತಿಹಾಸದಲ್ಲಿ ಮೆರೆದ ಪ್ರಾಚೀನ ಸಂಧಾನವೆಂದು ಇತಿಹಾಸದ ದಾಖಲೆಗಳು ಸಾರುತ್ತವೆ. ಹಲವಾರು ರಾಜರುಗಳಾಳಿದ ಈ ಪುಣ್ಯ ಭೂಮಿಯ ಪಡುಗಡಲ ಮಡಿಲಿನಲ್ಲಿ ಸುಶೋಭಿತವಾಗಿದ್ದು, ಸೀತಾನದಿಯ ಮಡಿಲಲ್ಲಿರುವ ಬಾರಕೂರನ್ನು ಒಂದು ಅನನ್ಯವಾದ ದೃಶ್ಯಕಾವ್ಯದ ಮೂಲತ ಸೆರೆಹಿಡಿದಿದ್ದೇವೆ. ಗುಡಿಗಳು,ಶಾಸನದ ಕಲ್ಲುಗಳು ಬಾರಕೂರಿನಿತಿಹಾಸವನ್ನು ಸಾರುತ್ತಿವೆ. ಗುಡಿ, ಚರ್ಚ್,ಮಸೀದಿ,ಬಸದಿ ಹೀಗೆ ಸರ್ವಧರ್ಮದ ಸಮನ್ವಯ ಸಾರುವ ಬಾರ್ಕೂರಿನ ಗತ ಇತಿಹಾಸವನ್ನು ಮೆಲಕು ಹಾಕುತ್ತಾ ಬಾರ್ಕೂರಿನ ಹಿರಿಮೆ ಗರಿಮೆಯನ್ನು ವರ್ತಮಾನದ ತೀರದಲ್ಲಿ ನಿಂತು ಅರಿಯುವ ಕಿರು ಪ್ರಯತ್ನವೇ “ಬನ್ನೀ ಬಾರ್ಕೂರಿಗೆ”ಎನ್ನುವ ದೃಶ್ಯಕಾವ್ಯ…

ಸಂಪೂರ್ಣ ದೃಶ್ಯಕಾವ್ಯವನ್ನು ರಕ್ಷಿತ್ ಬಾರ್ಕೂರು ಸಾರಥ್ಯದಲ್ಲಿ ರಚಿಸಿದ್ದು ಸುರೇಶ್ ಸಾಲಿಗ್ರಾಮ ಮತ್ತು ಸುಷ್ಮಾ ಬೀಜಾಡಿ ಧ್ವನಿ ನೀಡಿದ್ದಾರೆ. ರಾಘವೇಂದ್ರ ರಾಜ್ ಸಾಸ್ತಾನ ಮತ್ತು ಕಾರ್ತಿಕ್ ಅರಸ್ ಅಚ್ಲಾಡಿ ಸಾಹಿತ್ಯ ರಚನೆ ಮಾಡಿದ್ದು, ಅಭಿಜಿತ್ ಪಾಂಡೇಶ್ವರ ಮತ್ತು ದಿನೇಶ್ ಭಾಂಧವ್ಯ ಸಂಯೋಜನೆ ಮಾಡಿದ್ದಾರೆ. ನಿತೇಶ್ ಪಾಂಡೇಶ್ವರ ಛಾಯಾಗ್ರಹಣ ಮಾಡಿದ್ದು, ಸಚಿನ್ ಶೆಟ್ಟಿ, ನಿತೇಶ್ ಪಾಂಡೇಶ್ವರ ಸಹಕರಿಸಿದ್ದಾರೆ.್

ಸುಂದರ ಬಿಡುಗಡೆ ಸಮಾರಂಭಕ್ಕೆ ಬಾಳೆಕುದ್ರು ಮಠದ ಶ್ರೀ ನರಸಿಂಹಶ್ರಮ ಸ್ವಾಮೀಜಿ ಆಶೀವರ್ಚನ ನೀಡಲಿದ್ದು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಾರ್ಕೂರು ಶಾಂತರಾಮ ಶೆಟ್ಟಿ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಗೋಪಾಲ ಪೂಜಾರಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್, ಬಾರ್ಕೂರು ಚರ್ಚಿನ ಧರ್ಮಗುರು ವಂ ವಲೇರಿಯನ್ ಮೆಂಡೊನ್ಸಾ, ಉದ್ಯಮಿ ಶೌಕತ್ ಆಲಿ, ಶ್ರೀನಿವಾಸ ಶೆಟ್ಟಿಗಾರ್, ಡಾ. ದಯಾನಂದ ಪೈ, ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲ ರಾಜಶೇಖರ್ ಹೆಬ್ಬಾರ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಬಳಿಕ ಸುರೇಶ್ ಸಾಲಿಗ್ರಾಮ ಮತ್ತು ಸುಷ್ಮಾ ಬೀಜಾಡಿ ಇವರಿಂದ ಗಾಯನ ಕಾರ್ಯಕ್ರಮ ಮತ್ತು ಸ್ಟೆಪ್ ಇನ್ ಸ್ಟೈಲ್ ಡ್ಯಾನ್ಸ್ ಗ್ರೂಪ್ ಸಾಸ್ತಾನ ಇವರುಗಳಿಂದ ಫಿಲ್ಮಿ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ.


Spread the love