ಯೋಧರಿಗೆ ಗೌರವ ನಮನ ಕಾರ್ಯಕ್ರಮ ಸಮರ್ಪಣಾ 2016

Spread the love

ಯೋಧರಿಗೆ ಗೌರವ ನಮನ ಕಾರ್ಯಕ್ರಮ ಸಮರ್ಪಣಾ 2016

ಉಡುಪಿ: ಜೀವದ ಹಂಗು ತೊರೆದು ಗಡಿ ರಕ್ಷಣೆ ಮಾಡಿ ಗಡಿಯಲ್ಲಿ ಮಡಿದ ಹಾಗೂ ತಮ್ಮ ಸ್ವಾಧೀನ ಕಳದುಕೊಂಡು ಬದುಕುತ್ತಿರುವ ಸೈನಿಕರಿಗೆ ಸಹಾಯಧನ ನೀಡುವ ಸಲುವಾಗಿ ಮಲ್ಪೆಯ ಉತ್ಸಾಹಿ ದೇಶ ಪ್ರೇಮಿ ತರುಣ ವೃಂದ ನಿರ್ಧರಿಸಿದೆ ಎಂದು ತಂಡದ ಮುಖ್ಯಸ್ಥ ಕರುಣಾಕರ ಬಂಗೇರ ಹೇಳಿದರು.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ದೇಶದ ರಕ್ಷಣೆ ವಿಚಾರಕ್ಕೆ ಬಂದರೆ ಜೀವದ ಹಂಗು ತೊರೆದು ಗಡಿ ರಕ್ಷಣೆ ಮಾಡುವವರು ನಮ್ಮ ಸೈನಿಕರು. ಗಡಿಯಲಲ್ಇ ಮಡದಿ ಹಾಗೂ ತಮ್ಮ ಸ್ವಾಧಿನ ಕಳೆದುಕೊಂಡು ಬದುಕುತ್ತಿರುವ ಸೈನಿಕರನ್ನು ನೆನಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಉದ್ದೇಶದಿಂದ ಮಲ್ಪೆಯ ಉತ್ಸಾಹಿ ದೇಶ ಪ್ರೇಮಿ ತರುಣರಿಂದ ಕೃಷ್ಣಾಷ್ಟಮಿ ಪ್ರಯುಕ್ತ ಹುಲಿವೇಷ ಕುಣಿತವನ್ನು ಅಗೋಸ್ತ್ 24-25 ರಂದು ಉಡುಪಿಯ ವಿವಿಧ ಕಡೆಗಳಲ್ಲಿ ಪ್ರದರ್ಶನ ಮಾಡಿ ಬಂದ ಹಣದಿಂದ ಕರ್ನಾಟಕದ ಸುಮಾರು 15-20 ಸೈನಿಕರಿಗೆ ಸಹಾಯಧನವನ್ನು ನೀಡಲು ನಿರ್ಧರಿಸಿದ್ದಾರೆ.

malpe-samarpana

ಅಗೋಸ್ತ್ 28 ರಂದು ಸಹಾಯ ಧನವನ್ನು ವಿತರಣೆ ಮತ್ತು ಯೋಧರಿಗೆ ಗೌರವ ನಮನ ಕಾರ್ಯಕ್ರಮ ಸಮರ್ಪಣಾ 2016 ವನ್ನು ಸಂಜೆ 5.30 ಕ್ಕೆ ಸರಿಯಾಗಿ ಅಯ್ಯಪ್ಪ ಮಂದಿರ ಮಲ್ಪೆಯಲ್ಲಿ ಸಮಾಜದ ಗಣ್ಯರನ್ನು ಒಳಗೊಂಡ ಸಭಾ ಕಾರ್ಯಕ್ರಮದಲ್ಲಿ ಸಹಾಯಧನವನ್ನು ವಿತರಿಸಲಾಗುವುದು. ಈ ಒಂದು ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಮುಖ ನಾಯಕರುಗಳು ಮತ್ತು ಮಾಜಿ ಸೈನಿಕರು ಆಗಮಿಸಲಿದ್ದಾರೆ.
ತಮ್ಮ ಜೀವ ಮತ್ತು ಆಸೆಗಳನ್ನು ತ್ಯಜಿಸಿ ದೇಶವನ್ನು ಕಾಯುತ್ತಿರುವ ವೀರ ಸೈನಿಕರಿಗೆ ಸಹಾಯ ಮಾಡುವವರು ಈ ದೂರವಾಣಿ ಸಂಖ್ಯೆಗೆ 9844544978, 9008111074 ಕರೆ ಮಾಡಿ ತಿಳಿಸುವಂತೆ ಕೋರಲಾಗಿದೆ.


Spread the love