ರಕ್ತ ಚಂದನ ಸಾಗಿಸಲು ಯತ್ನ ; ಐವರ ಬಂಧನ, ರೂ 2.19 ಕೋಟಿ ಮೌಲ್ಯದ ಸೊತ್ತು ವಶ

Spread the love

ರಕ್ತ ಚಂದನ ಸಾಗಿಸಲು ಯತ್ನ ; ಐವರ ಬಂಧನ, ರೂ 2.19 ಕೋಟಿ ಮೌಲ್ಯದ ಸೊತ್ತು ವಶ

ಮಂಗಳೂರು: ಬೆಲೆ ಬಾಳುವ ರಕ್ತಚಂದನವನ್ನು ಅನಧಿಕೃತವಾಗಿ  ಹಡಗಿನ ಮೂಲಕ ರಫ್ತು ಮಾಡಲು ಯತ್ನಿಸುತ್ತಿದ್ದ ಐವರನ್ನು ಪಣಂಬೂರು ಪೊಲೀಸರು ಮತ್ತು ರೌಡಿ ನಿಗ್ರಹ ದಳದ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

 

ಬಂಧಿತರನ್ನು ಪೆರ್ಮನ್ನೂರು ಕಲ್ಲಾಪು ನಿವಾಇಸ ಶೇಖ್ ತಬ್ರೇಝ್ (36), ಕಾವೂರು ನಿವಾಸಿ ರಾಕೇಶ್ ಶೆಟ್ಟಿ (44), ತೊಕ್ಕೊಟ್ಟು ನಿವಾಸಿ ಲೊಹೀತ್ (35), ಪೆರ್ಮನ್ನೂರು ನಿವಾಸಿ ಫಾರೂಕ್ (45) ಮತ್ತು ಹುಸೈನ್ ಕುಂಞ (46) ಎಂದು ಗುರುತಿಸಲಾಗಿದೆ.

ಬಂಧಿತರಿಂದ ರೂ 2 ಕೋಟಿ ಮೌಲ್ಯದ  4 ಸಾವಿರ ಕಿಲೊ ರಕ್ತ ಚಂದನ, ರೂ 10 ಲಕ್ಷ ಮೌಲ್ಯದ ಮಾರುತಿ ಬ್ರೀಜಾ ಕಾರು, ರೂ 6 ಲಕ್ಷ ಮೌಲ್ಯದ ರೆನಾಲ್ಟ್ ಪ್ಲಸ್ ಕಾರು, ರೂ 3 ಲಕ್ಷ ಮೌಲ್ಯದ ಟಾಟಾ ಎಸ್ ಟೆಂಪೋ ಹಾಗೂ ರೂ 30 ಸಾವಿರ ಮೌಲ್ಯದ 7 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದು, ಒಟ್ಟು ಮೌಲ್ಯ ರೂ 2 ಕೋಟಿ 19 ಲಕ್ಷ 30 ಸಾವಿರ ಆಗಿರುತ್ತದೆ.

 


Spread the love