ರಾಘವೇಂದ್ರರನ್ನು ಸೋಲಿಸಲು ಕಾಂಗ್ರೆಸಿಗೂ ಈಶ್ವರಪ್ಪನಿಗೂ ಸಾಧ್ಯವಿಲ್ಲ: ಅರಗ ಜ್ಞಾನೇಂದ್ರ

Spread the love

ರಾಘವೇಂದ್ರರನ್ನು ಸೋಲಿಸಲು ಕಾಂಗ್ರೆಸಿಗೂ ಈಶ್ವರಪ್ಪನಿಗೂ ಸಾಧ್ಯವಿಲ್ಲ: ಅರಗ ಜ್ಞಾನೇಂದ್ರ

ಉಡುಪಿ: ಬಂಡಾಯವಾಗಿ ಸ್ಪರ್ಧಿಸಿರುವ ಕೆ.ಎಸ್.ಈಶ್ವರಪ್ಪನವರಿಗೆ ನಾಮಪತ್ರ ವಾಪಸ್ಸು ಪಡೆಯಲು ಸ್ವಲ್ಪದಿನ ಅವಕಾಶ ಇದೆ. ಈಶ್ವರಪ್ಪಹಿಂದೆ ಸರಿದರೆ ತುಂಬಾ ಒಳ್ಳೆಯದಾಗುತ್ತದೆ. ಇಲ್ಲದಿದ್ದರೆ ಅವರ ನೆಲೆ ಏನು ಎಂಬುದು ಗೊತ್ತಾಗು ತ್ತದೆ. ಅಪಾರ ಅಭಿವೃದ್ಧಿ ಕೆಲಸ ಮಾಡಿರುವ ರಾಘವೇಂದ್ರರನ್ನು ಸೋಲಿಸಲು ಕಾಂಗ್ರೆಸಿಗೂ ಈಶ್ವರಪ್ಪನಿಗೂ ಸಾಧ್ಯವಿಲ್ಲ ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಆರೋಪಿಗಳ ಬಂಧನ ವಿಚಾರ ಕೇಳಿ ಸಮಾಧಾನವಾಗಿದೆ. ಇದೊಂದು ರೋಚಕವಾದ ತನಿಖೆಯಾಗಿದೆ. ನಾವು ನೆಮ್ಮದಿಯಿಂದ ಬದುಕಲು ಎನ್ಐಎ ಮತ್ತು ಪೊಲೀಸರೇ ಕಾರಣ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿ ಗಳನ್ನು ಅಭಿನಂದಿಸುತ್ತೇನೆ. ಈ ರೀತಿ ಕೃತ್ಯ ಎಸಗಿ ತಪ್ಪಿಸಬಹುದು ಎಂಬುದನ್ನು ಅಧಿಕಾರಿಗಳು ಸುಳ್ಳು ಮಾಡಿದ್ದಾರೆ ಎಂದರು.

ಈ ಪ್ರಕರಣದಲ್ಲಿ ತೀರ್ಥಹಳ್ಳಿಯ ಸಾಯಿಪ್ರಸಾದ್ ಎಂಬ ಯುವಕನನ್ನು ಸಾಕ್ಷಿ ಹೇಳಲು ಕರೆದಿದ್ದರು. ಆರೋಗ್ಯ ಮಂತ್ರಿ ಯಿಂದ ಹಿಡಿದು ಎಲ್ಲರೂ ತುದಿಗಾಲಲ್ಲಿ ನಿಂತು ಖಂಡಿಸಿದರು. ಆರ್ಎಸ್ಎಸ್, ಬಿಜೆಪಿ ಯುವಕರು ದೇಶದ್ರೋಹದ ಆಪಾದನೆಯಲ್ಲಿ ಒಳಗೊಂಡಿದ್ದಾರೆ ಎಂದರು. ಹಿಂದೂ ಯುವಕನ ಹೆಸರಲ್ಲಿ ಫೇಕ್ ಅಕೌಂಟ್ ಮಾಡಲಾಗಿತ್ತು. ಅದಕ್ಕಾಗಿ ಅವನನ್ನು ಪರಿಶೀಲಿಸಿ ತನಿಖೆ ಮಾಡಿ ವಾಪಸ್ ಕಳಿಸಿದ್ದಾರೆ ಎಂದು ಅವರು ತಿಳಿಸಿದರು.


Spread the love