ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಡಿ.ಜೆ.ಹಳ್ಳಿ ಪ್ರಕರಣ, ಡಗ್ಸ್ ಹಗರಣ ಸಾಕ್ಷಿ – ಸಲೀಂ ಅಹ್ಮದ್

Spread the love

ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಡಿ.ಜೆ.ಹಳ್ಳಿ ಪ್ರಕರಣ, ಡಗ್ಸ್ ಹಗರಣ ಸಾಕ್ಷಿ – ಸಲೀಂ ಅಹ್ಮದ್

ಉಡುಪಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪರಿಣಾಮವಾಗಿ ಡಿ.ಜೆ.ಹಳ್ಳಿ ಪ್ರಕರಣ, ಡಗ್ಸ್ ಹಗರಣಗಳು ಮೂಲಕ ರಾಜ್ಯದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ದೂರಿದರು.

ಅವರು ಭಾನುವಾರ ಉಡುಪಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠೀಯನ್ನು ಉದ್ದೇಶಿಸಿ ಮಾತನಾಡಿ ಸಾಂಕ್ರಾಮಿಕ ಕೊರೋನ ಚಿಕಿತ್ಸೆ ವಿಚಾರದಲ್ಲಿ ದೊಡ್ಡ ಹಗರಣ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಡಿಜೆಹಳ್ಳಿ ಮತ್ತು ಡ್ರಗ್ಸ್ ಜಾಲದ ಕಾರ್ಯಾಚರಣೆ ಇದಕ್ಕೆ ಸಾಕ್ಷಿ

ಡ್ರಗ್ಸ್ ಬೆಳವಣಿಗೆಯನ್ನು ಚರ್ಚೆಗೆ ತಂದು ಉಳಿದೆಲ್ಲಾ ವೈಫಲ್ಯ ಮರೆ ಮಾಚಿಸುವ ಯತ್ನ ನಡೆಯುತ್ತಿದೆ. ದಿಕ್ಕು ತಪ್ಪಿಸುವ ಯತ್ನದಲ್ಲಿ ರಾಜ್ಯ ಸರಕಾರದ ತಲ್ಲೀನ ಆಗಿದೆ. ಸಿಟಿ ರವಿಗೆ ಯಾರಿಂದ ಒತ್ತಡ ಇದೆ ಹೇಳಲಿ. ನೀವು ಸಿಎಂ ಅಲ್ಲ, ಗೃಹ ಸಚಿವ ಕೂಡಾ ಅಲ್ಲ. ಕಾಂಗ್ರೆಸ್ ಒತ್ತಡ ಯಾವತ್ತೂ ಹೇರಲ್ಲ. ಕೇಂದ್ರ ರಾಜ್ಯದಲ್ಲಿ ನಿಮ್ಮದೇ ಸರಕಾರ ಇದೆ ತನಿಖೆ ಮಾಡಿ. ತನಿಖೆಗೆ ಬೆಂಬಲ ಕೊಡುತ್ತೇವೆ. ಕೇವಲ ಹೇಳಿಕೆಯಿಂದ ವ್ಯವಸ್ಥೆ ಸರಿ ಮಾಡಲು ಸಾಧ್ಯವಿಲ್ಲ. ರಾಗಿಣಿ ಬಿಜೆಪಿಯ ಕಾರ್ಯಕರ್ತೆ. ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.

ನೆರೆ ಹಾವಳಿ ಪರಿಹಾರ ಬಂದಿಲ್ಲ. ನಮ್ಮ ರಾಜ್ಯದ ಎಂಪಿಗಳು ಇಲ್ಲಿ ಹುಲಿಯಂತೆ ವರ್ತಿಸುತ್ತೀರಿ. ಮೋದಿ ಮುಂದೆ ಬೆಕ್ಕಿನ ನಿಲ್ಲುತ್ತೀರಿ. ಮೊದಲು ಮಾತನಾಡಲು ಕಲಿಯಿರಿ. ರಾಜ್ಯದ ಹಿತಾಸಕ್ತಿ ಕಾಪಾಡಿ ಪಲಾಯನ ವಾದ ಮಾಡುದರಲ್ಲಿ ಕಾಲ ಕಳೆಯಬೇಡಿ ಎಂದರು.

ರಾಜ್ಯ ಸರಕಾರದ ಹಗರಣ, ವೈಫಲ್ಯ ವಿಚಾರದಲ್ಲಿ ಜೆಡಿಎಸ್ ಮೌನದ ಬಗ್ಗೆ ಅವರನ್ನೇ ಕೇಳಿ. ಯಡಿಯೂರಪ್ಪ ಕುಮಾರಸ್ವಾಮಿ ಭೇಟಿ ಬಗ್ಗೆ ಅವರೇ ಬಹಿರಂಗಪಡಿಸಲಿ ಎಂದರು.

ರಾಷ್ಟ್ರೀಯ ಕಾಂಗ್ರೆಸ್ ಸರ್ಜರಿ ನ್ಯಾಚುರಲ್ ಪ್ರಾಸೆಸ್. ಬದಲಾವಣೆ ಆಗುತ್ತಿರಬೇಕು. ಹೊಸಬರ ಆಗಮನ ಆಗಬೇಕು. ಹಿರಿಯರ ಮಾರ್ಗದರ್ಶನ ಜೊತೆಗಿರಬೇಕು ಎಂದರು.

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಮ್ಮ ಶಾಸಕ. ಅವರ ತಂದೆ ಕೂಡಾ ಕಾಂಗ್ರೆಸ್ ಮುಖಂಡ. ಅವರಿಗೆ ಕಾಂಗ್ರೆಸ್ ಮುಂದೆನೂ ಸಪೋರ್ಟ್ ಮಾಡುತ್ತದೆ. ಅವರು ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದರು.

ಜಮೀರ್ ವಿಚಾರದಲ್ಲಿ ಮಾಧ್ಯಮಗಳ ಮೂಲಕ ದಾರಿ ತಪ್ಪಿಸಲಾಗುತ್ತಿದೆ. ಯಾರು ತಪ್ಪು ಮಾಡಿದರೂ ಶಿಕ್ಷೆ ಆಗಬೇಕು. ಮೀಡಿಯಾ ಟ್ರಯಲ್ ಸರಿಯಲ್ಲ. ಡ್ರಗ್ಸ್ ಪೊಲಿಟಿಕಲ್ ಟ್ರಯಲ್ ಆಗಬಾರದು. ಬಿಜೆಪಿ ನಾಯಕರು ಪೊಲೀಸರ ತರ, ತನಿಖಾಧಿಕಾರಿಗಳ ತರ ವರ್ತಿಸುತ್ತಾರೆ. ಸ್ಟೇಟ್ ಮೆಂಟ್ ಸಾಕು, ಕೆಲಸ ಮಾಡಿ ಎಂದು ಸಲೀಂ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಲೆಕ್ಕಕೊಡಿ ಅಭಿಯಾನದೊಂದಿಗೆ ರಾಜ್ಯ ಸರಕಾರ ಕೋವಿಡ್ ಹೆಸರಿನಲ್ಲಿ ನಡೆಸಿರುವ ಭ್ರಷ್ಟಾಚಾರ ವನ್ನು ಜನರಿಗೆ ತಿಳಿಸುವ ಅಭಿಯಾನ ವನ್ನು ಹಮ್ಮಿಕೊಂಡಿದೆ. ರಾಜ್ಯಕ್ಕೆ ಜಿ.ಎಸ್ ಟಿ ಮೂಲಕ ಬರಬೇಕಾದ ಪಾಲು ಬಂದಿಲ್ಲ, ನೆರೆ ಪರಿಹಾರ ವಾಗಿ ಕಳೆದ ವರ್ಷ ಬರಬೇಕಾದ 50 ಸಾವಿರ ಕೋಟಿ ರೂ ನಷ್ಟ ಆಗಿತ್ತು. ಕೇಂದ್ರ ಸರಕಾರದಿಂದ ಕೇವಲ 1800 ಕೋಟಿ ನೆರವು ಮಾತ್ರ ಬಂದಿದೆ. ಈ ಬಾರಿ 10 ಸಾವಿರ ಕೋಟಿ ರೂ ನಷ್ಟ ಆಗಿದೆ.ಆದರೆ ಸರಕಾರ ಕೇವಲ 600ಕೋಟಿ ರೂ ನಷ್ಟ ಆಗಿದೆ ಎಂದು ಅಂದಾಜಿಸಿದ್ದಾರೆ. ಈ ಪರಿಹಾರ ಸಂತ್ರಸ್ತರಿಗೆ ದೊರೆತಿಲ್ಲ. ಸರಕಾರ ಈ ಬಗ್ಗೆ ಯಾವೂದೇ ಕ್ರಮ ಕೈ ಗೊಂಡಿಲ್ಲ. ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾನೂನು ತಿದ್ದುಪಡಿ ಮೊದಲಾದ ವಿಷಯಗಳ ಬಗ್ಗೆ ಈ ಸೆ.21ರಲ್ಲಿ ನಡೆಯುವ ಅಧಿವೇಶನದಲ್ಲಿ ಕಾಂಗ್ರೆಸ್ ಸದನದಲ್ಲಿ ಚರ್ಚಿಸಲಿದೆ ಎಂದು ಸಲೀಂ ಅಹಮ್ಮದ್ ಹೇಳಿದರು.

ಈ ವೇಳೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾದ ನಾರಾಯಣ ಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಉಪಾಧ್ಯಕ್ಷರಾದ ಮಂಜುನಾಥ ಭಂಡಾರಿ, ನಾಯಕರಾದ ಎಮ್ ಎ ಗಫೂರ್, ವೆರೋನಿಕಾ ಕರ್ನೆಲಿಯೊ, ಕಳ್ಳಿಗೆ ತಾರನಾಥ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು ಹಾಗೂ ಇತರರು ಉಪಸ್ಥಿತರಿದ್ದರು.


Spread the love