ರಾಮಕೃಷ್ಣ ಮಿಷನ್ ಸ್ವಚ್ಛತೆಗಾಗಿ ಜಾದೂ : ಜಾಗೃತಿ ಜಾಥಾ

Spread the love

ರಾಮಕೃಷ್ಣ ಮಿಷನ್ ಸ್ವಚ್ಛತೆಗಾಗಿ ಜಾದೂ : ಜಾಗೃತಿ ಜಾಥಾ

ಮಂಗಳೂರು: ರಾಮಕೃಷ್ಣ ಮಿಷನ್ ಕಳೆದೆರಡು ವರುಷಗಳಿಂದ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನವನ್ನು ಆಯೋಜಿಸುತ್ತಿದೆ. ಜನರಲ್ಲಿ ಸ್ವಚ್ಛತೆಯ ಭಾವನೆ ಮೂಡಿಸುವ ಸಲುವಾಗಿ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಚ್ಛತೆಯ ಜಾಗೃತಿಯನ್ನುಂಟು ಮಾಡಲು ಪ್ರಯತ್ನಿಸುತ್ತಿದೆ. ಮೂರನೇ ಹಂತದಲ್ಲಿ ಸುಮಾರು ಅರವತ್ತು ತಂಡಗಳು ಈ ಅಭಿಯಾನದಲ್ಲಿ ಕೈಜೋಡಿಸಿ ಸ್ವಚ್ಛ ಮಂಗಳೂರಿನ ವ್ಯಾಪಕತೆಯನ್ನು ವಿಸ್ತಾರಗೊಳಿಸಿವೆ. 3ನೇ ಹಂತದಲ್ಲಿ ಸುಮಾರು 400 ಸ್ವಚ್ಛತಾ ಅಭಿಯಾನಗಳನ್ನು ಯೋಜಿಸಲಾಗಿತ್ತು. ಇದೀಗ ನಿರಂತರವಾಗಿ23 ವಾರಗಳನ್ನು ಪೂರೈಸಿ, 260 ಅಭಿಯಾನಗಳನ್ನು ಪೂರ್ಣಗೊಳಿಸಿದೆ.

ಸ್ವಚ್ಛತೆಯ ಜೊತೆ ಜೊತೆಗೆ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿರುವುದು ಈ ಅಭಿಯಾನದ ವಿಶೇಷವಾಗಿದೆ. ಮಕ್ಕಳಿಗಾಗಿ ಕಲಾಶಿಬಿರಗಳು, ಸ್ವಚ್ಛ ಮನಸ್ಸು ಕಾರ್ಯಕ್ರಮಗಳು, ಕಾಲೇಜುಯುವಕರಿಗಾಗಿ ಸ್ವಚ್ಛತೆಯಕುರಿತ ಕಾರ್ಯಾಗಾರಗಳು, ಗೃಹಿಣಿಯರಿಗಾಗಿ ಸ್ವಚ್ಛ ಗೃಹ ಮತ್ತುಘನತ್ಯಾಜ್ಯ ನಿರ್ವಹಣೆಯಕುರಿತ ಮಾಹಿತಿ ಶಿಬಿರಗಳು, ಮನೆಮನೆ ಭೇಟಿ ನೀಡಿ ಸ್ವಚ್ಛತೆಯಜಾಗೃತಿಕಾರ್ಯ, ಸ್ವಚ್ಛ ಭಾರತ ಜಾಥಾಗಳು, ದೂರದರ್ಶನ, ರೇಡಿಯೋ ಕಾರ್ಯಕ್ರಮಗಳು ಹಾಗೂ ಪತ್ರಿಕೆಗಳ ಮೂಲಕ ಜನಮಾನಸದಲ್ಲಿ ಸ್ವಚ್ಛತೆಯಕುರಿತುಜಾಗೃತಿ ಮೂಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ.

ಈ ನಿಟ್ಟಿನಲ್ಲಿರಾಮಕೃಷ್ಣ ಮಿಷನ್ ಈ ಬಾರಿ ಸ್ವಚ್ಛತೆಗಾಗಿಜಾದೂ! ಎಂಬ ವಿನೂತನಜಾಗೃತಿಜಾಥಾಆಯೋಜಿಸುತ್ತಿದೆ. ಶ್ರೀಕುದ್ರೋಳಿ ಗಣೇಶ್ ಮತ್ತುತಂಡದವರಿಂದ ಸುಮಾರು30 ಪ್ರದರ್ಶನಗಳನ್ನು ನಿರಂತರವಾಗಿ ಹದಿನೈದು ದಿನಗಳ ಕಾಲ ನಗರದ ಸುತ್ತಮುತ್ತ್ಲ ಹಮ್ಮಿಕೊಂಡು, ಶುಚಿತ್ವದ ಮಹತ್ವವನ್ನುಜಾದೂಕಲೆಯತಂತ್ರಗಾರಿಕೆಯ ಮೂಲಕ ರಂಜನೀಯವಾಗಿ ತಿಳಿಸುವ ಪ್ರಯತ್ನವಿದು.

ಈ ಜಾದೂ ಪ್ರದರ್ಶನಕ್ಕಾಗಿ ಬಸ್ ಚಾಸಿಯನ್ನು ಬಳಸಿಕೊಂಡು ಟ್ಯಾಬ್ಲೋ ಮಾದರಿಯಲ್ಲಿ ವಾಹನವೊಂದನ್ನುರೂಪಿಸಲಾಗಿದೆ. ಇದರಲ್ಲಿಯೇ ವೇದಿಕೆ, ಧ್ವನಿವರ್ಧಕ, ದೂರದರ್ಶನ, ಹಾಗೂ ಜಾದೂ ಪ್ರದರ್ಶನಕ್ಕೆ ಬೇಕಾದ ಪರಿಕರಗಳನ್ನು ಇಟ್ಟುಕೊಳಲು ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಸಂಜೆ4:30 ರಿಂದ5:30 ಪ್ರಥಮ ಪ್ರದರ್ಶನ ಹಾಗೂ 6:30 ರಿಂದ7:30 ದ್ವಿತೀಯ ಪ್ರದರ್ಶನದಂತೆ ದಿನಂಪ್ರತಿಎರಡು ಪ್ರದರ್ಶನಗಳು ಜರುಗಲಿವೆ. ಈಗಾಗಲೇ ಅಲ್ಲಲ್ಲಿ ಮೂವತ್ತು ತಂಡಗಳಿಗೆ ಪ್ರಚಾರದ ಹಾಗೂ ಕಾರ್ಯಕ್ರಮದಆಯೋಜನೆಯಜವಾಬ್ದಾರಿಯನ್ನು ವಹಿಸಿಕೊಡಲಾಗಿದೆ. ಪ್ರತಿತಂಡ ಸುಮಾರುಎರಡುಸಾವಿರಜನರಿಗೆಕರಪತ್ರ ತಲುಪಿಸಿ ಆಹ್ವಾನಿಸಬೇಕಾಗಿ ಯೋಜಿಸಲಾಗಿದೆ. ಈ ಜಾದೂಅಭಿಯಾನವು ಮಂಗಳಾದೇವಿಯ ರಾಮಕೃಷ್ಣ ಮಿಷನ್ ನಲ್ಲಿ, ಎಪ್ರಿಲ್2, 2017ಭಾನುವಾರದಂದು ಸಂಪನ್ನಗೊಳ್ಳಲಿದೆ.

ಮಾರ್ಚ್19ರಂದು ಸಂಜೆ5 ಗಂಟೆ ಸುಮಾರಿಗೆ ಪಣಂಬೂರುಕಡಲತೀರದಲ್ಲಿ ಈ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಸ್ವಾಮಿಜಿತಕಾಮಾನಂದಜಿ ಸಾನಿಧ್ಯದಲ್ಲಿ ಮಂಗಳೂರಿನ ಮಹಾಪೌರರಾದ ಶ್ರೀಮತಿ ಕವಿತಾ ಸನಿಲ್ ಅವರುಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂಆರ್‍ಪಿಎಲ್‍ಡಿಜಿಎಂ ಶ್ರೀಹರೀಶ್ ಬಾಳಿಗಾ ಹಾಗೂ ಶ್ರೀಯತೀಶ್ ಬೈಕಂಪಾಡಿ ಭಾಗವಹಿಸಲಿದ್ದಾರೆ.


Spread the love