ರಾಷ್ಟ್ರೀಯ ವಿಪತ್ತು ಕಾಯಿದೆ ಉಲ್ಲಂಘನೆ ಆರೋಪ- ನಳಿನ್ ವಿರುದ್ದ ಐವಾನ್ ಡಿಸೋಜಾರಿಂದ ಪೊಲೀಸರಿಗೆ ದೂರು 

Spread the love

ರಾಷ್ಟ್ರೀಯ ವಿಪತ್ತು ಕಾಯಿದೆ ಉಲ್ಲಂಘನೆ ಆರೋಪ- ನಳಿನ್ ವಿರುದ್ದ ಐವಾನ್ ಡಿಸೋಜಾರಿಂದ ಪೊಲೀಸರಿಗೆ ದೂರು 

ಬೆಂಗಳೂರು: ರಾಷ್ಟ್ರೀಯ ವಿಪತ್ತು ಕಾಯ್ದೆ ಉಲ್ಲಂಘನೆ ವಿಚಾರವಾಗಿ ಸಾರ್ವಜನಿಕವಾಗಿ ಸುಳ್ಳು ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದಾರೆ.

ರಾಜ್ಯದ ಆಡಳಿತ ಪಕ್ಷದ ಅಧ್ಯಕ್ಷರು ಹಾಗೂ ಸಂಸತ್ ಸದಸ್ಯರಾದ  ನಳಿನ್ ಕುಮಾರ್ ಕಟೀಲ್ ರವರು ಕಾರ್ಯಕ್ರಮ ಒಂದರಲ್ಲಿ ಭಾಷಣ ಮಾಡಿ * ಸದರಿ ತಪ್ಪು ಭಾಷಣದಲ್ಲಿ  ಪ್ರಧಾನ ಮಂತ್ರಿಗಳಿಂದಾಗಿ ನಾವು ಕೇವಿಡ್ -19ರ ವೈರಸ್ನಿಂದ ಬದುಕಿ ಉಳಿದಿದ್ದೇವೆ ಎಂದು ತಿಳಿಸಿರುತ್ತಾರೆ. ಹಾಗಾದಲ್ಲಿ ಈ ರೋಗದಿಂದ ದೇಶಾದ್ಯಂತ ಸಾವಿಗೀಡಾದ ಸಾವಿರಾರು ಜನರ ಸಾವಿಗೆ జనే ಆಗಬೇಕಲ್ಲವೇ?” ಮುಂದುವರೆದು, ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸ್ವಾನವ ರೂಟೇಷನ್ ಹುದ್ದೆಯಾಗಿದ್ದು, ಮಾನ್ಯ ಸಂಸತ್ ಸದಸ್ಯರು ಇದನ್ನು ಉದ್ದೇಶ ಪೂರಕವಾಗಿಯೇ ಭಾರತ ಕಾಮಿಡಿ -19ರಲ್ಲಿ ಸಾಧಿಸಿದ ಸಾಧನೆಗಾಗಿ ನೀಡುತ್ತಾರೆ ಎಂದು ಈ ಹೇಳಿಕೆ ಅಕ್ಷಮ್ಯ ಅಪರಾಧವಾಗಿರುತ್ತದೆ, ಮತ್ತು ವಿಶ್ವಸಂಸ್ಥೆ ಮತ್ತು ಅಧೀನ ಸಂಸ್ಥೆಗಳ ನೈಜ ಉದ್ದೇಶವನ್ನು ತಿಂಚುವ ದುರುದ್ದೇಶವಾಗಿರುತ್ತದೆ. ಇದರಿಂದ ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತೆ ಆಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಕಲಂ.54ರಂತೆ ರೋಗದ ವಿರುದ್ಧ ಸಾರ್ವಜನಿಕ ತಮ್ಮ ಹೇಳಿಕೆ ನೀಡುವುದು, ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡುವಂತೆ ಯಾವುದೇ ಹೇಳಿಕೆ ನೀಡುವುದು ಕಾನೂನಿಗೆ ವಿರುದ್ಧವಾಗಿರುತ್ತದೆ ಮತ್ತು ಅಪರಾಧವಾಗಿರುತ್ತದೆ.

ಮೇಲಿನ ಕಾಯದಂತೆ ಸಂಸತ್ ಸದಸ್ಯರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಉಲ್ಲಂ.3, ಕೀಮಿನಲ್ ಅಪರಾಧವನ್ನು ಎಸಗಿರುತ್ತಾರೆ. ಆಡಳಿತ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಅಸಂಬದ ಹೇಳಿಕೆ ನೀಡಿ ಮೂಲಕ ವಿಶ್ವದಾದ್ಯಂತ ಹರಡಿರುವ ಕೋವಿಡ್ -1), ರೋಗದ ಬಗ್ಗೆ ಸುಳ್ಳು ಮಾಹಿತಿ ಹರಡುತ್ತಿರುವುದರಿಂದ ಅವರ ಮೇಲೆ ಸೂಕ್ತ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ಅವರು ವಿನಂತಿಸಿದ್ದಾರೆ.


Spread the love