ರಿಕ್ಷಾ ಚಾಲಕರಿಗೆ ನಿರಂತರ ಅನ್ಯಾಯತು.ರ.ವೇಯಿಂದ ಜಿಲ್ಲಾಧಿಕಾರಿ ಕಚೇರಿ ಚಲೋ  

Spread the love

ರಿಕ್ಷಾ ಚಾಲಕರಿಗೆ ನಿರಂತರ ಅನ್ಯಾಯತು.ರ.ವೇಯಿಂದ ಜಿಲ್ಲಾಧಿಕಾರಿ ಕಚೇರಿ ಚಲೋ  

ಮಂಗಳೂರು: ಮಂಗಳೂರು ನಗರ ವ್ಯಾಪ್ತಿ ಬಿಟ್ಟು ಉಳಿದ ಎಲ್ಲಾ ಪ್ರದೇಶವನ್ನು ಗ್ರಾಮಾಂತರ ಪ್ರದೇಶವೆಂದು ಪರಿಗಣಿಸಲು ಈ ಮೂಲಕ ಕೇಳಿಕೊಳ್ಳುತ್ತೇವೆ. ಆದುದರಿಂದ ಈ ತೊಂದರೆಯನ್ನು ನಿವಾರಿಸಲು ಕಾನೂನಿನಲ್ಲಿ ತಿದ್ದುಪಡಿಯನ್ನು ತರಬೇಕಾಗಿ ಒತ್ತಾಯಿಸುವ ಬೃಹತ್ ಹಕ್ಕೊತ್ತಾಯ ಪ್ರತಿಭಟನಾ ಸಭೆಯನ್ನು ದಿನಾಂಕ 18-12-2017ನೇ ಸೋಮವಾರ  ಬೆಳಿಗ್ಗೆ 11.00 ಗಂಟೆಗೆ ಸರಿಯಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಯೋಗೀಶ್ ಶೆಟ್ಟಿ ಜಪ್ಪುರವರು, ಗ್ರಾಮಾಂತರ ರಿಕ್ಷಾ ಚಾಲಕರಿಗೆ ನಿರಂತರ ಅನ್ಯಾಯವಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ನಾವು ಹಲವಾರು ಬಾರಿ ರಿಕ್ಷಾ ಚಾಲಕರ ಪರವಾಗಿ ಹೋರಾಟಗಳನ್ನು ಮಾಡಿ ಹಾಗೂ ಅವರ ಯೋಗಕ್ಷೇಮಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತೇವೆ. ಇದೀಗ ಗ್ರಾಮಾಂತರ ರಿಕ್ಷಾ ಚಾಳಕರು ಮಂಗಳೂರು ನಗರಕ್ಕೆ ನಿಷೇಧ ಹೇರಿರುವುದು ದೊಡ್ಡ ಅನ್ಯಾಯವಾಗಿರುತ್ತದೆ. ಹಲವಾರು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಾವು ಇವತ್ತು ಹೋರಾಟವನ್ನು ಹಮ್ಮಿಕೊಂಡಿರುತ್ತೇವೆ.

ಬೇಡಿಕೆಗಳು ಆದಷ್ಟು ಬೇಗ ಈಡೇರದಿದ್ದಲ್ಲಿ ಮುಂದಿ ದಿನಗಳಲ್ಲಿ ರಿಕ್ಷಾ ಬಂದ್‍ಗೆ ಕರೆ ನೀಡಲಿದ್ದೇವೆ ಎಂದು ಹೇಳಿದರು. ತು,ರ.ವೇ ಕೇಂದ್ರೀಯ ಮಂಡಳಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ರಹೀಂ ಕುತ್ತಾರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ತು.ರ.ವೇ ಮಂಗಳುರು ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸಿರಾಜ್ ಅಡ್ಕರೆ ಮಾತನಾಡಿ ರಿಕ್ಷಾ ಚಾಲಕರು ರಾತ್ರಿ ಹಗಲೆನ್ನದೆ ಜನರ ಸೇವೆಗೆ ಲಭ್ಯವಾಗುತ್ತಿದ್ದು, ನಿಜವಾದ ಸಮಾಜ ಸೇವಕರಾಗಿದ್ದಾರೆ. ಈ ರಿಕ್ಷಾ ಚಾಲಕರನ್ನು ನಗರ ಹಾಗೂ ಗ್ರಾಮಾಂತರವೆಂದು ವಿಂಗಡಿಸಿ ಅವರ ನಡುವೆ ವೈಷಮ್ಯ ಸೃಷ್ಠಿ ಮಾಡುತ್ತಿರುವುದು ಸರಿಯಲ್ಲ. ನಮಗೆ ಎಲ್ಲಾ ರಿಕ್ಷಾ ಚಾಲಕರು ಸಮಾನರು ಆದರೆ ಇದೀಗ ಗ್ರಾಮಾಂತರ ರಿಕ್ಷಾ ಚಾಲಕರಿಗೆ ನಗರ ಪ್ರವೇಶವನ್ನು ನಿರಾಕರಿಸಿ ಜಿಲ್ಲಾಡಳಿತ ರಿಕ್ಷಾ ಚಾಲಕರಿಂದ ಅವರ 1 ವಾರದ ಅಥವಾ 1ತಿಂಗಳಿನ  ದುಡಿಮೆಯ ಹಣವನ್ನು ದಂಡದ ರೂಪದಲ್ಲಿ ವಸೂಲಿ ಮಾಡುತ್ತಿರುವುದು ಅಕ್ಷಮ್ಯವಾಗಿದೆ ಆದಷ್ಟು ಬೇಗ ರಿಕ್ಷಾ ಚಾಲಕರ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದರು.  ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟು ಉಳ್ಳಾಲ ದೇರಳಕಟ್ಟೆ ಸೋಮೇಶ್ವರ, ಕೋಟೆಕಾರ್, ಕುತ್ತಾರ್, ಕೊಣಾಜೆ, ಮುಡಿಪು, ಬೋಳ್ಯಾರ್, ಬಿ.ಸಿ ರೋಡ್, ಫರಂಗಿಪೇಟೆ, ಒಳಚ್ಚಿಲ್, ವಾಮಂಜೂರು, ಮಂಗಳಜ್ಯೋತಿ, ನೀರುಮಾರ್ಗ, ಕಲ್ಪನೆ ಮುಂತಾದ ಪ್ರದೇಶಗಳು ಮಂಗಳೂರು ನಗರಕ್ಕೆ ಅತ್ಯಂತ ಸಮೀಪದಲ್ಲಿದ್ದು, ಈ ಎಲ್ಲಾ ಪ್ರದೇಶಗಳು ನಗರ ಪಾಳಿಕೆಯಷ್ಟೇ ಜನಸಂಖ್ಯೆಯನ್ನು ಹೊಂದಿಕೊಂಡಿದೆ.

ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 15,000ಕ್ಕಿಂತ ಹೆಚ್ಚು ರಿಕ್ಷಾಗಳು ಬಾಡಿಗೆ ಮಾಡುತ್ತಿದ್ದು, ಮೇಲಿನ ಎಲ್ಲಾ ಪ್ರದೇಶದ ಜನರ ಪ್ರಮುಖ ಖರೀದಿ, ವೈದ್ಯಕೀಯ ಸೇವೆ, ಶಾಲಾ ಕಾಲೇಜುಗಳಿಗೆ ಮಂಗಳೂರು ನಗರವನ್ನೇ ಅವಲಂಬಿಸಿಕೊಂಡಿರುವುದರಿಂದ “ಅನೇಕ ಪ್ರಯಾಣಿಕರು ರಿಕ್ಷಾ ಮೂಲಕ ಮಂಗಳೂರು ನಗರಕ್ಕೆ ತುರ್ತು ಸೇವೆಗಾಗಿ ಬರುವವರಿಗೆ ನಗರ ಪ್ರದೇಶದಲ್ಲಿ ಬಿಟ್ಟು ಹೋಗಲು ಈ ಹಿಂದೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಮ್ಮುಖದಲ್ಲಿ ನಗರದ ಸಭೆಯಲ್ಲಿ ಗ್ರಾಮಾಂತರ ಪ್ರದೇಶದ ರಿಕ್ಷಾಗಳು ನಗರ ಪ್ರದೇಶಕ್ಕೆ ಬಾಡಿಗೆ ತರಬಹುದು. ಆದರೆ ರಿಕ್ಷಾ ನಿಲ್ದಾಣದಲ್ಲಿ ನಿಂತು ಬಾಡಿಗೆ ಮಾಡುವಂತಿಲ್ಲ” ಎಂಬ ಷರತ್ತಿನೊಂದಿಗೆ ಗ್ರಾಮಾಂತರ ಮತ್ತು ನಗರ ಎಂಬ ಎರಡು ವಲಯಗಳನ್ನಾಗಿ ಮಾಡಿ ಬಾಡಿಗೆ ಮಾಡುವ ಪ್ರದೇಶವನ್ನು ನಿಗದಿಪಡಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಂದರ್ಭದಲ್ಲಿ ತೊಕ್ಕೊಟ್ಟಿನಿಂದ ಆಸ್ಪತ್ರೆಗೆ ರೋಗಿಗಳನ್ನು ಕರೆದು ತರುವ ಸಂದರ್ಭದಲ್ಲಿ ಪೋಲೀಸರು ತಡೆದು ನಿಲ್ಲಿಸಿ ಕೇಸುಗಳನ್ನು ದಾಖಲು ಮಾಡುತ್ತಿದ್ದಾರೆ. ಈ ಬಗ್ಗೆ ಮೇಲಿನ ವಿವರಣೆ ನೀಡಿದರೆ ಅದನ್ನು ಆದೇಶ ರೂಪದಲ್ಲಿ ನೀಡುವಂತೆ ಕೇಳತ್ತಾರೆ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೊತೆ ನಮ್ಮ ರಿಕ್ಷಾ ಚಾಲಕರು ಭೇಟಿ ಮಾಡಿ ಚರ್ಚೆ ಮಾಡಿದಾಗ ಅಧಿಕಾರಿಗಳು ಸಹ ಇದು ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ನೋಟಿಫಕೇಶನ್‍ನಲ್ಲಿ ಮೇಲಿನ ಅಂಶವನ್ನು ಸೇರಿಸಬಹುದಾಗಿದೆ ಎಂದು ಅಭಿಪ್ರಾಯವನ್ನು ನೀಡಿರುತ್ತಾರೆ. ಮೇಲಿನ ನಿಯಮವನ್ನು ಆದೇಶ ರೂಪದಲ್ಲಿ ನೀಡದೆ ಇದ್ದರೆ ರಿಕ್ಷಾ ಚಾಲಕರಿಗೆ ಎಲ್ಲಾ ಸಂದರ್ಭಗಳಲ್ಲಿಯೂ ಪೋಲೀಸ್ ಮತ್ತು ಇತರ ಅಧಿಕಾರಿಗಳ ಬಲೆಗೆ ಬಿದ್ದು ದುಡಿದ ದುಡಿಮೆಯನ್ನು ದಂಡ ಪಾವತಿಸುವುದಕ್ಕೆ ಮತ್ತು ರಿಕ್ಷಾ ಚಾಲಕರಿಗೆ ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ. ನಗರಕ್ಕೆ ಆರ್.ಟಿ.ಒ ಕೆಲಸಗಳಿಗಾಗಿ ಗ್ಯಾಸ್ ತುಂಬಿಸಲಿಕ್ಕಾಗಿ ಮತ್ತು ಗ್ಯಾರೇಜಿಗಾಗಿ, ಬಿಡಿಭಾಗಗಳ ಖರೀದಿಗಾಗಿ ಗ್ರಾಮಾಂತರ ರಿಕ್ಷಾಗಳನ್ನು ನಗರ ಪ್ರದೇಶಕ್ಕೆ ತರಬೇಕಾದ ಅನಿವಾರ್ಯತೆ ಇದೆ. ಆದರೆ ತುರ್ತು ಸಂದರ್ಭದಲ್ಲಿ ಬಾಡಿಗೆಯನ್ನು ತಂದು ಬಿಡಲು ಅವಕಾಶವಿಲ್ಲ ಎಂದಾದರೆ ಸಾರ್ವಜನಿಕರಿಗೆ ಯಾವ ರೀತಿಯ ಉತ್ತರವನ್ನು ನೀಡಬೇಕೆಂದು ಪ್ರಶ್ನೆಯಾಗಿ ಉಳಿದಿದೆ.

ಬೇಡಿಕೆಗಳು:1. ಗ್ರಾಮಾಂತರ ರಿಕ್ಷಾಗಳನ್ನು ನಗರ ಪ್ರವೇಶಕ್ಕೆ ನಿಷೇಧ ಹೇರಿರುವ ಜಿಲ್ಲಾಡಳಿತದ ಆದೇಶವನ್ನು ಹಿಂಪಡೆಯಬೇಕು.2. ಬಾಡಿಗೆ ಪರವಾನಿಗೆಯನ್ನು ಪುನರ್ ಪರಿಶೀಲಿಸಬೇಕು.3. ರಿಕ್ಷಾ ಚಾಲಕರಿಗೆ ನೀಡುವ ಬ್ಯಾಡ್ಜ್ ಪರ್ಮಿಟಿಗೆ ವಿಧಿಸಿದ ಕನಿಷ್ಠ ವಿಧ್ಯಾರ್ಹತೆಯ ಮಾನ ದಂಡವನ್ನು ವೈಜ್ಞಾನಿಕವಾಗಿ ರೂಪಿಸಬೇಕು.4. ರಿಕ್ಷಾ ಚಾಲಕರಿಂದ ಪಡೆಯುತ್ತಿರುವ ಅಧಿಕ ಮೊತ್ತದ ವಾರ್ಷಿಕ ಇನ್‍ಸೂರೆನ್ಸ್ ಪ್ರೀಮಿಯಂ ಹಣವನ್ನು ಕಡಿತಗೊಳಿಸಬೇಕು.5. ರಿಕ್ಷಾ ಚಾಲಕರು ರಾತ್ರಿ ಹಗಲೆನ್ನದೆ ಸಾರ್ವಜನಿಕರ ಸೇವೆಗೆ ಲಭ್ಯವಾಗುತ್ತಿದ್ದು ಇವರಿಗೆ ಸರಕಾರ ಸೂಕ್ತ ಭದ್ರತೆಯನ್ನು ಒದಗಿಸಬೇಕು.

ಪ್ರತಿಭಟನೆಯಲ್ಲಿ ತು.ರ.ವೇ ಕೇಂದ್ರೀಯ ಮಂಡಳಿ ಕೋಶಾಧಿಕಾರಿ ಅಬ್ದುಲ್ ರಶೀದ್ ಜಪ್ಪು, ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಆನಂದ್ ಅಮೀನ್ ಅಡ್ಯಾರ್,  ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಜ್ಯೋತಿಕ ಜೈನ್, ಯುವ ಘಟಕದ ಜಿಲ್ಲಾಧ್ಯಕ್ಷರಾದ ಹರೀಶ್ ಶೆಟ್ಟಿ, ರಕ್ಷಿತ್ ಬಂಗೇರ ಕುಡುಪು, ವಿದ್ಯಾ ಯು ಜೋಗಿ, ಅಬ್ದುಲ್ ರಹಿಮಾನ್ ಉಳ್ಳಾಲ,  ಪ್ರಕಾಶ್ ಪಿ.ಬಿ, ರೇಷ್ಮಾ ಉಳ್ಳಾಲ್, ಭೂಷನ್ ಕುಲಾಲ್, ನಿಶಾದ್ ಎಮ್ಮೆಕೆರೆ, ಪ್ರಸಾದ್, ನಾಗರಾಜ್ ಕುದ್ರೋಳಿ, ಸಾಧಿಕ್ ಅಡ್ಕರೆ, ಗಂಗಾಧರ್ ಅತ್ತಾವರ, ಚಂದ್ರಹಾಸ ನೀರುಮಾರ್ಗ, ರಜಾಕ್, ಸಂತೋಷ್, ಮುಂತಾದವರು ಉಪಸ್ಥಿತರಿದ್ದರು.


Spread the love