ರಿಕ್ಷಾ ಚಾಲಕರು ಸದಾ ಸಾಮಾನ್ಯ ಜನರ ಆಪತ್ಭಾಂಧವರು: ಪ್ರಮೋದ್ ಮಧ್ವರಾಜ್

Spread the love

ರಿಕ್ಷಾ ಚಾಲಕರು ಸದಾ ಸಾಮಾನ್ಯ ಜನರ ಆಪತ್ಭಾಂಧವರು: ಪ್ರಮೋದ್ ಮಧ್ವರಾಜ್

ಉಡುಪಿ: ರಿಕ್ಷಾ ಚಾಲಕರು ಸದಾ ಸಾಮಾನ್ಯ ಜನರ ಆಪತ್ಭಾಂಧವರಾಗಿದ್ದು ಯಾವುದೇ ಸಮ್ಮಸ್ಯೆ ಕಾಡಿದಾಗ ಮೊದಲು ಅವರನ್ನು ನೆನಪಿಸಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಹಾಗೂ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಮಂಗಳವಾರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರುಗೊಂಡಿದ್ದ ಕೊಳಲಗಿರಿ ರಿಕ್ಷಾ ನಿಲ್ದಾಣದ ಅಭಿವೃದ್ಧಿ ಕಾಮಗಾರಿಯು ಅಂದಾಜು 2 ಲಕ್ಷದಲ್ಲಿ ನಿರ್ಮಾಣಗೊಂಡಿದ್ದು ಇದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಯಾವುದೇ ಒಂದು ಅಫಘಾತ ಸಂಭವಿಸಿದ್ದಲ್ಲಿ ಘಟನಾ ಸ್ಥಳಕ್ಕೆ ಅಂಬುಲೆನ್ಸ್ ಬರುವ ಮೊದಲೇ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವ ಮೊದಲ ಕೆಲಸವನ್ನು ಮಾಡುವವರು ಆಟೋ ಚಾಲಕರು. ಹಿಂದೆಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದರೆ ಅಂತವರು ಕಾನೂನಿನ ಸಮಸ್ಯೆಯನ್ನು ಅನುಭವಿಸಬೇಕಾಗಿತ್ತು ಆದರೆ ಈಗ ಸುಪ್ರಿಂ ಕೋರ್ಟ್ ಮತ್ತು ಸರಕಾರಗಳು ಈ ನಿಟ್ಟಿನಲ್ಲಿ ಗಮನ ಹರಿಸಿ ಯಾವುದೇ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದರೆ ಪೋಲಿಸರು ತೊಂದರೆ ಕೊಡದಂತೆ ಕಾನೂನನ್ನು ಸಹ ನಿರ್ಮಾಣ ಮಾಡಲಾಗಿದೆ. ಅಲ್ಲದೆ ನಮ್ಮ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಯಾವುದೇ ಗಾಯಳುವನ್ನು ಆಸ್ಪತ್ರೆಗೆ ಸೇರಿಸದರೆ ಆತನ ಮೂರು ದಿನದ ವರೆಗಿನ ಆಸ್ಪತ್ರೆಯ ಖರ್ಚನ್ನು ಸರಕಾರವೇ ಭರಿಸುವ ಹರೀಶ್ ಸಾಂತ್ವಾನ ಯೋಜನೆಯನ್ನು ಜಾರಿಗೆ ತಂದಿತ್ತು.

ರಿಕ್ಷಾ ಚಾಲಕರು ಶ್ರಮಜೀವಿಗಳಾಗಿದ್ದು ಅವರ ಸಮಸ್ಯೆಗೆ ಸದಾ ಸ್ಪಂದಿಸುವ ಕೆಲಸವನ್ನು ನಾನು ಮಾಡಿಕೊಂಡು ಬಂದಿದ್ದು , ತನ್ನ ಸತತ ಪ್ರಯತ್ನದಿಂದ ರಿಕ್ಷಾ ಚಾಲಕರಿಗೆ ನಿಲ್ದಾಣವನ್ನು ಕಟ್ಟಲು ಶಾಸಕರ ನಿಧಿಯನ್ನು ಬಳಸಿಕೊಳ್ಳಲು ಅವಕಾಶವಾಗುವಂತೆ ಸರಕಾರದಿಂದ ಆದೇಶ ಮಾಡಿದರ ಪರಿಣಾಮ ಇಂದು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ರಿಕ್ಷಾ ನಿಲ್ದಾಣಗಳು ಶಾಸಕರ ಅನುದಾನದಿಂದ ನಿರ್ಮಾಣವಾಗಲು ಸಾಧ್ಯವಾಗಿದೆ. ಇದರಿಂದ ಕೇವಲ ಉಡುಪಿ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಈ ಅದೇಶ ರಿಕ್ಷಾ ಚಾಲಕರಿಗೆ ಉಪಯೋಗವಾಗುವಂತೆ ಮಾಡಿದ್ದೇನೆ ಎಂದರು.


Spread the love