ರೆಂಜಲಾಡಿ ಜಮಾತ್ ನ ಎಲ್ಲಾ ಮನೆಗಳಿಗೆ 3ನೇ ಹಂತದ ರಂಜಾನ್ ಕಿಟ್ ವಿತರಿಸಿದ ಟೀಮ್ ಬಿ-ಹ್ಯೂಮನ್

Spread the love

ರೆಂಜಲಾಡಿ ಜಮಾತ್ ನ ಎಲ್ಲಾ ಮನೆಗಳಿಗೆ 3ನೇ ಹಂತದ ರಂಜಾನ್ ಕಿಟ್ ವಿತರಿಸಿದ ಟೀಮ್ ಬಿ-ಹ್ಯೂಮನ್

ಮಂಗಳೂರು :ಈ ಪುಣ್ಯ ರಂಜಾನ್ ತಿಂಗಳಿನಲ್ಲಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ನಿರ್ಗತಿಕ, ಬಡ ಅರ್ಹ ಕುಟುಂಬಗಳಿಗೆ ರಂಜಾನ್ ಕಿಟ್ ವಿತರಣಾ ಯೋಜನೆ ಹಮ್ಮಿಕೊಂಡಿದ್ದ ಟೀಮ್ ಬಿ-ಹ್ಯೂಮನ್ ಮಂಗಳೂರು, ಜಿಲ್ಲಾ NGO ಕಾರ್ಡಿನೇಷನ್ ಸಹಯೋಗದೊಂದಿಗೆ ಇಂದು ಪುತ್ತೂರು ತಾಲೂಕಿನ ರೆಂಜಲಾಡಿ ಜಮಾತ್ ನ ಎಲ್ಲಾ ಕುಟುಂಬಗಳಿಗೆ 3ನೇ ಹಂತದ ರಂಜಾನ್ ಕಿಟ್ ವಿತರಣೆ ಕಾರ್ಯ ನಡೆಸಿತು. *ಈ ವಿತರಣೆಯಿಂದ ತಾಲೂಕಿನಲ್ಲಿ ಈ ವರೆಗೆ 300 ರಂಜಾನ್ ಕಿಟ್ ವಿತರಣೆ ಕಾರ್ಯ ನಡೆಸಿದಂತಾಗಿದೆ.

ಆರ್ಥಿಕವಾಗಿ ಹಿಂದುಳಿದ, ತಾಲೂಕಿನ ಕೆಲವು ಜಮಾತಿನಲ್ಲಿ ಯಾವುದೇ ರೀತಿಯ ರಂಜಾನ್ ಕಿಟ್ ಸಿದ್ಧತೆ ನಡೆಸದ, ಯಾರಿಂದಲೂ ಕಿಟ್ ಸಿಗದ ಜಮಾತನ್ನು ಪರಿಗಣಿಸಿ ಈ ಕಿಟ್ ವಿತರಣೆ ನಡೆಸಿದೆ. ಈ ಸಂಕಷ್ಟದ ಸಮಯದಲ್ಲಿ ಹಲವಾರು ಕುಟುಂಬಗಳಿಗೆ ಕಿಟ್ ನೀಡಿ ಸಹಕರಿಸಿದ ಸಂಸ್ಥೆಯು ಜನ ಮೆಚ್ಚುಗೆ ಪಡೆದಿದೆ .*
ಕಾರ್ಯಕ್ರಮವನ್ನು ರೆಂಜಲಾಡಿ ಜುಮಾ ಮಸ್ಜಿದ್ ಅಧ್ಯಕ್ಷ ಹುಸೈನ್ ದಾರಿಮಿ ದುಆ ಮೂಲಕ ಚಾಲನೆ ನೀಡಿದರು.

ಜಿಲ್ಲೆಯ NGO ಕಾರ್ಡಿನೇಷನ್ ಮುಖ್ಯಸ್ಥ ಹಾಗೂ ಹಿದಾಯ ಫೌಂಡೇಶನ್ ಸ್ಥಾಪಕಾಧ್ಯಕ್ಷ ಎಚ್.ಕೆ ಕಾಸಿಂ ಅಹ್ಮದ್ ಮಾತನಾಡಿ ಸಮುದಾಯವು ಸಬಲೀಕರಣ ಕೊಳ್ಳಬೇಕಿದೆ. ಈ ಕಾರ್ಯದಲ್ಲಿ ಪ್ರತೀ ಜಮಾತ್ ನ ಪಾತ್ರವು ಬಹಳ ಪ್ರಾಮುಖ್ಯತೆಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಸಂಘ ಸಂಸ್ಥೆಗಳು ಜಮಾತ್ ಕಮೀಟಿಯೊಂದಿಗೆ ಕೈಜೋಡಿಸಿ ಒಂದು ನಿರ್ದಿಷ್ಟ ಗುರಿಯನ್ನು ಇಟ್ಟು ಅಭಿವೃದ್ಧಿ ಕೆಲಸ ಕಾರ್ಯ ನಡೆಸುವುದು ಅನಿವಾರ್ಯವಾಗಿದೆ. ಎಲ್ಲರೂ ಜೊತೆಯಾಗಿ ಸಮನ್ವಯದ ಮೂಲಕ ಕೆಲಸ ಕಾರ್ಯ ಮಾಡಿದರೆ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕತೆಯಲ್ಲಿ ಮುಂದುವರಿಯಲು ಸಾಧ್ಯವಾಗಲಿದೆ ಎಂದು ಹೇಳಿದರು.

ಬಿ-ಹ್ಯೂಮನ್ ಸ್ಥಾಪಕ ಆಸೀಫ್ ಡೀಲ್ಸ್, ಅಶ್ರಫ್ ಐನಾ, ಅಲ್ತಾಫ್, ಸಲೀಮ್ ಯು.ಬಿ ಯೂತ್ ಕಾಂಗ್ರೆಸ್, ಶಿಯಾ ಡೀಲ್ಸ್, ಶಕೂರ್ ಹಾಜಿ ಕಲ್ಲೇಗ ಹಿದಾಯ, ‘ಇ-ಫ್ರೆಂಡ್ಸ್ ನ ಇಮ್ತಿಯಾಜ್ ಪಾರ್ಲೆ, ಕೂರ್ಡುರಸ್ತೆ ಜುಮಾ ಮಸೀದಿ ಅಧ್ಯಕ್ಷ ಪಿ.ಕೆ ಮಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.


Spread the love