ಲಾಕ್ ಡೌನ್; ಬೆಂಗಳೂರಿನಲ್ಲಿ ಸಿಕ್ಕಿ ಹಾಕಿಕೊಂಡ ಮಂಗಳೂರಿನ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ ಖಾದರ್

Spread the love

ಲಾಕ್ ಡೌನ್; ಬೆಂಗಳೂರಿನಲ್ಲಿ ಸಿಕ್ಕಿ ಹಾಕಿಕೊಂಡ ಮಂಗಳೂರಿನ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ ಖಾದರ್

ಮಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ತನ್ನ ಮನೆಗೆ ಬರಲಾಗದೇ ಬೆಂಗಳೂರಿನಲ್ಲಿ ಸಿಕ್ಕಿ ಹಾಕಿಕೊಂಡ ಮಂಗಳೂರು ಮೂಲದ ಯುವತಿಯನ್ನು ಮಾಜಿ ಸಚಿವ ಯು.ಟಿ ಖಾದರ್, ತನ್ನ ಕಾರಿನಲ್ಲಿ ಮಂಗಳೂರಿಗೆ ಕರೆತಂದು ಯುವತಿ ಮನೆಗೆ ಸೇಫ್ ಆಗಿ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಇಟಲಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಂಗಳೂರು ಕುಳಾಯಿ ನಿವಾಸಿ ಶಿವರಾಮ್ ಭಟ್ ಪುತ್ರಿ ಮಧು ಭಟ್ ಮಾರ್ಚ್ 22ರ ಕೊನೆಯ ವಿಮಾನದಲ್ಲಿ ಮಂಗಳೂರು ತಲುಪಿದ್ದರು.ನಂತರ ಸುಮಾರು 15 ದಿನಗಳ ಕಾಲ ದೆಹಲಿಯಲ್ಲಿ ಕ್ವಾರಂಟೈನ್ ಮುಗಿಸಿ ವಿಶೇಷ ಬಸ್ ಮೂಲಕ ಬೆಂಗಳೂರು ತಲುಪಿದ್ದರು.

ನಂತರ ಬೆಂಗಳೂರಿನಿಂದ ಮಂಗಳೂರು ತಲುಪಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಇತರರೊಂದಿಗೆ ಶ್ರಮಿಸಿದರೂ ಸ್ಪಂದನೆ ದೊರಕದ ಹಿನ್ನಲೆಯಲ್ಲಿ ಅಡ್ವೊಕೇಟ್ ಅರುಣ್ ಬಂಗೇರಾ ರವರ ಮೂಲಕ ಶಾಸಕ ಯು.ಟಿ.ಖಾದರ್ ರವರನ್ನು ಸಂಪರ್ಕಿಸಿದ್ದರು.

ತಕ್ಷಣ ಸ್ಪಂದಿಸಿದ ಶಾಸಕ ಯು.ಟಿ.ಖಾದರ್ ಸ್ವತಹ ತಮ್ಮ ವಾಹನದಲ್ಲೇ ವಿಧ್ಯಾರ್ಥಿನಿಯನ್ನು ಬೆಂಗಳೂರಿನಿಂದ ಮಂಗಳೂರಿ ಕರೆದುಕೊಂಡು ಮನೆ ತಲುಪಿಸಿದರು. ಖಾದರ್ ಅವರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


Spread the love