ಲಾಕ್ ಡೌನ್ ಸಡಿಲಿಕೆ –ಜಿಲ್ಲೆಯಲ್ಲಿ ಬೆ. 7ರಿಂದ 11 ಗಂಟೆಯ ವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ, ಬೇಕಾಬಿಟ್ಟಿ ಓಡಾಡುವಂತಿಲ್ಲ – ಡಿಸಿ ಜಗದೀಶ್

Spread the love

ಲಾಕ್ ಡೌನ್ ಸಡಿಲಿಕೆ –ಜಿಲ್ಲೆಯಲ್ಲಿ ಬೆ. 7ರಿಂದ 11 ಗಂಟೆಯ ವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ, ಬೇಕಾಬಿಟ್ಟಿ ಓಡಾಡುವಂತಿಲ್ಲ – ಡಿಸಿ ಜಗದೀಶ್

ಉಡುಪಿ: ರಾಜ್ಯ ಸರಕಾರ ಲಾಕ್ಡೌನ್ ಸಡಿಲ ಮಾಡಿರುವುದು ಆರ್ಥಿಕ ಪುನಶ್ಚೇತನಕ್ಕಾಗಿ ಲಾಕ್ಡೌನ್ ಸಡಿಲಿಕೆ ಆಗಿದೆ ಎಂದು ಸ್ವೇಚ್ಛಾಚಾರ ಮಾಡಬೇಡಿ ಮೇ 3ರವರೆಗೆ ಕಾನೂನು ಪಾಲನೆ ಮಾಡುತ್ತಾ ಜಿಲ್ಲಾಡಳಿತದ ಜೊತೆ ಸಹಕರಿಸಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿಲ್ಲೆಯ ಜನತೆಯಲ್ಲಿ ಜಿ ಜಗದೀಶ್ ಮನವಿ ಮಾಡಿದ್ದಾರೆ.

ಈ ಬಗ್ಗೆ ಅವರು ಮಂಗಳವಾರ ವೀಡಿಯೋ ಸಂದೇಶ ಬಿಡುಗಡೆ ಮಾಡಿದ್ದು , ಉಡುಪಿ ಜಿಲ್ಲೆಯ ಜನ ಗ್ರೀನ್ ಝೋನ್ ಗಾಗಿ ಹಾತೊರೆಯುತ್ತಿದ್ದಾರೆ ಗ್ರೀನ್ ಜೋನ್ ವ್ಯಾಪ್ತಿಯ ಎಲ್ಲಾ ಕೆಲಸಗಳು ನಾಳೆಯಿಂದ ಆರಂಭಗೊಳ್ಳಲಿವೆ. ಆದರೆ ಗ್ರೀನ್ ಜೋನ್ ಎಂದು ಬೇಕಾಬಿಟ್ಟಿ ಓಡಾಡುವಂತಿಲ್ಲ ಮೇ 3ರ ತನಕ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಯಲಿದೆ. ವಿನಾಯತಿ ಇರುವವರು ಸಂಬಂಧಪಟ್ಟ ಪಾಸ್ ಜೊತೆಯಲ್ಲಿ ಇರಿಸಿಕೊಂಡೇ ಓಡಾಡಬೇಕು ಅನಗತ್ಯವಾಗಿ ತಿರುಗಾಡುವ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿರುವ ಅವರು ಕಾನೂನು ಉಲ್ಲಂಘನೆ ಮಾಡುವುದು ಕಂಡುಬಂದರೆ ಕೇಸ್ ಮಾಡಲಾಗುವುದು

ಚಿನ್ನದ ಮಳಿಗೆಗಳು ಸಲೂನ್ ಮತ್ತು ಬ್ಯೂಟಿಪಾರ್ಲರ್ ಗಳಿಗೆ ಅವಕಾಶವಿಲ್ಲ, ಹೋಟೆಲುಗಳಲ್ಲಿ ಪಾರ್ಸೆಲ್ ನೀಡಲು ಮಾತ್ರ ಅವಕಾಶವಿದೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಫ್ಯಾಕ್ಟರಿಗಳನ್ನು ತೆರೆಯಲು ಅವಕಾಶವಿದೆ ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ, ಅಭಿವೃದ್ಧಿ ಕಾರ್ಯಗಳು ಆರಂಭಗೊಳ್ಳಲಿವೆ. ಕಟ್ಟಡ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳ ಪೂರೈಕೆ ಆರಂಭಗೊಳ್ಳಲಿದೆ. ಕಲ್ಲು ಮರಳು ಜಲ್ಲಿ ಮೊದಲಾದ ವಸ್ತುಗಳ ಪೂರೈಕೆ ನಡೆಯಲಿದೆ. ಆದರೆ ಅಂಗಡಿಗಳನ್ನು ತೆರೆಯಲು ಈಗಾಗಲೇ ಬೆಳಿಗ್ಗೆ 7 ರಿಂದ .11 ರತನಕ ಮಾತ್ರ ತೆರೆಯಲು ಅವಕಾಶವಿದೆ ಅದರ ಬಳಿಕ ಯಾರೂ ಕೂಡ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ. ವ್ಯಾಪಾರ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲವಾದರೆ ಅಂತಹ ಮಾಲಕರ ಮೇಲೆ ಕೇಸು ಹಾಕುತ್ತೇವೆ ಅಂತೆಯೇ ಮಾಸ್ಕ್ ಸ್ಯಾನಿಟೈಸರ್ ಸರಿಯಾಗಿ ಬಳಸದೇ ಇರುವವರ ಮೇಲೆ ಕೇಸ್ ಬೀಳಲಿದೆ ಎಂದು ಅವರು ಎಚ್ಚರಿಸಿದ್ದಾರೆ.


Spread the love