ವಂ|ಮಹೇಶ್ ಡಿಸೋಜಾ ಸಾವಿನ ಹೊಸ ತನಿಖಾಧಿಕಾರಿಯಾಗಿ ಕಾಪು ಸಿಪಿಐ ಮಹೇಶ್ ಪ್ರಸಾದ್ ನೇಮಕ

Spread the love

ವಂ|ಮಹೇಶ್ ಡಿಸೋಜಾ ಸಾವಿನ ಹೊಸ ತನಿಖಾಧಿಕಾರಿಯಾಗಿ ಕಾಪು ಸಿಪಿಐ ಮಹೇಶ್ ಪ್ರಸಾದ್ ನೇಮಕ

ಉಡುಪಿ : ಶಿರ್ವದ ಡಾನ್ ಬಾಸ್ಕೋ ಸಿ.ಬಿ.ಎಸ್.ಸಿ, ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿರ್ವ ಸಾವುದ್ ಅಮ್ಮನವರ ಇಗರ್ಜಿಯ ಸಹಾಯಕ ಗುರುಗಳಾಗಿದ್ದ ವಂ| ಮಹೇಶ್ ಡಿಸೋಜಾ ಅವರ ಸಾವಿನ ಪ್ರಕರಣದ ತನಿಖೆಯನ್ನು ಉನ್ನತ ಮಟ್ಟದಲ್ಲಿ, ಸಮಗ್ರವಾಗಿ ಮತ್ತು ಅತೀ ಶೀಘೃವಾಗಿ ನಡೆಸುವ ಸಲುವಾಗಿ  ಮುಂದಿನ ತನಿಖಾಧಿಕಾರಿಯಾಗಿ ಕಾಪು ವೃತ್ತ ನಿರೀಕ್ಷಕರಾದ  ಮಹೇಶ್ ಪ್ರಸಾದ್ ರವರನ್ನು ನಿಯೋಜಿಸಲಾಗಿದೆ.

ಫಾದರ್ ಮಹೇಶ್ ಡಿ‘ಸೋಜ (36 ವರ್ಷ) ಎಂಬವರು  ಶಿರ್ವದ ಡಾನ್ ಬಾಸ್ಕೋ ಸಿ.ಬಿ.ಎಸ್.ಸಿ, ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿರ್ವ ಸಾವುದ್ ಅಮ್ಮನವರ ಇಗರ್ಜಿಯ ಸಹಾಯಕ ಗುರುಗಳು ಆಗಿದ್ದು ಇವರು ಯಾವುದೋ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 11-12/10/2019 ರ ರಾತ್ರಿ ವೇಳೆಯಲ್ಲಿ ಶಿರ್ವ ಡಾನ್ ಬಾಸ್ಕೋ ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಫ್ಯಾನ್‌ಗೆ ನೈಲಾನ್ ಹಗ್ಗ ಬಿಗಿದು ಕುತ್ತಿಗೆಗೆ ನೇಣು ಬಿಗಿದು  ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿ ಪಿ.ಎಸ್.ಐ. ಶಿರ್ವ ರವರು ಪ್ರಕರಣದ ತನಿಖೆಯನ್ನು ಕೈಗೊಂಡಿರುವುದಾಗಿದೆ.

ಪ್ರಕರಣದ ತನಿಖೆಯನ್ನು ಉನ್ನತ ಮಟ್ಟದಲ್ಲಿ, ಸಮಗ್ರವಾಗಿ ಮತ್ತು ಅತೀ ಶೀಘೃವಾಗಿ ನಡೆಸುವ ಸಲುವಾಗಿ  ಮುಂದಿನ ತನಿಖಾಧಿಕಾರಿಯಾಗಿ ಕಾಪು ವೃತ್ತ ನಿರೀಕ್ಷಕರಾದ  ಮಹೇಶ್ ಪ್ರಸಾದ್ ರವರನ್ನು ನಿಯೋಜಿಸಲಾಗಿದೆ.


Spread the love