ವೆನ್ಲಾಕ್ ಕೋವಿಡ್ ಆಸ್ಪತ್ರೆಯ ರೋಗಿಗಳ ದ್ರವ ಪರೀಕ್ಷೆ ವಿಳಂಬ ಸರಕಾರದ ವೈಫಲ್ಯ – ಮಾಜಿ ಶಾಸಕ ಜೆ.ಆರ್.ಲೋಬೊ

Spread the love

ವೆನ್ಲಾಕ್ ಕೋವಿಡ್ ಆಸ್ಪತ್ರೆಯ ರೋಗಿಗಳ ದ್ರವ ಪರೀಕ್ಷೆ ವಿಳಂಬ ಸರಕಾರದ ವೈಫಲ್ಯ – ಮಾಜಿ ಶಾಸಕ ಜೆ.ಆರ್.ಲೋಬೊ

ಮಂಗಳೂರು:  ವೆನ್ಲಾಕ್ ಕೋವಿಡ್ ಆಸ್ಪತ್ರೆಯ ರೋಗಿಗಳ ದ್ರವ ಪರೀಕ್ಷೆ ವಿಳಂಬ ಸರಕಾರದ ವೈಫಲ್ಯ ಎಂದು  ಮಾಜಿ ಶಾಸಕ ಜೆ.ಆರ್.ಲೋಬೊ ಹೇಳೀದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಈಗ ಕೋವಿಡ್ ಆಸ್ಪತ್ರೆಯಾಗಿದೆ ಅದರೊಂದಿಗೆ ಇಲ್ಲಿ ಲ್ಯಾಬ್ ಕೂಡಾ ಬಹಳ ವಿಳಂಬವಾಗಿ ಆಗಿದೆ. ದ.ಕ. , ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೋವಿಡ್ ರೋಗಿಗಳ ಪರೀಕ್ಷೆ ಇಲ್ಲಿ ಆಗುತ್ತದೆ. ಕಳೆದ ಎರಡು ದಿನಗಳಿಂದ ಇಲ್ಲಿ ಸರಿಯಾಗಿ ರೋಗಿಗಳ ಪರೀಕ್ಷೆ ಆಗಿರುವುದಿಲ್ಲ. ಯಾಕೆಂದರೆ ಬೋಳೂರಿನ ಇಬ್ಬರಿಗೆ ಕೊರೋನಾ ಪಾಸಿಟಿವ್ ಕೇಸ್ ಬಂದ ನಂತರ , ಅವರ ಮನೆಯವರಿಗೆ ಕ್ವಾರಂಟೈನ್ ವಿಧಿಸಿದ್ದಾರೆ. ಈ ಬಗ್ಗೆ ಆ ಮನೆಯವರಿಗೆ ಕರೆ ಮಾಡಿ ಮಾತನಾಡಿದಾಗ ಅವರ ಗಂಟಲುದ್ರವ ಪರೀಕ್ಷೆ ಈ ದಿನಗಳಲ್ಲಿ ನಡೆದಿರುವುದಿಲ್ಲ ಎಂದು ನನಗೆ ತಿಳಿಸಿರುತ್ತಾರೆ.

ಈ ಬಗ್ಗೆ ನಾನು ಜಿಲ್ಲಾಧಿಕಾರಿಯವರಿಗೆ ತಿಳಿಸಿ , ಇದರ ಬಗ್ಗೆ ತುರ್ತಾಗಿ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದ್ದು ಇದಕ್ಕೆ ಕೂಡಲೇ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಕ್ವಾರಂಟೈನ್ನಲ್ಲಿ ಇದ್ದವರ ದ್ರವ ಪರೀಕ್ಷೆಗೆ ವ್ಯವಸ್ಥೆ ಮಾಡಿ, ಅದು ಈ ದಿನ ಕೊರೋನಾ ಪಾಸಿಟಿವ್ ಆಗಿ ಬಂದಿದೆ. ವಾಸ್ತವಿಕವಾಗಿ ಇಲ್ಲಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳ ಕಾಲ ಯಾವುದೇ ಪರೀಕ್ಷೆಗಳನ್ನು ನಡೆಸಿಲ್ಲ ಎಂಬ ಮಾಹಿತಿ ನನಗೆ ಬಂದಿತ್ತು. ಈ ಬಗ್ಗೆ ನಾನು ಅಧಿಕಾರಿಗಳನ್ನು ವಿಚಾರಿಸಿದಾಗ ಇದಕ್ಕೆ ಕಾರಣ ಬೆಂಗಳೂರಿನಿಂದ ಬಂದಂತಹಾ ಕಿಟ್ಗಳು ಇಲ್ಲಿನ ಪರೀಕ್ಷೆಗೆ ಪೂರಕವಾಗಿಲ್ಲ. ಹಾಗಾಗಿ ಆ ಕಿಟ್ ಗಳನ್ನು ವಾಪಾಸ್ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯ ಸರಕಾರವು ಇದರ ಬಗ್ಗೆ ಸರಿಯಾಗಿ ಗಮನ ಹರಿಸುತ್ತಿಲ್ಲ. ಕೋವಿಡ್ನ್ನು ಬಹಳ ಲಘುವಾಗಿ ಪರಿಗಣಿಸುತ್ತಾರೆ. ದ.ಕ ಜಿಲ್ಲೆಯಲ್ಲಿ ಹಲವು ಸುಸಜ್ಜಿತವಾದ ಆಸ್ಪತ್ರೆಗಳಿವೆ. ಇದರಲ್ಲಿ ಲಾಬ್ ತೆರೆಯಲು ಸರಕಾರವು ಜವಾಬ್ದಾರಿಯನ್ನು ವಹಿಸಬೇಕಿತ್ತು. ಇಲ್ಲಿನ ಉಸ್ತುವಾರಿ ಸಚಿವರು ಸ್ಥಳೀಯರಲ್ಲ ಅವರು ಉಡುಪಿಯವರು. ಅವರು ಇದರ ಬಗ್ಗೆ ಗಮನ ಹರಿಸಿ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಎಂದು ಲೋಬೊ ರವರು ಹೇಳಿದರು.

ಮಂಗಳೂರಿನ ಸೀಲ್ ಡೌನ್ ಪ್ರದೇಶದಲ್ಲಿ ಸ್ಥಳೀಯ ಶಾಸಕರು ಅವರ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳುತ್ತಾರೆ. ಸೀಲ್ ಡೌನ್ ಪ್ರದೇಶಕ್ಕೆ ಯಾರೂ ಪ್ರವೇಶಿಸಕೂಡದು ಎಂದು ಸರಕಾರದ ಆದೇಶವಿದೆ. ಆದರೂ ಆ ಆದೇಶವನ್ನೇ ಸ್ಥಳೀಯ ಶಾಸಕರು ಉಲ್ಲಂಘಿಸಿದ್ದಾರೆ. ಸೀಲ್ ಡೌನ್ ಪ್ರದೇಶಕ್ಕೆ ಶಾಸಕರು ಮನೆಮನೆಗೆ ತೆರಳುವುದು ಸರಿಯಾದ ವ್ಯವಸ್ಥೆಯಲ್ಲ ಎಂದು ಲೋಬೊ ರವರು ಹೇಳಿದರು.


Spread the love