ಶತಮಾನದ ದೀರ್ಘಾವಧಿ ಚಂದ್ರಗ್ರಹಣ ಮತ್ತು ಭೂಮಿಯ ಸಮೀಪ ಮಂಗಳ

Spread the love

ಶತಮಾನದ ದೀರ್ಘಾವಧಿ ಚಂದ್ರಗ್ರಹಣ ಮತ್ತು ಭೂಮಿಯ ಸಮೀಪ ಮಂಗಳ

ಮಂಗಳೂರು : ಈ ಶತಮಾನದ ದೀರ್ಘಾವಧಿ ಚಂದ್ರಗ್ರಹಣವು ಜುಲೈ 27 ರಾತ್ರಿ ಮತ್ತು 28ರಂದು ಮುಂಜಾನೆ ಸಂಭವಿಸಲಿದೆ. ಜುಲೈ 27ರ ರಾತ್ರಿ 11.54ಕ್ಕೆ ಚಂದ್ರಗ್ರಹಣವು ಆರಂಭವಾಗಲ್ಲಿದ್ದು ಮಧ್ಯರಾತ್ರಿ 1 ಗಂಟೆಯಿಂದ 2.43ರವರೆಗೆ ಸಂಪೂರ್ಣ ಗ್ರಹಣ ಗೋಚರಿಸಲಿದೆ. ಜು. 28 ಮುಂಜಾನೆ 3.49ಕ್ಕೆ ಗ್ರಹಣವು ಬಿಡಲಿದ್ದು ಈ ವಿದ್ಯಮಾನವನ್ನು ಬರಿಗಣ್ಣಿನಿಂದ ನೋಡಬಹುದು. ಭೂಮಿಯ ವಾತಾವರಣದಲ್ಲಿ ಹಾದುಹೋಗುವ ಸೂರ್ಯನ ಕಿರಣಗಳ ಚದುರುವಿಕೆಯಿಂದ ಚಂದ್ರನು ರಕ್ತವರ್ಣದಲ್ಲಿ ಕಂಡುಬರುತ್ತಾನೆ.

ಇದರೊಂದಿಗೆ ಕಳೆದ 15 ವರ್ಷದ ಅವಧಿಯಲ್ಲೇ ಭೂಮಿಗೆ ಮಂಗಳ ಗ್ರಹ ಹತ್ತಿರದಲ್ಲಿದ್ದು , ಜುಲೈ 27ರಂದು ಸೂರ್ಯ , ಭೂಮಿ ಮತ್ತು ಮಂಗಳ ಒಂದೇ ಸಾಲಿನಲ್ಲಿ ಬರಲಿವೆ. ಭೂಮಿ ಹಾಗು ಮಂಗಳ ಗ್ರಹಗಳ ನಡುವಿನ ಅಂತರ ಜುಲೈ 31ನೇ ತಾರೀಖಿನಂದು ಕಡಿಮೆ ಇರಲಿದ್ದು ಆ ದಿನ ಮಂಗಳ ಗ್ರಹ ಪ್ರಕಾಶಮಾನವಾಗಿರುತ್ತದೆ.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಲ್ಲಿ ರಾತ್ತಿ 11.30 ರಿಂದ 3.30ರ ವರೆಗೆ ಈ ಖಗೋಳ ವಿದ್ಯಮಾನವನ್ನು ವೀಕ್ಷಿಸಲು ದೂರದರ್ಶಕ ಮತ್ತು ದುರ್ಬೀನುಗಳ ವ್ಯವಸ್ಥೆ ಮಾಡಲಾಗಿದೆ. ಮೋಡಗಳ ಅಡಚಣೆ ಇಲ್ಲದಿದ್ದಲ್ಲಿ ಆಸಕ್ತ ವೀಕ್ಷಕರು ಇದರ ಸದುಪಯೋಗ ಪಡೆಯಬಹುದಾಗಿದೆ. ನಿರ್ದೇಶಕ ಡಾ ಕೆ ವಿ ರಾವ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ


Spread the love