Spread the love
ಶುಕ್ರವಾರ (ಮಾ.20) ದ.ಕ. ಜಿಲ್ಲೆಗೆ ಸಾರ್ವತ್ರಿಕ ರಜೆ: ಡಿಸಿ ಎಚ್.ವಿ ದರ್ಶನ್
ಮಂಗಳೂರು: ಚಂದ್ರ ದರ್ಶನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದುಲ್ ಫಿತ್ರ್ ಶುಕ್ರವಾರ ನಡೆಯಲಿರುವುದರಿಂದ ದ.ಕ. ಜಿಲ್ಲೆಯಾದ್ಯಂತ ಮಾರ್ಚ್ 20ರಂದು ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಚ್.ವಿ ದರ್ಶನ್ ಆದೇಶಿಸಿದ್ದಾರೆ.
ಶುಕ್ರವಾರ ಈದುಲ್ ಫಿತ್ರ್ ಆಚರಿಸಲು ಉಡುಪಿ ಜಿಲ್ಲಾ ನಾಇಬ್ ಖಾಝಿ ಕರೆ
ಶವ್ವಾಲ್ನ ಪ್ರಥಮ ಚಂದ್ರದರ್ಶನ ಇಂದು ಮುಸ್ಸಂಜೆ ಆಗಿರುವುದರಿಂದ ಕರಾವಳಿಯಲ್ಲಿ ಶುಕ್ರವಾರ ಈದುಲ್ ಫಿತ್ರ್ ಆಚರಿಸಲು ಉಡುಪಿ ಜಿಲ್ಲಾ ನಾಇಬ್ ಖಾಝಿ ಬಿ ಕೆ ಅಬ್ದುರ್ರಹ್ಮಾನ್ ಮದನಿ ಮೂಳೂರು ಕರೆ ನೀಡಿದ್ದಾರೆ ಎಂದು ಉಡುಪಿ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ ಬಾವು ಮೂಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Spread the love













