ಶ್ರೀರಾಮಪುರ ಪೋಲಿಸರ ಕ್ಷಿಪ್ರ ಕಾರ್ಯಾಚರಣೆ – ಬೆಳ್ಳಿಯ ಗಟ್ಟಿ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ

Spread the love

ಶ್ರೀರಾಮಪುರ ಪೋಲಿಸರ ಕ್ಷಿಪ್ರ ಕಾರ್ಯಾಚರಣೆ – ಬೆಳ್ಳಿಯ ಗಟ್ಟಿ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ

ಬೆಂಗಳೂರು:  ನಗರ ಉತ್ತರ ವಿಭಾಗದ ಶ್ರೀರಾಮಪುರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬೆಳ್ಳಿಯ ಗಟ್ಟಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಅಂದಾಜು ರೂ 8.10 ಲಕ್ಷ ಮೌಲ್ಯದ 16 ಕೆಜಿ ಬೆಳ್ಳಿಯ ಗಟ್ಟಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಬಂಧಿತ ಆರೋಪಿಯನ್ನು ಬಾಪು ಬಿನ್ ಪುಪುಟ್ ಚಲೇಕರ್ (26) ಸಾಂಗೋಲಾ ತಾಲೂಕು ಸೊಲ್ಲಾಪುರ ಜಿಲ್ಲೆ ಎಂದು ಗುರುತಿಸಲಾಗಿದೆ.

ಶ್ರೀರಾಮಪುರ ಪೊಲೀಸ್ ಠಾಣಾ ಸರಹದ್ದಿನ 5 ನೇ ಕ್ರಾಸ್ ನಲ್ಲಿರುವ ಅರ್ಮುಗಂ ಸಿಲ್ವರ್ ವರ್ಕ್ ಫ್ಯಾಕ್ಟರಿಯಲ್ಲಿ ಬೆಳ್ಳಿ ಕರಗಿಸುವ ಕೆಲಸ ಮಾಉತ್ತಿದ್ದ ಬಾಪು ಎಂಬುವನು ಬೆಳ್ಳಿ ಕರಗಿಸುವ ಸಮಯದಲ್ಲಿ 1 ಕೆಜಿ ಬೆಳ್ಳಿಯಿಂದ 1 ಕೆಜಿ 200 ಗ್ರಾಮ್ ನಷ್ಟು ಬೆಳ್ಳಿಯನ್ನು ಕಳ್ಳತನ ಮಾಡುತ್ತಿದ್ದು ಈ ಬಗ್ಗೆ ಆರೋಪಿಗೆ ವಿಚಾರಣೆ ಮಾಡಿ, ಕಳ್ಳತನವಾಗಿರುವ ಬೆಳ್ಳಿಯ ಗಟ್ಟಿಯನ್ನು ಕೊಡಿಸಬೇಕೆಂದು ಅಕ್ಟೋಬರ್ 28ರಂದು ದೂರನ್ನು ನೀಡಿದ್ದು ಪ್ರಕರಣ ದಾಖಲಾಗಿತ್ತು. ಅದರಂತೆ ಆರೋಪಿ ಬಾಪು ಅವನ್ನನ್ನು ವಿಚಾರಣೆಗೆ ಒಳಪಡಿಸಿ ಸುಮಾರು 16 ಕೆ ಜಿ ಬೆಳ್ಳೀಯ ಗಟ್ಟಿಯನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಆರೋಪಿಯನ್ನು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಇವರ ನಿರ್ದೇಶನದಲ್ಲಿ ಧನಂಜಯ್ ಸಹಾಯಕ ಪೊಲೀಸ್ ಆಯುಕ್ತರು, ಮಲ್ವೇಶ್ವರಂ ಉಪವಿಭಾಗರವರ ಮಾರ್ಗದರ್ಶನದಲ್ಲಿ ಸುನಿಲ್ ವೈ ನಾಯಕ್ ಪೊಲೀಸ್ ಇನ್ಸ್ ಪೆಕ್ಟರ್, ಶ್ರೀರಾಮಪುರ ತಂಡ ಪ್ರೋ ಪಿಎಸ್ ಐ ಗಿರೀಶ್ ನಾಯಕ್, ಬಾಬುರಾವ್, ಎಎಸ್ ಐ, ವೆಂಕಟಪ್ಪ, ಎಎಸ್ ಐ, ಸಿಬಂದಿಗಳಾದ ನಟರಾಜ್, ಶ್ರೀನಿವಾಸಮೂರ್ತಿ, ಮೋಹನ್ ಕುಮಾರ್ ನಾಯಕ್, ತಿಮ್ಮೇಶ್ ಹನುಮೇಶ್ ನಾಯ್ಕ ರವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಇವರ ಉತ್ತಮ ಕಾರ್ಯವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.


Spread the love