ಶ್ರೀಲಂಕಾ ಉಗ್ರ ದಾಳಿ – ತುರ್ತು ಸಂದರ್ಭದಲ್ಲಿ ಸನ್ನದ್ದವಾಗಿರಲು ಕರಾವಳಿ ಕಾವಲು ಪೊಲೀಸರಿಗೆ ಸೂಚನೆ

Spread the love

ಶ್ರೀಲಂಕಾ ಉಗ್ರ ದಾಳಿ – ತುರ್ತು ಸಂದರ್ಭದಲ್ಲಿ ಸನ್ನದ್ದವಾಗಿರಲು ಕರಾವಳಿ ಕಾವಲು ಪೊಲೀಸರಿಗೆ ಸೂಚನೆ

ಉಡುಪಿ : ಇತ್ತೀಚೆಗೆ ದಿನಗಳಲ್ಲಿ ಉದ್ಭವಿಸಿರುವ ಆತಂಕ ಪರಿಸ್ಥಿತಿಯ ಹಿನ್ನಲೆಯಲ್ಲಿ , ಕರಾವಳಿ ಕಾವಲು ಪೊಲೀಸರಿಂದ ಸಮುದ್ರಗಸ್ತು ತೀವ್ರಗೊಳಿಸಿದ್ದು, ಈ ಹಿನ್ನಲೆಯಲ್ಲಿ ಎ.ಎಮ್.ಪ್ರಸಾದ್ ಡಿಜಿಪಿ ಐಎಸ್ಡಿ ಹಾಗೂ ಸಿ.ಹೆಚ್ ಪ್ರತಾಪರೆಡ್ಡಿ, ಎಡಿಜಿಪಿ ಐಎಸ್ಡಿ ಬೆಂಗಳೂರು ರವರು , ಉಡುಪಿ ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿದ್ದರು.

ಕರಾವಳಿಯ ಸಮುದ್ರದಲ್ಲಿ ಇಂಟರ್ಸೆಪ್ಟರ್ ಬೋಟ್ನಲ್ಲಿ ಪೆಟ್ರೋಲಿಂಗ್ ಮಾಡಿದ ಅವರು, ಶ್ರೀಲಂಕಾದಲ್ಲಿ ಸಂಭವಿಸಿರುವ ಉಗ್ರರ ಆತ್ಮಾಹುತಿ ದಾಳಿ ಹಿನ್ನೆಲೆಯಲ್ಲಿ , ಕರಾವಳಿ ಕಾವಲು ಪೊಲೀಸ್ ವತಿಯಿಂದ , ಕರ್ನಾಟಕ ಕರಾವಳಿಯ ಮಂಗಳೂರಿನಿಂದ ಕಾರವಾರದತನಕ ಬಿಗಿ ಭದ್ರತೆ, ಸಮುದ್ರತೀರದ ಆಯಾಕಟ್ಟಿನ ಸ್ಥಳಗಳಲ್ಲಿ ಗಸ್ತು ಆರಂಭಿಸಿ, ಯಾವುದೇ ತುರ್ತು ಸಂಧರ್ಭದಲ್ಲಿ ಸನ್ನದ್ಧರಿರುವಂತೆ ಸೂಚನೆಯನ್ನು ನೀಡಿರುತ್ತಾರೆ.

ಈ ಸಂಧರ್ಭದಲ್ಲಿ ಸಿಎಸ್ಪಿ ಪೊಲೀಸ್ ಅಧೀಕ್ಷಕರಾದ ಎನ್.ಟಿ.ಪ್ರಮೋದ್ ರಾವ್ ಪ್ರವೀಣ್ ಹೆಚ್ ನಾಯಕ್, ಪೊಲೀಸ್ ಉಪಾಧೀಕ್ಷಕರು ಹಾಗೂ ಎಲ್ಲಾ 9 ಸಿಎಸ್ಪಿ ಠಾಣೆಯ ಠಾಣಾಧಿಕಾರಿಗಳು ಹಾಜರಿದ್ದರು.


Spread the love