ಸಂಗೊಳ್ಳಿ ರಾಯಣ್ಣ ರಾಜಕೀಯವಾಗಿ ಬಳಸದಂತೆ ಕಾರ್ಮಿಕರ ವೇದಿಕೆ ಪ್ರತಿಭಟನೆ

Spread the love

ಸಂಗೊಳ್ಳಿ ರಾಯಣ್ಣ ರಾಜಕೀಯವಾಗಿ ಬಳಸದಂತೆ ಕಾರ್ಮಿಕರ ವೇದಿಕೆ ಪ್ರತಿಭಟನೆ

ಉಡುಪಿ: ಸಂಗೊಳ್ಳಿ ರಾಯಣ್ಣರವರ ಹೆಸರನ್ನು ಸ್ವಾರ್ಥ ರಾಜಕೀಯಕ್ಕೆ ಬಳಸದಂತೆ ಆಗ್ರಹಿಸಿ ಕರ್ನಾಟಕ ಕಾರ್ಮಿಕರ ವೇದಿಕೆ ನಗರದ ಕ್ಲಾಕ್‍ ಟವರ್ ಬಳಿ ಪ್ರತಿಭಟನೆ ನಡೆಸಲಾಯಿತು.

ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಯುನ್ನು ಉದ್ದೇಶಿಸಿ ಮಾತನಾಡಿ ಒಂದು ಪ್ರಮುಖ ರಾಷ್ಟ್ರೀಯ ಪಕ್ಷದ ಮುಖಂಡರೊಬ್ಬರು ತನ್ನ ರಾಜಕೀಯ ಗಟ್ಟಿತನ ಪ್ರದರ್ಶಿಸಲು ಜಾತಿಮಿತಿ ಭೇದವಿಲ್ಲದೆ, ನಮಗೆ ಸ್ವಾತಂತ್ರ್ಯತೆಯ ಕೋಮಿನಲ್ಲಿ ತನ್ನ ಪ್ರಾಣವನ್ನೇ ನೀಡಿ ಹುತಾತ್ಮ ನೆನಿಸಿಕೊಂಡ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ರಾಜಕೀಯ ದುರುದ್ದೇಶಕ್ಕಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸುತ್ತಿರುವುದು ಹುತಾತ್ಮರಾದ ಮಹಾನ್ ವ್ಯಕ್ತಿಗೆ ಅವಮಾನ ಮಾಡಿದಂತೆ ಅದಲ್ಲದೆ, ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ರೈತರು ಶೋಷಿತರು, ಕಾರ್ಮಿಕರು, ಸಂಕಷ್ಟದಲ್ಲಿರುವಾಗ ಅತ್ತ ನೋಡದಿರುವ ಈ ಮುಖಂಡರು ತಮಗೆ ಅವಕಾಶ ಸಿಕ್ಕಿಲ್ಲ ಎಂದಾಗ ಜಾತಿ ಧರ್ಮ ಮತ್ತು ಕವಿಗಳ ಸ್ವಾತಂತ್ರ್ಯ ಹೋರಾಟರಾದ ಇವರ ಹೆಸರನ್ನು ಬೆಳೆಸಿಕೊಂಡು ಅವಕಾಶವಾದಿ ರಾಜಕೀಯ ಮಾಡದಂತೆ ಕೆಲವು ಸ್ವಾರ್ಥ ರಾಜಕೀಯ ವ್ಯಕ್ತಿಗಳನ್ನು ಜನರೇ ಸಿದ್ದಿ ಬುಧ್ಧಿ ಹೇಳುವ ಕಾಲ ದೂರವಿಲ್ಲ ಎಂದು ಅಭಿಪ್ರಾಯಪಟ್ಟರು.

karnataka-karmika-vedike-01 karnataka-karmika-vedike-02

ಕರ್ನಾಟಕ ಕಾರ್ಮಿಕರ ವೇದಿಕೆಯ ಈ ದಿನ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತಿದ್ದು ತಕ್ಷಣವೇ, ಸಂಬಂಧಪಟ್ಟವರು ರಾಯಣ್ಣರ ಹೆಸರನ್ನು ತಮ್ಮ ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳದೆ ಹುತಾತ್ಮರಿಗೆ ಗೌರವ ಸಲ್ಲಿಸಬೇಕು ಇಲ್ಲದಿದ್ದಲ್ಲಿ ಕರ್ನಾಟಕ ಕಾರ್ಮಿಕರ ವೇದಿಕೆಯು ರಾಜ್ಯಾದ್ಯಾಂತ ಉಗ್ರ ಪ್ರತಿಭಟನೆ ನಡೆಸಲಾಗುವುದು.

ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ಕೆ.ಸುರೇಶ್ ಸೇರಿಗಾರ್, ಪ್ರಧಾನ ಕಾರ್ಯದರ್ಶಿಗಳಾದ ರವಿ ಶಾಸ್ತ್ರಿ ಬನ್ನಂಜೆ, ವಿದ್ಯಾರ್ಥಿ ಪರಿಷತ್ತಿನ ಸೂರಜ್ , ರೈತ ಮುಖಂಡರಾದ ವೀರಣ್ಣ ಕುರುವತ್ತಿ ಗೌಡರ್, ಕಾಪು ವಿಧಾನ ಸಭಾಕ್ಷೇತ್ರದ, ಅಧ್ಯಕ್ಷರಾದ ಚಂದ್ರ ಪೂಜಾರಿ ಕೊಡಂಕೂರು ಘಟಕದ ಅಧ್ಯಕ್ಷರಾದ ಮಂಜುನಾಥ, ಪಳ್ಳಿ ಘಟಕದ ಅಧ್ಯಕ್ಷರಾದ ಗೋಪಾಲ ಆಚಾರ್ಯ, ಮಣಿಪಾಲ ಘಟಕದ ಸುಧಾಕರ್ ನಾಯಕ್, ನಿವೃತ್ತ ಪೋಲಿಸ್ ಘಟಕ ಅಧ್ಯಕ್ಷರಾದ ಸಂದೀಪ್‍ಕುಮಾರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಕೆನಿನ್ ನೆಲ್ಸನ್, ಸರಿತಾ, ಮಲ್ಪೆ ಘಟಕದ ಅಧ್ಯಕ್ಷರಾದ ಬಿ. ಆರ್ ಮೋಹನ್‍ರಾಜ್, ವೇದಿಕೆಯ ಪದಾಧಿಕಾರಿಗಳಾದ ಸಂದೀಪ್‍ಕೊಡಂಕೂರು, ಮಲ್ಲಿಕಾರ್ಜುನ್,ಗೌತಮ್, ರೋಹಿತ್ ಕರಂಬಳ್ಳಿ, ದೀಕ್ಷಿತಾ, ಜೈರಾಮ ಶೆಟ್ಟಿ, ಹಾಗೂ ಇನ್ನಿತರರು ಸದಸ್ಯರು ಭಾಗವಹಿಸಿದ್ದರು.


Spread the love