ಸಂಚಾರ ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ 4.02 ಕೋಟಿ ರೂ. ದಂಡ ವಸೂಲಿ

Spread the love

ಸಂಚಾರ ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ 4.02 ಕೋಟಿ ರೂ. ದಂಡ ವಸೂಲಿ

ಬೆಂಗಳೂರು: ವಾಹನ ಸವಾರರಲ್ಲಿ ಶಿಸ್ತುಪಾಲನೆ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಿರುವ ಸಂಚಾರಿ ಪೊಲೀಸರು, ಅಕ್ಟೋಬರ್ 4ರಿಂದ 10ರವರೆಗೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 97,213 ಪ್ರಕರಣ ದಾಖಲಿಸಿ, ಬರೋಬ್ಬರಿ 4.02 ಕೋಟಿ ರೂ.ದಂಡ ವಿಧಿಸಿದ್ದಾರೆ.

ಕಳೆದ ಅ.4 ರಿಂದ ಅ.10ರವರೆಗೆ 4,02,62,800 ರೂಗಳ ದಂಡ ಸಂಗ್ರಹ ಮಾಡಿದ್ದು, ಅದರಲ್ಲಿ ಸುಮಾರು ಒಂದು ಕಾಲು ಕೋಟಿಯಷ್ಟು ಹಣ ಹೆಲ್ಮೆಟ್ ರಹಿತ ಬೈಕ್ ಚಾಲನೆಯಿಂದ ಸಂಗ್ರಹಿಸಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ‌ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

ಇದರಲ್ಲಿ 10, 538 ಕೇಸ್ ಸಿಗ್ನಲ್ ಜಂಪ್ (38.43 ಲಕ್ಷ ದಂಡ), ಹೆಲ್ಮೆಟ್ ರಹಿತ ಚಾಲನೆ 30712 ಕೇಸ್ ಗೆ 1.14 ಕೋಟಿ ದಂಡ, ಹೆಲ್ಮೆಟ್ ಇಲ್ಲದ ಹಿಂಬದಿ ಸವಾರ 19,403 ಕೇಸ್, 72 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದರು.

ನೋ ಎಂಟ್ರಿಯಲ್ಲಿ ಚಾಲನೆ ಮಾಡಿದ್ದಕ್ಕೆ 4,154 ಕೇಸ್ ದಾಖಲಿಸಿ 15.77 ಲಕ್ಷ ದಂಡ, ಸೀಟ್ ಬೆಲ್ಟ್ ರಹಿತ ಚಾಲನೆ 5,364 ಕೇಸ್ 25 ಲಕ್ಷ ದಂಡ, ರಾಂಗ್ ಪಾರ್ಕಿಂಗ್ ನ 3887 ಕೇಸ್ ದಾಖಲಿಸಿ 11 ಲಕ್ಷ ದಂಡ ವಸೂಲಿ ಮಾಡಲಾಗಿದೆ.


Spread the love