ಸದನ ಕುತೂಹಲ – ಕ್ಷಣ ಕ್ಷಣ ಮಾಹಿತಿ

Spread the love

ಕರ್ನಾಟಕ  ಸದನ ಕುತೂಹಲ – ಕ್ಷಣ ಕ್ಷಣ ಮಾಹಿತಿ

03:07 PM: ತಾಜ್ ವೆಸ್ಟೆಂಡ್ ಹೋಟೆಲ್‌ನಿಂದ ಹೊರಟ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ

02:59 PM: ಸ್ವಲ್ಪ ಹೊತ್ತಿನಲ್ಲೇ ಕಾಂಗ್ರೆಸ್‌ ಶಾಸಕ ಆನಂದ್ ಸಿಂಗ್ ಸಹ ವಿಧಾನಸೌಧಕ್ಕೆ ಆಗಮಿಸುವ ಸಾಧ್ಯತೆ

02:51 PM: ವಿಧಾನಸೌಧಕ್ಕೆ ಆಗಮಿಸುತ್ತಿದ್ದಂತೆ ಪ್ರತಾಪ್ ಗೌಡಗೆ ವಿಪ್ ನೀಡಿದ ಡಿ.ಕೆ. ಶಿವಕುಮಾರ್

02:40 PM: ಭದ್ರತೆಯಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಪ್ರತಾಪ್ ಗೌಡ

02:40 PM: ಪ್ರತಾಪ್ ಗೌಡ ಕಾಂಗ್ರೆಸ್ ಪರ ಮತ ಚಲಾಯಿಸುತ್ತಾರೆ: ಡಿ.ಕೆ. ಶಿವಕುಮಾರ್ ಹೇಳಿಕೆ

02:39 PM: ವಿಧಾನಸಭೆಯಲ್ಲಿ ಭಾವನಾತ್ಮಕವಾಗಿ ಭಾಷಣ ಮಾಡಿದ ನಂತರ ಯಡಿಯೂರಪ್ಪ ಅವರು ಎಲ್ಲ ಶಾಸಕರೊಡನೆ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ

02:33 PM: ಗೋಲ್ಡ್‌ಫಿಂಚ್ ಹೋಟೆಲ್‌ನಿಂದ ಹೊರಬಂದ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಪಾಟೀಲ್

02:22 PM: ಗೋಲ್ಡ್‌ಫಿಂಚ್ ಹೋಟೆಲ್‌ನಿಂದ ತೆರಳಿದ ಕಾಂಗ್ರೆಸ್ ಶಾಸಕ ಆನಂದ್‌ ಸಿಂಗ್

02:20 PM: ಇಬ್ಬರು ಕಾಂಗ್ರೆಸ್ ಶಾಸಕರು ತಂಗಿದ್ದಾರೆ ಎನ್ನಲಾಗಿರುವ ಹೋಟೆಲ್ ಹೊರಗೆ ಭದ್ರತೆ ಹೆಚ್ಚಿಸಲಾಗಿದೆ

02:07 PM: ಕೊನೆಗೂ ವಿಧಾನಸೌಧ ಪ್ರವೇಶಿಸಿದ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಸಿದ್ದರಾಮಯ್ಯ ಜತೆ ಚರ್ಚೆ

01:59 PM: ಯಡಿಯೂರಪ್ಪ ರಾಜೀನಾಮೆ ಸಾಧ್ಯತೆ: ಬಿಎಸ್‌ವೈ ತವರು ಜಿಲ್ಲೆ ಶಿವಮೊಗ್ಗದಲ್ಲಿ ಆತಂಕದಲ್ಲಿ ಬಿಜೆಪಿ ಕಾರ್ಯಕರ್ತರು

01:56 PM: ರಾಜೀನಾಮೆಗೂ ಮುನ್ನ ಸುದೀರ್ಘ ಭಾಷಣ ಮಾಡಲಿರುವ ಯಡಿಯೂರಪ್ಪ: ಮೂಲಗಳಿಂದ ಮಾಹಿತಿ

01:56 PM: ವಿಶ್ವಾಸಮತದಲ್ಲಿ ಗೆಲುವು ಅನುಮಾನ: ಬಿಎಸ್‌ವೈ ರಾಜೀನಾಮೆ ಸಾಧ್ಯತೆ

01:55 PM: ಆನಂದ್‌ ಸಿಂಗ್, ಪ್ರತಾಪ್ ಗೌಡಗೆ ವಿಪ್ ನೀಡಲು ಹೋಟೆಲ್‌ಗೆ ತೆರಳಿರುವ ಡಿ.ಕೆ. ಶಿವಕುಮಾರ್

01:50 PM: ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಅವರನ್ನು ಹೇಗೆ ಬಿಟ್ಟಿದ್ದೀರಿ: ಮಾರ್ಷಲ್‌ಗಳಿಗೆ ಉಗ್ರಪ್ಪ ಪ್ರಶ್ನೆ

01:46 PM: ಮಾರ್ಷಲ್‌ಗಳ ಜತೆ ವಿಧಾನಪರಿಷತ್‌ನ ಕಾಂಗ್ರೆಸ್ ಸದಸ್ಯ ಉಗ್ರಪ್ಪ ಮಾತಿನ ಚಕಮಕಿ

01:45 PM: ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ವಿಧಾನಸೌಧ ಪ್ರವೇಶಕ್ಕೆ ತಡೆ

01:28 PM: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಕಾಂಗ್ರೆಸ್ ಶಾಸಕರ ಜತೆ ಕುಶಲೋಪರಿ, ಮಾತುಕತೆ

01:25 PM: ವಿಧಾನಸಭೆ ಕಲಾಪ 3.30ಕ್ಕೆ ಮುಂದೂಡಿಕೆ

01:18 PM: ವಿಪ್‌ ನೀಡಲು ಬಂದಿದ್ದೇವೆ, ಭೇಟಿಗೆ ಅವಕಾಶ ಕೊಡಿ ಎಂದ ರೇವಣ್ಣ

01:18 PM: ಎಚ್‌.ಎಂ. ರೇವಣ್ಣ, ಡಿ.ಕೆ ಸುರೇಶ್ ಭೇಟಿಗೆ ಆನಂದ್‌ ಸಿಂಗ್, ಪ್ರತಾಪ್ ಗೌಡ ನಿರಾಕರಣೆ

01:17 PM: ವಿಶ್ವಾಸಮತದ ವಿರುದ್ಧ ಮತ ಹಾಕಲು ಕಾಂಗ್ರೆಸ್, ಜೆಡಿಎಸ್‌ನಿಂದ ಶಾಸಕರಿಗೆ ವಿಪ್ ಜಾರಿ

01:16 PM: ಡಿ.ಕೆ. ಸುರೇಶ್, ಎಚ್‌.ಎಂ. ರೇವಣ್ಣ ಜತೆ ಬರಲು ಆನಂದ್ ಸಿಂಗ್, ಪ್ರತಾಪ್ ಗೌಡ ನಿರಾಕರಣೆ

12:47 PM: ಗೋಲ್ಡ್ ಪಿಂಚ್ ಹೋಟೆಲ್‌ಗೆ ಡಿಜಿ, ಐಜಿಪಿ ಭೇಟಿ

12:46 PM: ಶಾಸಕರು ಹೋಟೆಲ್‌ನಲ್ಲಿರುವ ಮಾಹಿತಿ: ಹೋಟೆಲ್‌ಗೆ ಭೇಟಿ ನೀಡಿದ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ

12:40 PM: ಬಿಜೆಪಿಯ ಸೋಮಶೇಖರ್ ರೆಡ್ಡಿ ಅವರೂ ಬಂದಿಲ್ಲ: ಡಿ.ಕೆ. ಶಿವಕುಮಾರ್

12:38 PM: ಗೈರಾಗಿರುವ ಶಾಸಕರು ಶೀಘ್ರದಲ್ಲೇ ವಿಧಾನಸೌಧಕ್ಕೆ ಬರಲಿದ್ದಾರೆ: ಡಿ.ಕೆ. ಶಿವಕುಮಾರ್ ಹೇಳಿಕೆ

12:36 PM: ಗೈರಾಗಿರುವ ಶಾಸಕರನ್ನು ಕರೆತರಲು ತೆರಳಿದ ಕಾಂಗ್ರೆಸ್‌ ನಾಯಕ ಎಚ್‌.ಎಂ. ರೇವಣ್ಣ

12:34 PM: ನಮ್ಮ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸುತ್ತಿದೆ. ಗೈರಾಗಿರುವ ಇಬ್ಬರು ಶಾಸಕರೂ ಕಲಾಪಕ್ಕೆ ಬಂದ ಕೂಡಲೇ ಕಾಂಗ್ರೆಸ್‌ ಬೆಂಬಲಿಸಲಿದ್ದಾರೆ: ವೀರಪ್ಪ ಮೊಯಿಲಿ

12:28 PM: ಸಂಜೆ ನಾಲ್ಕು ಗಂಟೆಯೊಳಗೆ ಶಾಸಕರನ್ನು ಕರೆತರಲು ಅವಕಾಶ ನೀಡಿದ ಹಂಗಾಮಿ ಸ್ಪೀಕರ್ ಬೋಪಯ್ಯ

12:27 PM: ಗೈರಾಗಿರುವ ಕಾಂಗ್ರೆಸ್‌ ಶಾಸಕರಾದ ಆನಂದ್‌ ಸಿಂಗ್, ಪ್ರತಾಪ್ ಗೌಡ ಅವರನ್ನು ಕರೆತರಲು ತೆರಳಿದ ಕಾಂಗ್ರೆಸ್ ನಾಯಕರು

12:20 PM: ದೂರವಾಣಿ ಕರೆಯ ಆಡಿಯೊ ಕ್ಲಿಪ್ ಬಿಡುಗಡೆ

12:18 PM: ವಿಧಾನಪರಿಷತ್‌ನ ಕಾಂಗ್ರೆಸ್ ಸದಸ್ಯ ಉಗ್ರಪ್ಪ ಆರೋಪ

12:17 PM: ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಪತ್ನಿಗೆ ದೂರವಾಣಿ ಕರೆ ಮಾಡಿ ₹15 ಕೋಟಿ ಆಮಿಷ

12:15 PM: ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ ಆಮಿಷವೊಡ್ಡಿದ ಆರೋಪ

12:04 PM: ಕಲಬುರ್ಗಿ: ರಾಜ್ಯಪಾಲರ ಸಂವಿಧಾನ ವಿರೋಧಿ ನಡೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘರ್ಷ ಸಮಿತಿ ಮಹಾ ಒಕ್ಕೂಟದ ಪತ್ರಿಭಟನೆ.

12:03 PM: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿ.ಶ್ರೀರಾಮುಲು

12:02 PM: 3 ದಿನದ ಮುಖ್ಯಮಂತ್ರಿ ಶ್ರೀಯುತ ಯಡಿಯೂರಪ್ಪನವರ ಅಧಿಕಾರಾವಧಿ ಇಂದಿಗೆ ಕೊನೆ: ಸಿದ್ದರಾಮಯ್ಯ ಟ್ವೀಟ್

11:52 AM: ಕಲಾಪಕ್ಕೆ ಬಾರದ ಶಾಸಕರ ನಡೆ ಇನ್ನೂ ನಿಗೂಢ

11:51 AM: ಗೈರಾಗಿರುವ ಶಾಸಕರು ಮಧ್ಯಾಹ್ನದ ವೇಳೆಗೆ ಕಲಾಪಕ್ಕೆ ಹಾಜರಾಗುವ ಸಾಧ್ಯತೆ

11:43 AM: ಬಿಜೆಪಿಯ ಸುರೇಶ್‌ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಬಸವನಗೌಡ ಪಾಟೀಲ್, ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನ ರಾಮಲಿಂಗಾ ರೆಡ್ಡಿ ಒಳಗೊಂಡ ಸ್ಪೀಕರ್ ಪ್ಯಾನೆಲ್

11:41 AM: ಐವರು ಸದಸ್ಯರ ಸ್ಪೀಕರ್ ಪ್ಯಾನೆಲ್ ರಚಿಸಿದ ಹಂಗಾಮಿ ಸ್ಪೀಕರ್ ಬೋಪಯ್ಯ

11:40 AM: ಬಿಜೆಪಿಯ ಸುರೇಶ್ ಕುಮಾರ್, ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಅವರಿಂದ ಪ್ರಮಾಣವಚನ ಸ್ವೀಕಾರ

11:39 AM: ಸದನಕ್ಕೆ ಆಗಮಿಸಿದ ಎಚ್‌.ಡಿ. ರೇವಣ್ಣ

11:33 AM: ವಿಧಾನಸೌಧ ತಲುಪಿದರೂ ಇನ್ನೂ ಕಲಾಪಕ್ಕೆ ಬಾರದ ಎಚ್‌.ಡಿ. ರೇವಣ್ಣ

11:29 AM: ಹಂಗಾಮಿ ಸ್ಪೀಕರ್ ಬೋಪಯ್ಯ ಅವರಿಂದ ಶಾಸಕರಿಗೆ ಪ್ರತಿಜ್ಞಾವಿಧಿ ಬೋಧನೆ

11:27 AM: ಸದ್ಯ ಸದನದಲ್ಲಿರುವ ಶಾಸಕರ ಸಂಖ್ಯೆ. ಬಿಜೆಪಿ 104, ಕಾಂಗ್ರೆಸ್ 76, ಜೆಡಿಎಸ್ 37, ಇತರರು 2

11:24 AM: ಕಾಂಗ್ರೆಸ್‌ನ 78 ಶಾಸಕರ ಪೈಕಿ 76 ಶಾಸಕರು ಹಾಜರು

11:23 AM: ಬಿಜೆಪಿ, ಜೆಡಿಎಸ್‌ನ ಎಲ್ಲ ಶಾಸಕರು ಹಾಜರು

11:19 AM: ವಿಜಯನಗರ ಶಾಸಕ ಆನಂದ್‌ ಸಿಂಗ್, ಮಸ್ಕಿ ಶಾಸಕ ಪ್ರತಾಪ್ ಗೌಡ ಗೈರು

11:18 AM: ಕಲಾಪಕ್ಕೆ ಇಬ್ಬರು ಶಾಸಕರು ಮಾತ್ರ ಗೈರು: ಉಳಿದಂತೆ ಎಲ್ಲ ಶಾಸಕರು ಹಾಜರು

11:17 AM: ಸದನದ ಹಿರಿಯ ಸದಸ್ಯರಿಂದ ಪ್ರತಿಜ್ಞಾವಿಧಿ ಸ್ವೀಕಾರ

11:15 AM: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಮಾಣವಚನ ಸ್ವೀಕಾರ

11:14 AM: ವಿಧಾನಸಭೆ ಕಾರ್ಯದರ್ಶಿ ಕಲಾಪದ ವಿಡಿಯೊ ಚಿತ್ರೀಕರಣ ಮಾಡಬೇಕು: ಸುಪ್ರೀಂ ಕೋರ್ಟ್

11:12 AM: ಬೋಪಯ್ಯ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ತ್ರಿಸದಸ್ಯ ನ್ಯಾಯಪೀಠ

11:11 AM: ವಿಶ್ವಾಸಮತ ಯಾಚನೆಯ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ

11:10 AM: ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ಮುಂದುವರಿಯಲಿದ್ದಾರೆ: ಸುಪ್ರೀಂ ಕೋರ್ಟ್

11:05 AM: ವಿಧಾನಸಭೆ ಕಲಾಪ ಆರಂಭ

11:01 AM: ಬೋಪಯ್ಯ ಅವರ ವಾದ ಆಲಿಸದೇ ತೀರ್ಪು ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

10:57 AM: ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಂಡ ಬಿ.ಎಸ್‌. ಯಡಿಯೂರಪ್ಪ

10:55 AM: ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿರುವ ಕಲಾಪ: ಶಾಸಕರ ಪ್ರಮಾಣವಚನಕ್ಕೆ ಕ್ಷಣಗಣನೆ

10:54 AM: ಬಿಜೆಪಿ ಶಾಸಕರ ಜತೆ ಬಸ್‌ನಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ

10:53 AM: ವಿಧಾನಸೌಧ ತಲುಪಿದ ಬಿಜೆಪಿ ಶಾಸಕರು

10:51 AM: ಶಾಸಕರ ಪ್ರಮಾಣವಚನಕ್ಕೆ ಕ್ಷಣಗಣನೆ

10:51 AM: ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತುಕೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

10:47 AM: ಮೆಟ್ಟಿಲಿಗೆ ನಮಿಸಿ ವಿಧಾನಸೌಧದ ಒಳ ಪ್ರವೇಶಿದಿದ ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ ಹಾಗೂ ಇತರ ಕಾಂಗ್ರೆಸ್ ನಾಯಕರು

10:44 AM: ಹಂಗಾಮಿ ಸ್ಪೀಕರ್ ಬೋಪಯ್ಯ ಅವರು ವಿಶ್ವಾಸಮತ ಯಾಚನೆ ಮೇಲ್ವಿಚಾರಣೆ ನಡೆಸುವುದಕ್ಕೆ ಕಾಂಗ್ರೆಸ್‌ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ಕಪಿಲ್ ಸಿಬಲ್ ಆಕ್ಷೇಪ

10:42 AM: ವಿಧಾನಸೌಧದ ಒಳ ಪ್ರವೇಶಿಸಿದ ಕಾಂಗ್ರೆಸ್ ಶಾಸಕರು

10:42 AM: ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ನೇಮಕಕ್ಕೆ ಕಾಂಗ್ರೆಸ್ ಆಕ್ಷೇಪ: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಆರಂಭ

10:39 AM: ವಿಧಾನಸೌಧದ ಆವರಣ ತಲುಪಿದ ಕಾಂಗ್ರೆಸ್ ಶಾಸಕರು

10:29 AM: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕುತಂತ್ರ ಇಲ್ಲಿ ನಡೆಯದು: ರಾಮಲಿಂಗಾ ರೆಡ್ಡಿ

10:27 AM: ವಿಶ್ವಾಸಮತ ಯಾಚನೆಯಲ್ಲಿ ನಾವು ಗೆಲ್ಲುವುದು ಖಚಿತ: ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿಕೆ

10:25 AM: ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣದಲ್ಲಿ ಬಿಗಿ ಭದ್ರತೆ

10:22 AM: ಕಾಂಗ್ರೆಸ್‌ನವರೂ ಒಗ್ಗಟ್ಟಾಗಿದ್ದಾರೆ: ಎಚ್‌ಡಿಕೆ

10:21 AM: ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ, ಎಲ್ಲರೂ ಒಟ್ಟಾಗಿದ್ದೇವೆ: ಕುಮಾರಸ್ವಾಮಿ

10:20 AM: ಜೆಡಿಎಸ್‌ ಶಾಸಕರ ಜತೆ ಸಭೆ ನಡೆಸಲು ಹೊರಟ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ

10:18 AM: ಹೋಟೆಲ್‌ನಿಂದ ವಿಧಾನಸೌಧಕ್ಕೆ ಹೊರಟ ಕಾಂಗ್ರೆಸ್ ಶಾಸಕರು

10:17 AM: ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ವಿಧಾನಸೌಧಕ್ಕೆ ಆಗಮನ

10:16 AM: ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್ ವಿಧಾನಸೌಧಕ್ಕೆ ಆಗಮನ

10:13 AM: ವಿಧಾನಸೌಧಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

10:13 AM: ಬಿಜೆಪಿ ಶಾಸಕರಿಂದಲೂ ವಿಧಾನಸೌಧಕ್ಕೆ ತೆರಳಲು ಸಿದ್ಧತೆ

10:12 AM: ಕೆಲವೇ ಕ್ಷಣಗಳಲ್ಲಿ ಹೋಟೆಲ್‌ನಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿರುವ ಕಾಂಗ್ರೆಸ್, ಜೆಡಿಎಸ್ ಶಾಸಕರು

10:08 AM: ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕರು

10:08 AM: ಇಂದು ಸಂಜೆ 4ಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಂದ ವಿಶ್ವಾಸಮತ ಯಾಚನೆ

ಕೃಪೆ: ಪ್ರಜಾವಾಣಿ


Spread the love