ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಸಂದೇಶಗಳನ್ನು ಹಾಕುತ್ತಿದ್ದವನ ಬಂಧನ

Spread the love

ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಸಂದೇಶಗಳನ್ನು ಹಾಕುತ್ತಿದ್ದವನ ಬಂಧನ

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಸಂದೇಶಗಳನ್ನು ಹಾಕುತ್ತಿದ್ದ ಆರೋಪದ ಮೇಲೆ ಮಂಗಳೂರು ದಕ್ಷಿಣ ಠಾಣಾ ಪೋಲಿಸರು ಒರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಬೆಳ್ತಂಗಡಿ ಕಕ್ಕಿಂಜೆ ನಿವಾಸಿ ಶ್ರೀ ಹರಿ ಯಾನೆ ಹರೀಶ್ ದೇವಾಡಿಗ (22) ಎಂದು ಗುರುತಿಸಲಾಗಿದೆ.

ಮಂಗಳೂರು ಎಸ್ ಎಫ್ ಐ ಸಂಘಟನೆಯ ಕಾರ್ಯಕರ್ತರಾದ ಮಾಧುರಿ ಹಾಗೂ ಇತರರು ಸಂಘಟನೆಯ ಕೆಲಸದ ನಿಮಿತ್ತ ಹೋಗುವಾಗ ಜೊತಯಾಗಿ ತೆಗೆದಿರುವ ಭಾವಚಿತ್ರವನ್ನು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದಿ ಈ ಭಾವಚಿತ್ರವನ್ನು ಕೆಲವೊಂದು ವಾಟ್ಸ್ ಪ್ ಗೂಪುಗಳಲ್ಲಿ ಡೌನ್ ಲೋಡ್ ಮಾಡಿಕೊಂಡು ಈ ಭಾವಚಿತ್ರದ ಜೊತೆಗೆ ಬೆದರಿಕೆ ಸಂದೇಶಗಳನ್ನು ಹಾಕುತ್ತಿರುವ ಬಗ್ಗೆ ಎಸ್ ಎಫ್ ಐ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಯವುರ ಮಂಗಳೂರು ದಕ್ಷಿಣ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರಂತೆ ತನಿಖೆ ಕೈಗೊಂಡ ಪೋಲಿಸರು ಆರೋಪಿ ಹರೀಶ್ ದೇವಾಡಿಗನನ್ನು ಮಂಗಳೂರು ಪಂಪ್ ವೆಲ್ ಬಳಿಯಿಂದ ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಮೊಬೈಲ್ ಹ್ಯಾಂಡ್ ಸೆಟ್ಟನ್ನು ವಶಪಡಿಸಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಕೆಲವೊಂದ ಆರೋಪಿಗಳ ಪತ್ತೆಗೆ ಬಾಕಿ ಇದ್ದು ಪತ್ತೆ ಕಾರ್ಯ ಮುಂದುವರೆದಿದೆ.


Spread the love