ಸಿದ್ದರಾಮಯ್ಯ ಡರ್ಟಿ ಗೇಮ್ ಪಾಲಿಟಿಕ್ಸ್ ಮಾಡಲು ನಿಪುಣರು – ಶೋಭಾ ಕರಂದ್ಲಾಜೆ

Spread the love

ಸಿದ್ದರಾಮಯ್ಯ ಡರ್ಟಿ ಗೇಮ್ ಪಾಲಿಟಿಕ್ಸ್ ಮಾಡಲು ನಿಪುಣರು – ಶೋಭಾ ಕರಂದ್ಲಾಜೆ

ಉಡುಪಿ: ಸಿದ್ದರಾಮಯ್ಯ ತನ್ನ ರಾಜಕೀಯದಲ್ಲಿ ಸದಾ ಡರ್ಟಿ ಗೇಮ್ ಮಾಡಿಕೊಂಡೇ ಬಂದಿದ್ದು, ನಿರಂತರ ಬ್ಲ್ಯಾಕ್ ಮೇಲ್ ಮಾಡಿಕೊಂಡು ರಾಜಕಾರಣ ಮಾಡಿದವರು ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಅವರು ಸೋಮವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಜೆಡಿಎಸ್ ಬಿಟ್ಟನಂತರ ಕಾಂಗ್ರೆಸನ್ನು ಬ್ಲ್ಯಾಕ್ ಮೈಲ್ ಮಾಡುತ್ತಲೇ ಇದ್ದ ಸಿದ್ದರಾಮಯ್ಯ, ಬ್ಲ್ಯಾಕ್ ಮೇಲ್ ಮಾಡಿಕೊಂಡೇ ಐದು ವರ್ಷ ಸಿಎಂ ಆಗಿದ್ದರು. ವಿಪಕ್ಷ ನಾಯಕನಾಗಿದ್ದೂ ಬ್ಲ್ಯಾಕ್ ಮೇಲ್ ಮಾಡಿಕೊಂಡೇ ಬಂದ ಸಿದ್ದರಾಮಯ್ಯನಿಂದ ಯಾರೂ ಕಲಿಯುವ ಅಗತ್ಯವಿಲ್ಲ ಸಿದ್ದರಾಮಯ್ಯ ನವರ ಕೆಟ್ಟ ಪಾಠ, ಮುಂದಿನ ಪೀಳಿಗೆಗೆ ಕೆಟ್ಟ ಸಂದೇಶ ಆಗುತ್ತದೆ ಎಂದರು.

ಅನರ್ಹ ಶಾಸಕರ ವಿಚಾರದಲ್ಲಿ ಸಿ ಎಮ್ ಯಡ್ಯೂರಪ್ಪ ಅವರ ಆಡೀಯೊ ಕುರಿತು ಪ್ರತಿಕ್ರಿಯಿಸಿದ ಶೋಭಾ ಅನರ್ಹ ಶಾಸಕರು ಅವರಿಗೆ ಬೇಕಾದ ಪಕ್ಷಕ್ಕೆ ಸೇರಬಹುದು ಅಲ್ಲದೆ ಅವರು ಯಾವುದೇ ಬಂಧನದಲ್ಲಿ ಇಲ್ಲ, ಅವರು ಅವರ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ನಂಬರ್ ಗೇಮ್ ನಲ್ಲಿ ನಮ್ಮ ಸರಕಾರ ರಚನೆಯಾಗಿದೆ ಮತ್ತು ಅನರ್ಹರ ಕಾರಣಕ್ಕಾಗಿ ಬಿಜೆಪಿ ಸರಕಾರ ರಚನೆಯಾಗಿದೆ. ಈ ಅಂಶವನ್ನು ಯಡಿಯೂರಪ್ಪ ಮಾತನಾಡಿದ್ದಾರೆ ಇದರಲ್ಲಿ ತಪ್ಪು, ಅನ್ಯಾಯದ ಪ್ರಶ್ನೆ ಬರಲ್ಲ. 17 ಜನ ಶಾಸಕರು ಇಚ್ಚೆ ಪಡುವ ಪಕ್ಷದಿಂದ ಸ್ಪರ್ಧೆ ಮಾಡುತ್ತಾರೆ ಅನರ್ಹರನ್ನು ಬಿಜೆಪಿಗೆ ಸೇರಿಸಲು ಪ್ರಯತ್ನಪಡುತ್ತಿದ್ದೇವೆ ಅವರು ಖಂಡಿತಾ ಬಿಜೆಪಿಗೆ ಬರಬಹುದು, ಸ್ಪರ್ಧಿಸಬಹುದು ಎಂದರು.

ಕಾಂಗ್ರೆಸ್ ನಾಯಕ ವಿಜಯ ಶಂಕರ್ ಬಿಜೆಪಿಗೆ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ವಿಜಯ ಶಂಕರ್ ಅವರ ಜನಾಂಗದಲ್ಲೇ ಸಜ್ಜನ ವ್ಯಕ್ತಿ ಸಿದ್ದರಾಮಯ್ಯ ನ ಸ್ವಂತ ನೆಲದಲ್ಲಿ ಕಾಂಗ್ರೆಸ್ ಬಿಡುತ್ತಿದ್ದಾರೆ ಇದು ನಮಗೆ ಖುಷಿ ಮತ್ತು ಸಂತೋಷದ ವಿಚಾರ ಎಂದರು.

ಇಡಿಯಿಂದ ಡಿಕೆಶಿ ಬಂಧನ ವಿಚಾರವಾಗಿ ಮಾತನಾಡಿದ ಅವರು ಇಡಿ ಅಧಿಕಾರಿಗಳು ಸಾರ್ವಜನಿಕವಾಗಿ ಹೇಳಿಕೆ ಕೊಡಲ್ಲ ಇಡಿಗೆ ಯಾವುದೇ ಬಾಸ್ ಇಲ್ಲ ಇಡಿ ಸ್ವಯಂಸೇವಾ ಸಂಸ್ಥೆ. ಸ್ವಂತ ಲಾಭಕ್ಕಾಗಿ ಇಡಿಯನ್ನು ಬಳಸಬೇಡಿ ಎಂದ ಅವರು ಇಡಿ ಸಂವಿಧಾನ ಪ್ರಕಾರ ರಚಿತವಾದ ಸಂಸ್ಥೆಯಾಗಿದ್ದು ಆರು ತಿಂಗಳು, ಒಂದು ವರ್ಷ ಫಾಲೋ ಮಾಡಿ ಬಂಧಿಸಿರುತ್ತಾರೆ ಇಡಿಗೆ ಯಾವ ಬಾಸಿನ ಅಗತ್ಯ ಇರೋದಿಲ್ಲ ಎಂದರು.


Spread the love