ಸುರತ್ಕಲ್: ಕಾಂಗ್ರೆಸ್ ಹಿರಿಯ ಮುಖಂಡರಿಗೆ ಸಮ್ಮಾನ

Spread the love

ಸುರತ್ಕಲ್: ಕಾಂಗ್ರೆಸ್ ಹಿರಿಯ ಮುಖಂಡರಿಗೆ ಸಮ್ಮಾನ

ಸುರತ್ಕಲ್ : ಶವನ್ನು ಕಟ್ಟಿದ ಕಾಂಗ್ರೆಸ್ ಪಕ್ಷಕ್ಕೆ ದುಡಿದ ಅನೇಕ ನಾಯಕರು ಇಂದೂ ಪಕ್ಷದ ಏಳಿಗೆಗಾಗಿ ಚಿಂತಿಸುತ್ತಲೇ ಇರುತ್ತಾರೆ . ಅಂತಹ ನಾಯಕರನ್ನು ಗುರುತಿಸಿ, ಅವರು ನೀಡಿರುವ ಕೊಡುಗೆಯನ್ನು ಗುರುತಿಸಿ ಸಮ್ಮಾನಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಶಾಸಕ ಮೊದಿನ್ ಬಾವಾ ಹೇಳಿದರು.

ಸುರತ್ಕಲ್ 6ನೇ ವಾರ್ಡ್‌ನ ಕಾರ್ಯಕರ್ತರ ,ನಾಯಕರ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸ್ವರೂಪವೇ ಬದಲಾಗಿದೆ. ಎಲ್ಲ ಕಡೆಗಳಲ್ಲಿ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಸಮುದಾಯ ಭವನ, ರಸ್ತೆ, ಚರಂಡಿ, ಕುಡಿಯುವ ನೀರು, ಸಮುದ್ರ ಕೊರೆತ, ಹಕ್ಕು ಪತ್ರ ಹೀಗೆ ನಾನಾ ಅಭಿವೃದ್ಧಿ ಕೆಲಸವನ್ನು ಮಾಡಿದೆ. ಚುನಾವಣಾ ಪೂರ್ವದಲ್ಲಿ ನೀಡಿರುವ ಹೆಚ್ಚಿನ ಭರವಸೆಗಳು ಈಗಾಗಲೇ ಈಡೇರಿವೆ. ಮಾತ್ರವಲ್ಲದೆ ಚುನಾವಣಾ ಪೂರ್ವ ಘೋಷಣೆ ಮಾಡದ ೪೦ಕ್ಕೂ ಅಧಿಕ ಯೋಜನೆಗಳನ್ನು ಸರಕಾರ ಜಾರಿಗೆ ತಂದಿದೆ ಎಂದರು.

ಕೃಷ್ಣಾಪುರ ,ಚೊಕ್ಕಬೆಟ್ಟು ,ಕಾಟಿಪಳ್ಳ ಸಹಿತ ಈ ಪ್ರದೇಶಗಳು ಅತ್ಯುತ್ತಮ ರಸ್ತೆ, ಮಾರುಕಟ್ಟೆ , ಸಹಿತ ಅಭಿವೃದ್ಧಿ ಕೆಲಸಗಳಿಂದ ಮಿಂಚುತ್ತಿದೆ. ಸುರತ್ಕಲ್ ಕೃಷ್ಣಾಪುರ, ಗಣೇಶಪುರ ವರೆಗೆ ರಸ್ತೆಗಳು ವಿಸ್ತರಣೆಗೊಂಡು ಕಾಂಕ್ರಿಟ್‌ಮಯವಾಗಿದೆ. ಸುರತ್ಕಲ್ ಅಭಿವೃದ್ಧಿಯ ನಾಗಾಲೋಟದಲ್ಲಿದ್ದು ,ಬಡ ಜನರ ಕಷ್ಟ ಸುಖಗಳಿಗೂ ಸ್ಪಂದಿಸಿರುವ ಕಾಂಗ್ರೆಸ್ ಉಚಿತ ಅನ್ನ ಭಾಗ್ಯದಿಂದ ಹಿಡಿದು ಇಂದಿರಾ ಕ್ಯಾಂಟೀನ್ ವರೆಗೆ ಆಹಾರ ಭದ್ರತೆ ನೀಡಿದೆ.ಆರೋಗ್ಯ ,ಆಶ್ರಯ ವಸತಿ ಸಹಿತ ಜನರ ಮೂಲಭೂತ ಅವಶ್ಯಕತೆ ಪೂರೈಸಿದ ಸರಕಾರವಿದ್ದರೆ ಅದು ಕಾಂಗ್ರೆಸ್ ಪಕ್ಷ .ಈ ಪಕ್ಷವನ್ನು ಬಲಪಡಿಸಿದ ನಾಯಕರು ಹಳ್ಳಿ,ಗ್ರಾಮ,ಹೀಗೆ ಎಲ್ಲೆಡೆ ಇದ್ದು ಅವರನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯ ಎಂದರು.

ಹಂಗಾಮಿ ಅಧ್ಯಕ್ಷ ದೀಪಕ್ ಪೂಜಾರಿ ಮಾತನಾಡಿ ಅಭಿವೃದ್ಧಿ ಹೇಗೆ ಮಾಡಬಹುದು ಎಂಬುದನ್ನು ಶಾಸಕ ಮೊದಿನ್ ಬಾವಾ ತೋರಿಸಿ ಕೊಟ್ಟಿದ್ದಾರೆ.ಹೀಗಾಗಿ ಮುಂದಿನ ಬಾರಿಯೂ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಬಾವಾ ಅವರನ್ನೇ ಬಹುಮತದಿಂದ ಗೆಲ್ಲಿಸಲು ನಾವೆಲ್ಲಾ ಕಟಿಬದ್ದರಾಗ ಬೇಕಿದೆ ಎಂದರು.

ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಶಕುಂತಳಾ ಕಾಮತ್, ಕೆ.ಸದಾಶಿವ ಶೆಟ್ಟಿ, ಉಪಮೇಯರ್ ಮೊಹಮ್ಮದ್, ಹರೀಶ್ ಸುರತ್ಕಲ್ , ಮಲ್ಲಿಕಾರ್ಜುನ್, ೬ನೇ ವಾರ್ಡ್ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love