ಹಜ್ ಯಾತ್ರಿಗಳ ಸೇವೆಗೈಯ್ಯಲು ಹೊರಟ ಇಂಡಿಯಾ ಫ್ರೆಟನಿ೯ಟಿ ಫೋರಂ ರಿಯಾದ್‌ ಘಟಕದ ಮೊದಲ ತಂಡ

Spread the love

ಹಜ್ ಯಾತ್ರಿಗಳ ಸೇವೆಗೈಯ್ಯಲು ಹೊರಟ ಇಂಡಿಯಾ ಫ್ರೆಟನಿ೯ಟಿ ಫೋರಂ ರಿಯಾದ್‌ ಘಟಕದ ಮೊದಲ ತಂಡ

ರಿಯಾದ್: ಅಲ್ಲಾಹನ ಅತಿಥಿಗಳ ಸೇವನೆಗೈಯ್ಯಲು ಇಂಡಿಯಾ ಫ್ರೆಟನಿ೯ಟಿ ಫೋರಂ ರಿಯಾದ್ ಘಟಕದ ಸ್ವಯಂಸೇವಕರ ಮೊದಲ ತಂಡವು ಪರಿಶುದ್ಧ ಮಕ್ಕಾದ ಅರಫಾಗೆ ಗುರುವಾರ ರಾತ್ರಿ ಹೊರಟಿದೆ. ಈ ವರ್ಷ ಭಾರತದ ವಿವಿಧ ರಾಜ್ಯಗಳ ಸುಮಾರು 170 ಸ್ವಯಂಸೇವಕರನ್ನು ರಿಯಾದ್‌ನಿಂದ ಹಜ್ ಸೇವೆಗಳಿಗಾಗಿ ಹಲವು ಭಾಷಾ ಪರಿಜ್ಞಾನ ವಿರುವ ಕೌಶಲ್ಯಪೂರ್ಣ ಸ್ವಯಂಸೇವಕರನ್ನು ಸಜ್ಜುಗೊಳಿಸಲಾಗಿದೆ. ಇವರಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳನ್ನೊಳಗೊಂಡಂತೆ ಉತ್ತರದ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಜಾರ್ಖಂಡ್ ನ ಸ್ವಯಂಸೇವಕರ ಸೇವೆಗಳು ಅರಫಾ, ಮುಜ್ದಲಿಫಾ, ಮತ್ತು ಮಿನಾದಲ್ಲಿ ಲಭ್ಯವಿದೆ.

ಹಜ್ಜಾಜಿಗಳಿಗೆ ಉತ್ತಮ ಸೇವೆಯನ್ನು ನೀಡುವ ಸಲುವಾಗಿ ವಿವಿಧ ಹಂತಗಳಲ್ಲಿ ಸ್ವಯಂಸೇವಕರಿಗೆ ಹಜ್ ಸೇವಾ ತರಬೇತಿಯನ್ನು ನೀಡಲಾಯಿತು. ಸ್ವಯಂಸೇವಕರ ತಂಡದ ನಾಯಕರಾದ ಅಶ್ರಫ್ ವೆಂಗೂರ್ ಮತ್ತು ರವೂಫ್ ಕಲಾಯಿರವರು ತರಬೇತಿಯ ಕಾರ್ಯಗಾರವನ್ನು ನಡೆಸಿದರು. ಅಂತಿಮ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ಇಂಡಿಯಾ ಫ್ರೆಟನಿ೯ಟಿ ಫೋರಂ, ರಿಯಾದ್ ರೀಜನಲ್ ಅಧ್ಯಕ್ಷರಾದ ಇಲ್ಯಾಸ್ ತಿರೂರ್ ವಹಿಸಿದ್ದರು. ವಿವಿಧ ರಾಜ್ಯದ ಪ್ರತಿನಿಧಿಗಳಾದ ಶಬೀರ್ ಅಹ್ಮದ್ (ಮಹರಾಷ್ಟ್ರ), ಅಬ್ಸಲ್ ಹಕ್ (ಉತ್ತರ ಪ್ರದೇಶ), ಅಬ್ದುಲ್ ರಹೀಮ್ (ತಮಿಳುನಾಡು), ಅಬ್ದುಲ್ ರಜಾಕ್ (ಕೇರಳ), ಗುಫ್ರಾನ್ ಖಾನ್ (ಬಿಹಾರ), ಮುಹಮ್ಮದ್ ಆಸಿಫ್ (ಆಂಧ್ರಪ್ರದೇಶ), ಹುಸೇನ್ ಸಯೀದ್ (ಪಶ್ಚಿಮ ಬಂಗಾಳ) ಸಭೆಯಲ್ಲಿ ಭಾಗವಹಿಸಿದರು.

ತರಬೇತಿ ಪಡೆದ ಫ್ರೆಟನಿ೯ಟಿ ಫೋರಂನ ಸ್ವಯಂಸೇವಕರ ಸೇವೆಗಳು ಭಾರತೀಯರು ಸೇರಿದಂತೆ ಎಲ್ಲಾ ದೇಶಗಳ
ಹಜ್ ಯಾತ್ರಾರ್ಥಿಗಳಿಗೆ ಮುಖ್ಯವಾಗಿ ಮಿನಾದಲ್ಲಿ ವಸತಿ ಸೌಕರ್ಯಗಳನ್ನು ಹುಡುಕಲು ಸಹಾಯ ಮಾಡುವ ಹಜ್ ನಕ್ಷೆ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕವಾಗಿರುತ್ತದೆ. ಇಂಡಿಯಾ ಫ್ರೆಟನಿ೯ಟಿ ಫೋರಂ ಸೌದಿ ಅರಬಿಯಾದ ಸ್ವಯಂ ಸೇವಕರು ಭಾರತೀಯ ಹಜ್ ಯಾತ್ರಿಕರ ಮೊದಲ ದಿನದಿಂದ ಮಕ್ಕಾ ಮತ್ತು ಮದೀನದಲ್ಲಿ 24 ಗಂಟೆಗಳ ಕಾಲ ಸೇವೆ ಸಲ್ಲಿಸುತ್ತಿದೆ. ಸ್ವಯಂಸೇವಕರು ಹಜ್ಜಾಜಿಗಳಿಗೆ ವೈದ್ಯಕೀಯ ನೆರವು, ನೀರು ಸರಬರಾಜು, ಗಾಲಿಕುರ್ಚಿ ಅಳವಡಿಕೆ ಮತ್ತು ದಾರಿತಪ್ಪಿದವರನ್ನು ಸರಿಯಾದ ಸ್ಥಳಕ್ಕೆ ಮುಟ್ಟಿಸುವುದು ಮುಂತಾದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಇಂಡಿಯಾ ಫ್ರಟರ್ನಿಟಿ ಫೋರಂ ಕಳೆದ 19 ವರ್ಷಗಳಿಂದ ಹಜ್ ಸ್ವಯಂಸೇವಕ ಸೇವೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ.


Spread the love