‘ಹಸಿರು ಕರ್ನಾಟಕ’ ಕಾರ್ಯಕ್ರಮ ಆಚರಣೆ 

Spread the love

‘ಹಸಿರು ಕರ್ನಾಟಕ’ ಕಾರ್ಯಕ್ರಮ ಆಚರಣೆ 

ಮಂಗಳೂರು :- ಆಗಸ್ಟ್ 16 ರಂದು ‘ಲೆಟ್ಸ್ ಥ್ಯಾಂಕ್ ಫೌಂಡೇಶನ್ ಮಂಗಳೂರು’ ಮತ್ತು ‘ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು, (ಪ್ರೌಢಶಾಲಾ ವಿಭಾಗ) ಕಾವೂರು’ ಮಂಗಳೂರು, ಇವರ ಸಹಪ್ರಾಯೋಜಕತ್ವದಲ್ಲಿ ‘ಹಸಿರು ಕರ್ನಾಟಕ’ ಕಾರ್ಯಕ್ರಮ ಆಚರಿಸಲಾಯಿತು.

ಸಂಸ್ಥೆಯ ಎದುರುಗಡೆ ಇರುವ ಎತ್ತರ ಸ್ಥಳವನ್ನು ಸಮತಟ್ಟು ಮಾಡಿ, ಹಸಿರು ಪರಿಸರಕ್ಕಾಗಿ ಈ ಕಾರ್ಯಕ್ರಮದಲ್ಲಿ ‘ಲೆಟ್ಸ್ ಥ್ಯಾಂಕ್ ಫೌಂಡೇಶನ್ ಮಂಗಳೂರು’ ಇವರು ನೀಡಿದ 100 ಗಿಡಗಳನ್ನು ನೆಡಲಾಯಿತು. ಅವುಗಳ ಪೋಷಣೆಯ ಹೊಣೆಗಾಗಿ ವಿದ್ಯಾರ್ಥಿಗಳು ‘ಲೆಟ್ಸ್ ಥ್ಯಾಂಕ್ ಫೌಂಡೇಶನ್’ ಸಂಸ್ಥೆಯವರು ಹಾಗೂ ಶಿಕ್ಷಕರು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಮಲ್ಲೇಶ್ ನಾಯಕ್ ಎ.ಸಿ. ಇವರು “ಪ್ರತಿಯೊಬ್ಬ ವಿದ್ಯಾರ್ಥಿಯು ಪರಿಸರದ ರಕ್ಷಕನಾದರೆ , ಪರಿಸರ ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತದೆ.” ಎಂದರು. ಮುಖ್ಯ ಅತಿಥಿಯಾದ ಪರಿಸರವಾದಿ ಕೆ. ಕೃಷ್ಣಪ್ಪ “ ಇಂದಿನ ಪರಿಸರದ ಉಳಿವು ಮುಂದಿನ ಪೀಳಿಗೆಗೆ ಇಂದಿನ ವಿದ್ಯಾರ್ಥಿಗಳಿಂದಲೇ ಪ್ರಾರಂಭಿಸಿ ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಇಂತಹ ಕಾರ್ಯಕ್ರಮ ಸೂಕ್ತ” ಎಂದು ಕಿವಿಮಾತು ಹೇಳಿದರು.

ಎಸ್‍ಡಿಎಂಸಿ ಅಧ್ಯಕ್ಷೆ ಭಾರತಿ, ಸಹಶಿಕ್ಷಕಿ, ಸುಜಯ ಬೇಕಲ್, ಇನ್ನೋರ್ವ ಅತಿಥಿ ‘ಲೆಟ್ಸ್ ಥ್ಯಾಂಕ್ ಫೌಂಡೇಶನ್’ ನ ನಿತಿನ್ ಆರ್ಮುಗಮ್ , ಶಶಾಂಕ್, ನಿಶಾಂತ್, ಮತ್ತು ಎಲ್ಲಾ ಸಹಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಜೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.


Spread the love