ಹಿಂಸಾತ್ಮಕ ರೀತಿಯಲ್ಲಿ ದನ ಸಾಗಾಟ – ಓರ್ವನ ಬಂಧನ

Spread the love

ಹಿಂಸಾತ್ಮಕ ರೀತಿಯಲ್ಲಿ ದನ ಸಾಗಾಟ – ಓರ್ವನ ಬಂಧನ

ಮಂಗಳೂರು: ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂಸಾತ್ಮಕರ ರೀತಿಯಲ್ಲಿ ದನ ಸಾಗಾ ಮಾಡುತ್ತಿದ್ದ ವ್ಯಕ್ತಿಗಳನ್ನು ಪೋಲಿಸರು ಬಂಧಿಸಿದ್ದಾರೆ

.ಸಪ್ಟೆಂಬರ್ 4ರಂದು ಸಂಜೆ 6 ಗಂಟೆಗೆ ಈ ಪ್ರಕರಣದ ಪಿರ್ಯಾದಿದಾರರಾದ ಡಿ.ಎನ್ ಈರಯ್ಯ ಪಿ.ಎಸ್.ಐ ಬೆಳ್ಳಾರೆ ಪೊಲೀಸ್ ಠಾಣೆರವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಸುಳ್ಯ ತಾಲೂಕು ಎಡಮಂಗಲ ಗ್ರಾಮದ ಮರ್ದುರಡ್ಕ ಪಟ್ಟದಮೂಲೆ ಎಂಬಲ್ಲಿ ಮರ್ದುರಡ್ಕ ಕಲ್ಲೆಂಬಿ ರಸ್ತೆಯಲ್ಲಿ ಮರ್ದುರಡ್ಕ ಕಡೆಯಿಂದ ಮಹೀಂದ್ರ ಬೊಲೇರೋ ಪಿಕ್ ಅಪ್ ಬರುವುದನ್ನು ಕಂಡು ಸಂಶಯಗೊಂಡು ಜೀಪಿನಿಂದ ಇಳಿದು ಬೊಲೇರೋ ಪಿಕ್ ಅಪ್ ವಾಹನವನ್ನು ನಿಲ್ಲಿಸಿದಾಗ ಇಬ್ಬರು ವಾಹನದಿಂದ ಇಳಿದು ಓಡಿ ಪರಾರಿಯಾಗಿದ್ದು, ಪರಿಶೀಲಿಸಲಾಗಿ ಅದರ ನೋಂದಣಿ ನಂಬ್ರ KA 12 A 9791 ಆಗಿದ್ದು ಬೊಲೇರೋ ಪಿಕ್ ಅಪ್ ವಾಹನದೊಳಗೆ ಎರಡು ಜಾನುವಾರುಗಳನ್ನು ಕೈ ಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ತುಂಬಿರುವುದು ಕಂಡು ಬಂದಿದ್ದು, ಚಾಲಕರಾಗಿ ಸುಳ್ಯ ನಿವಾಸಿ ರಾಧಾಕೃಷ್ಣ. ಕೆ ಇದ್ದು ಹಾಗೂ ಆತನಲ್ಲಿ ಪರಾರಿಯಾದ ವ್ಯಕ್ತಿಗಳ ಬಗ್ಗೆ ಕೇಳಲಾಗಿ ಒಬ್ಬನ ಹೆಸರು ಮಹಮ್ಮದ್ ಯಾನೆ ಮೈಮು ಮತ್ತು ಇನ್ನೋರ್ವನ ಹೆಸರು ತಿಳಿದಿಲ್ಲವಾಗಿ ತಿಳಿಸಿದ್ದು ಹಾಗೂ ಪಿಕ್ ಅಪ್ ವಾಹನದಲ್ಲಿ ತುಂಬಿದ ಜಾನುವಾರುಗಳ ಕುರಿತು ವಿಚಾರಿಸಲಾಗಿ ಸಮಂಜಸ ವಿವರಣೆಯನ್ನು ನೀಡಿರುವುದಿಲ್ಲ ಮತ್ತು ದಾಖಲೆಯನ್ನು ಹಾಜರು ಪಡಿಸಿರುವುದಿಲ್ಲವಾದ್ದರಿಂದ ಆರೋಪಿಗಳು ಎಲ್ಲಿಂದಲೋ ಜಾನುವಾರುಗಳನ್ನು ಕಳವು ಮಾಡಿ ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದು, ಸದ್ರಿ ಆರೋಪಿತರನ್ನು ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದು ವಶಕ್ಕೆ ಪಡೆದುಕೊಂಡ ಎರಡು ಎ ಒಟ್ಟು ಮೌಲ್ಯ ರೂ 8,000/- ಹಾಗೂ ಬೊಲೇರೋ ಪಿಕ್ ಅಪ್ ವಾಹನದ ಮೌಲ್ಯ ರೂ 4 ಲಕ್ಷ ಆಗಬಹುದು

ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love