ಮಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿಯೇ ಆಧಾರ್ 

Spread the love

ಮಂಗಳೂರು : ದ.ಕ ಜಿಲ್ಲೆಯಲ್ಲಿ ಪ್ರಸ್ತುತ 1,15,000 ವಿದ್ಯಾರ್ಥಿಗಳು ಆಧಾರ್ ನೊಂದಣಿ ಮಾಡಿಸದೇ ಇರುವುದನ್ನು ಗಮನಿಸಿ ಸರಕಾರ ಶಾಲೆಗಳಲ್ಲಿಯೇ ಶಾಲಾ ವಿದ್ಯಾರ್ಥಿಗಳಿಗೆ ಆಧಾರ್ ನೊಂದಣಿ ಮಾಡಿಸುವ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿರುತ್ತದೆ.

ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಮಂಗಳೂರು ‘ಎ’, ಮುಲ್ಕಿ, ಬಂಟ್ವಾಳ, ಮತ್ತು ವಿಟ್ಲ, ಪುತ್ತೂರು, ಉಪ್ಪಿನಂಗಡಿ, ಸುಳ್ಯ ತಾಲೂಕಿನ ಪಂಜ. ಬೆಳ್ತಂಗಡಿ ತಾಲೂಕಿನ ವೇಣೂರು ಮತ್ತು ಕೊಕ್ಕಡ, ಮೂಡಬಿದ್ರೆ ಮತ್ತು ಕಡಬ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿರುವ ಆಧಾರ್ ಕಿಟ್ ಗಳನ್ನು ಈ ಅಭಿಯಾನಕ್ಕೆ ನಿಯೋಜಿಸಲಾಗಿದೆ. ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಆಧಾರ್ ನೊಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಎಂದು ಅಪರ ಜಿಲ್ಲಾಧಿಕಾರಿ ಕುಮಾರ ಅವರು ಪ್ರಕಟಣೆಯಲ್ಲ ತಿಳಿಸಿದ್ದಾರೆ.

ಹಣ್ಣು ತರಕಾರಿ ಸಂಗ್ರಹಣಾ ಘಟಕ ಹಾಗೂ ಆಧುನಿಕ ಮಾರಾಟ ಮಳಿಗೆ ಉದ್ಘಾಟನೆ

ಮ0ಗಳೂರು: ದ.ಕ ಜಿಲ್ಲಾ ಮತ್ತು ಉಡುಪಿ ಜಿಲ್ಲಾ ಹಾಪ್ ಕಾಮ್ಸ್, ಮಂಗಳೂರು ಕರ್ನಾಟಕ ರಾಜ್ಯ ತೋಟಗಾರಿಕೆ ಮಹಾಮಂಡಳ ಬೆಂಗಳೂರು ಇದರ ವತಿಯಿಂದ  ದ.ಕ ಮತ್ತು ಉಡುಪಿ ವ್ಯಾಪ್ತಿಯಲ್ಲಿ ಹೊಸದಾಗಿ ಸ್ಥಾಪಿಸಲಾದ ಹಣ್ಣು, ತರಕಾರಿ ಸಂಗ್ರಹಣಾ ಘಟಕ ಹಾಗೂ ಆಧುನಿಕ ಮಾರಾಟ ಮಳಿಗೆಗಳ ಉದ್ಘಾಟನಾ ಕಾರ್ಯಕ್ರಮವು ಡಿ.9 ರಂದು ಬೆ: 9.30ಕ್ಕೆ ಪಡೀಲ್ ವೃತ್ತ ಮಂಗಳೂರು, ಇಲ್ಲಿ ತೆರೆಯಲಿದೆ.

ಜಿಲ್ಲಾಧಿಕಾರಿ  ಎ.ಬಿ.ಇಬ್ರಾಹಿಂ ರವರು ಆಧುನಿಕ ಮರಾಟ ಮಳಿಗೆಯನ್ನು ಉದ್ಘಾಟಿಸಲಿರುವರು. ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ದ.ಕ ಜಿಲ್ಲಾ ಪಂಚಾಯತ್, ಪಿ.ಐ. ಶ್ರೀವಿದ್ಯಾ ರವರು ಸಂಗ್ರಹಣಾ ಘಟಕ ಉದ್ಘಾಟನೆಯನ್ನು ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


Spread the love