3 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಗೆ ಮಂಜೂರಾತಿ- ಶಾಸಕ ಕಾಮತ್

Spread the love

3 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಗೆ ಮಂಜೂರಾತಿ- ಶಾಸಕ ಕಾಮತ್

ಮಂಗಳೂರು: ಮಂಗಳೂರಿನ ಗಾಂಧಿಪಾರ್ಕ್ ನ ಆವರಣಗೋಡೆ ನಿರ್ಮಾಣ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರ ಉಪಸ್ಥಿತಿಯಲ್ಲಿ ಸ್ಥಳೀಯ ಪಾಲಿಕೆ ಸದಸ್ಯೆ ಜಯಂತಿ ಆಚಾರ್ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್ ಅವರು ಅಂದಾಜು 15.7 ಲಕ್ಷ ರೂಪಾಯಿ ವೆಚ್ಚದಲ್ಲಿ ಆವರಣಗೋಡೆ ನಿರ್ಮಾಣ ಕಾರ್ಯ ನಡೆಯಲಿದೆ. ಇಲ್ಲಿ ಸಾಕಷ್ಟು ಜನರು ವಾಕಿಂಗ್ ಮತ್ತು ವಾಯು ವಿಹಾರಕ್ಕೆ ಬರುತ್ತಾರೆ. ಹಾಗಾಗಿ ಪಾರ್ಕಿನ ಸರ್ವತೋಮುಖ ಬೆಳವಣಿಗೆಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಅದನ್ನು ಕೂಡ ಅನುಷ್ಟಾನಗೊಳಿಸಲಾಗುವುದು ಎಂದು ತಿಳಿಸಿದರು. ಲೋಕಸಭಾ ಚುನಾವಣೆಯ ಬಳಿಕ ಮಣ್ಣಗುಡ್ಡೆ ಗುರ್ಜಿ ಜಂಕ್ಷನ್ ನಿಂದ ಉರ್ವಾ ಮಾರ್ಕೆಟ್ ಜಂಕ್ಷನ್ ತನಕ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಏಳು ಮೀಟರ್ ಅಗಲದ ಕಾಂಕ್ರೀಟ್ ರಸ್ತೆ ನಿರ್ಮಿಸುವ ಕಾಮಗಾರಿಗೆ ಮಂಜೂರಾತಿ ಸಿಕ್ಕಿದೆ. ಚುನಾವಣೆಯ ಬಳಿಕ ಟೆಂಡರ್ ಆಗಲಿದೆ ಎಂದು ಶಾಸಕ ಕಾಮತ್ ಹೇಳಿದರು.

ಕಾರ್ಯಕ್ರಮದಲ್ಲಿ ಮನಪಾ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಮನಪಾ ಸದಸ್ಯೆ ಪೂರ್ಣಿಮಾ, ಮಾಜಿ ಸದಸ್ಯ ವೆಂಕಟೇಶ್ ಆಚಾರ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಸಂತ ಜೆ ಪೂಜಾರಿ, ಮಂಡಲ ಉಪಾಧ್ಯಕ್ಷ ಮೋಹನ ಆಚಾರ್, ಪಾರ್ಕ್ ಸಮಿತಿ ಕಾರ್ಯದರ್ಶಿ ವಂದನಾ ನಾಯಕ್, ವಾರ್ಡ್ ಅಧ್ಯಕ್ಷ ವಸಂತ ಶೇಟ್, ಕಾರ್ಯದರ್ಶಿ ಮಹೇಶ್ ಕುಂದರ್, ವಾರ್ಡ್ ಸದಸ್ಯರಾದ ಗುರುಚರಣ್ ಎಚ್ ಆರ್, ಕೇಶವ ಪ್ರಭು, ದಿವಾಕರ್ ನಾಯಕ್, ಅನಂತ ಕೃಷ್ಣ ಕಾಮತ್ ಉಪಸ್ಥಿತರಿದ್ದರು.


Spread the love