58 ವರ್ಷದ ಮಹಿಳೆಯಲ್ಲಿ ಕೊರೋನಾ ಸೋಂಕು ದೃಢ – ಬೋಳೂರು ಪರಿಸರ ಸೀಲ್ ಡೌನ್

Spread the love

58 ವರ್ಷದ ಮಹಿಳೆಯಲ್ಲಿ ಕೊರೋನಾ ಸೋಂಕು ದೃಢ – ಬೋಳೂರು ಪರಿಸರ ಸೀಲ್ ಡೌನ್

ಮಂಗಳೂರು: 58 ವರ್ಷದ ಮಹಿಳೆಯಲ್ಲಿ ಕೊರೋನಾ ಸೋಂಕು ದೃಢಗೊಂಡ ಹಿನ್ನೆಲೆಯಲ್ಲಿ ಬೋಳೂರು ಪರಿಸರದಲ್ಲಿ ಸೀಲ್ಡೌನ್ ಮಾಡಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಗುರುವಾರ ಆದೇಶ ಹೊರಡಿಸಿದ್ದಾರೆ.

ಬೋಳೂರು ಪೂರ್ವದ ಜೇಮ್ಸ್ ಡಿಸೋಜಾರ ಮನೆಯಿಂದ ಪಶ್ಚಿಮದಲ್ಲಿ ಹಿಂದೂ ರುದ್ರ ಭೂಮಿ ಉತ್ತರದಲ್ಲಿ ಹೋಟೆಲ್ ಬಿಜೆ ಮತ್ತು ಹೋಟೇಲ್ ವಿನಾಯಕ, ಸುಲ್ತಾನ್ ಬತ್ತೆರಿ ರಸ್ತೆ, ದಕ್ಷಿಣದಲ್ಲಿ ಹಿಂದೂ ರುದ್ರ ಭೂಮಿ ಜಾಗದ ಸುತ್ತ ಕಂಟೈನ್ಮೆಂಟ್ ಪ್ರದೇಶವಾಗಿ ಘೋಷಿಸಲಾಗಿದೆ. ಈ ಭಾಗದ 135 ಮನೆಗಳು, 12 ಕಚೇರಿಗಳು ಸಂಪೂರ್ಣ ಕಂಟೈನ್ಮೆಂಟ್ ವ್ಯಾಪ್ತಿಗೊಳಪಡಿಸಲಾಗಿದೆ.

ಅಲ್ಲಿಂದ 5 ಕಿಮಿ ಸುತ್ತಮುತ್ತಲಿನ ಪೂರ್ವ ಬೊಂದೆಲ್, ಪಶ್ಚಿಮದ ಅರಬಿ ಸಮುದ್ರ ಪ್ರದೇಶ, ಉತ್ತರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಮ್ ಸಿ ಎಫ್, ದಕ್ಷಿಣದಲ್ಲಿ ನೇತ್ರಾವತಿ ನದಿ ಪ್ರದೇಶಗಳನ್ನು ಬಫರ್ ಝೋನ್ ಆಗಿ ಘೋಷಿಸಲಾಗಿದೆ. ಈ ಬಫರ್ ಝೋನ್ ವ್ಯಾಪ್ತಿಗೆ 16350 ಮನೆಗಳು, 1275 ಅಂಗಡಿ ಮತ್ತು ಕಚೇರಿಗಳು, 79800 ಜನರು ಈ ಬಫರ್ ಝೋನ್ ವ್ಯಾಪ್ತಿಗೊಳಪಡುತ್ತಾರೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love