ಬೆಂಗಳೂರು – ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ರದ್ದು

Spread the love

ಬೆಂಗಳೂರು – ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ರದ್ದು

ಮಂಗಳೂರು: ಜೂನ್ 3ರಂದು ನಿಗದಿಯಾಗಿದ್ದ ಬಹು ನಿರೀಕ್ಷಿತ ಬೆಂಗಳೂರು – ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ (ಟ್ರಯಲ್) ಸಂಚಾರವನ್ನು ದಕ್ಷಿಣ ಪಶ್ಚಿಮ ರೈಲ್ವೆ ಇಲಾಖೆ ದಿಢೀರನೆ ರದ್ದುಗೊಳಿಸಿದೆ.

ಸ್ಥಳೀಯ ವಾಣಿಜ್ಯ ಡೈರೆಕ್ಟರಿ ಈ ಕುರಿತು ದಕ್ಷಿಣ ಪಶ್ಚಿಮ ರೈಲ್ವೆಯ ಮುಖ್ಯ ಪ್ರಯಾಣಿಕ ಸಂಚಾರ ವ್ಯವಸ್ಥಾಪಕರ (CPTM) ಕಚೇರಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದ್ದು, ಸಂಬಂಧಪಟ್ಟ ಎಲ್ಲ ವಿಭಾಗಗಳಿಗೆ ಮಾಹಿತಿ ರವಾನಿಸಲಾಗಿದೆ. ಇದರಿಂದಾಗಿ ಟ್ರಯಲ್ ರನ್‌ಗೆ ಸಂಬಂಧಿಸಿದಂತೆ ನಿಗದಿಪಡಿಸಲಾಗಿದ್ದ ಎಲ್ಲ ಕಾರ್ಯಾಚರಣೆಗಳು ಮತ್ತು ಮರು ನಿಗದಿತ ನಿಲ್ದಾಣ ವ್ಯವಸ್ಥೆಗಳನ್ನು ಹಿಂತೆಗೆದುಕೊಳ್ಳಲಾಗಿದೆ.ದಕ್ಷಿಣ ಪಶ್ಚಿಮ ರೈಲ್ವೆಯ ಸಂದೇಶ ಸಂಖ್ಯೆ T.454/YPR-MAQ ವಂದೇ ಭಾರತ್/2026-27(241) ದಿನಾಂಕ 31.05.2026ರ ಪ್ರಕಾರ, ಜೂನ್ 3ರಂದು ಯಶವಂತಪುರ (YPR)–ಮಂಗಳೂರು (MAQ)–ಯಶವಂತಪುರ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಟ್ರಯಲ್ ರನ್ ನಡೆಸುವ ಪ್ರಸ್ತಾವನೆಯನ್ನು ಕೈಬಿಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ರೂಪಿಸಲಾಗಿದ್ದ ಯೋಜನೆಯ ಪ್ರಕಾರ, ಜೂನ್ 3ರಂದು ಬೆಳಗ್ಗೆ ಯಶವಂತಪುರದಿಂದ ಹೊರಟು ಮಂಗಳೂರು ತಲುಪಿ, ಪುನಃ ಬೆಂಗಳೂರಿಗೆ ಮರಳುವ ರೀತಿಯಲ್ಲಿ 8 ಬೋಗಿಗಳ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಲು ಸಿದ್ಧತೆ ನಡೆಸಲಾಗಿತ್ತು. ರೈಲಿನ ವೇಗ, ಹಳಿ ಸಾಮರ್ಥ್ಯ, ಸುರಂಗ ಹಾಗೂ ಪ್ರಮುಖವಾಗಿ ಶಿರಾಡಿ ಘಾಟ್ ವಿಭಾಗದ ತಾಂತ್ರಿಕ ಅಂಶಗಳನ್ನು ಪರಿಶೀಲಿಸುವ ಉದ್ದೇಶದಿಂದ ಈ ಸಂಚಾರ ಮಹತ್ವ ಪಡೆದಿತ್ತು. ಕಠಿಣ ಘಾಟ್ ರಸ್ತೆಯಲ್ಲಿ ಹೈಸ್ಪೀಡ್ ರೈಲಿನ ಕಾರ್ಯಕ್ಷಮತೆ ಹೇಗಿರಲಿದೆ ಎಂಬುದನ್ನು ನೋಡಲು ಕರಾವಳಿಯ ಜನತೆ ಮತ್ತು ರೈಲು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿತ್ತು.
ರೈಲ್ವೆ ಇಲಾಖೆಯು ಟ್ರಯಲ್ ರನ್ ರದ್ದುಗೊಳಿಸುವಿಕೆಗೆ ಯಾವುದೇ ನಿಖರವಾದ ಕಾರಣವನ್ನು ಪ್ರಕಟಿಸಿಲ್ಲ. ಆದರೆ, ಅಗತ್ಯ ರೇಕ್ ಲಭ್ಯತೆ (ರೈಲು ಬೋಗಿಗಳು), ಕಾರ್ಯಾಚರಣಾ ಆದ್ಯತೆಗಳು ಹಾಗೂ ಇತರ ತಾಂತ್ರಿಕ ಕಾರಣಗಳು ಇದಕ್ಕೆ ಕಾರಣವಾಗಿರಬಹುದು ಎಂದು ಮೂಲಗಳು ತಿಳಿಸಿವೆ.ಸ್ಥಳೀಯ ವಾಣಿಜ್ಯ ಡೈರೆಕ್ಟರಿ

ಪ್ರಸ್ತುತ ಶಿರಾಡಿ ಘಾಟ್ ವಿಭಾಗದಲ್ಲಿ ಸರಕು (ಗೂಡ್ಸ್) ರೈಲುಗಳ ಸಂಚಾರ ನಿರಂತರವಾಗಿ ನಡೆಯುತ್ತಿದ್ದು, ಹಳಿ ಮತ್ತು ಮೂಲಸೌಕರ್ಯ ಬಳಕೆಯಲ್ಲಿ ಯಾವುದೇ ಪ್ರಮುಖ ಅಡಚಣೆ ಇಲ್ಲ. ಆದಾಗ್ಯೂ ವಂದೇ ಭಾರತ್ ಟ್ರಯಲ್ ರನ್‌ಗೆ ಅಗತ್ಯವಿರುವ ವಿಶೇಷ ತಾಂತ್ರಿಕ ವ್ಯವಸ್ಥೆಗಳು ಮತ್ತು ರೈಲು ರೇಕ್ ಲಭ್ಯತೆಯ ಕೊರತೆಯಿಂದ ಈ ಪ್ರಸ್ತಾವನೆ ಮುಂದೂಡಲ್ಪಟ್ಟಿರಬಹುದು ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

ಬೆಂಗಳೂರು – ಮಂಗಳೂರು ನಡುವೆ ವಂದೇ ಭಾರತ್ ರೈಲು ಸೇವೆ ಆರಂಭವಾದರೆ ಎರಡು ಪ್ರಮುಖ ನಗರಗಳ ನಡುವಿನ ಪ್ರಯಾಣ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ, ವ್ಯಾಪಾರ ಮತ್ತು ದೈನಂದಿನ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಪ್ರಾಯೋಗಿಕ ಸಂಚಾರ ರದ್ದಾಗಿದ್ದರೂ, ರೈಲ್ವೆ ಇಲಾಖೆಯಿಂದ ಮುಂದಿನ ವೇಳಾಪಟ್ಟಿ ಹಾಗೂ ಪರಿಷ್ಕೃತ ಯೋಜನೆ ಕುರಿತು ಅಧಿಕೃತ ಮಾಹಿತಿ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.


Spread the love
Subscribe
Notify of

0 Comments