ಹುಬ್ಬಳ್ಳಿಯಲ್ಲಿ ಖಾಸಗಿ ಬಸ್ಸಿಗೆ ಬೆಂಕಿ ಮೂರು ಸಾವು

Spread the love

ಹುಬ್ಬಳ್ಳಿಯಲ್ಲಿ ಖಾಸಗಿ ಬಸ್ಸಿಗೆ ಬೆಂಕಿ ಮೂರು ಸಾವು

ಹುಬ್ಬಳ್ಳಿ:  ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಹುಬ್ಬಳ್ಳಿ ಬಳಿ ರಾತ್ರಿ ಬೆಂಕಿಗೆ ಆಹುತಿಯಾಗಿದ್ದು, ಘಟನೆಯಲ್ಲಿ ಮೂವರು ಸಜೀಹ ದಹನಗೊಂಡಿದ್ದಾರೆ.

bus-catches-fire-huballi-2016-0727-00 bus-catches-fire-huballi-2016-0727-01 bus-catches-fire-huballi-2016-0727-02

ಇಂದು ಬೆಳಗಿನ ಜಾವ ಹುಬ್ಬಳ್ಳಿಯ ವರೂರು ಸಮೀಪ ಈ ಘಟನೆ ನಡೆದಿದ್ದು, ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಹದಿನೈದು ಜನ ಪ್ರಯಾಣಿಕರು ಬಸ್ ನಲ್ಲಿ ಇದ್ದರು ಎಂದು ತಿಳಿದುಬಂದಿದೆ. ಘಟನೆಯಲ್ಲಿ 8 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ರಾತ್ರಿ ಬೆಂಗಳೂರಿನಿಂದ ಹೊರಟಿದ್ದ ಬಸ್, ಮುಂಜಾನೆ 6 ಗಂಟೆಗೆ ಹುಬ್ಬಳ್ಳಿ ತಲುಪಬೇಕಿತ್ತು. ಆದರೆ, ಅದಕ್ಕೂ ಒಂದು ಗಂಟೆ ಮುನ್ನ ಈ ದುರ್ಘಟನೆ ನಡೆದಿದೆ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗಿದ್ದು, ನಿಖರ ಕಾರಣ ತಿಳಿದುಬಂದಿಲ್ಲ.

ಅಗ್ನಿಶಾಮಕ ಸಿಬ್ಬಂದಿ ಆರಂಭದಲ್ಲೇ ಬೆಂಕಿ ನಂದಿಸಲು ಯತ್ನಿಸಿದರೂ, ನಿಯಂತ್ರಣಕ್ಕೆ ಸಿಗದ ಬೆಂಕಿ, ಸಂಪೂರ್ಣ ಬಸ್ಸನ್ನು ಆಹುತಿ ತೆಗೆದುಕೊಂಡಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love