Spread the love
ಗುರುಪುರ | ಸೇತುವೆಯಿಂದ ನದಿಗೆ ಹಾರಿದ್ದ ಯುವಕನ ಮೃತದೇಹ ಪತ್ತೆ
ಮಂಗಳೂರು: ಗುರುಪುರ ಫಲ್ಗುಣಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾದ ಕಜೆ ಪಡ್ಡಾಯಿಬೆಟ್ಟು ನಿವಾಸಿ ಕೌಶಿಕ್ ಬೆಲ್ಚಡ (30) ಎಂಬವರ ಮೃತದೇಹ ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ.
ಬುಧವಾರ ಸಂಜೆ 6:30ಕ್ಕೆ ಗುರುಪುರದತ್ತ ಸ್ಕೂಟರ್ ನಲ್ಲಿ ಆಗಮಿಸಿದ್ದ ಕೌಶಿಕ್ ಫಲ್ಗುಣಿ ಸೇತುವೆ ಮೇಲೆ ಸ್ಕೂಟರ್ ನಿಲ್ಲಿಸಿ ನದಿಗೆ ಹಾರಿದ್ದರು ಎನ್ನಲಾಗಿದೆ. ಕತ್ತಲಾದ ಕಾರಣ ಬುಧವಾರ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ.
ಇಂದು ಮಂಗಳೂರು ಅಗ್ನಿಶಾಮಕ ದಳದ ಸಿಬ್ಬಂದಿಯು ಕೌಶಿಕ್ಗಾಗಿ ಹುಡುಕಾಟ ಆರಂಭಿಸಿದ್ದರು. ಪಾಣೆಮಂಗಳೂರಿನ ಮುಳುಗು ತಜ್ಞರು ಕೂಡ ಆಗಮಿಸಿ ಸೇತುವೆ ಕಂಬಗಳ ಬಳಿ ಕಾರ್ಯಾಚರಣೆ ಮೃತದೇಹವನ್ನು ಪತ್ತೆಹಚ್ಚಿದ್ದಾರೆ.
ಬಜ್ಪೆ ಪೊಲೀಸರು ಸ್ಕೂಟರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
Spread the love













