ಕರ್ನಾಟಕ ರಾಜ್ಯ ಎಫ್‌ಐಪಿ 8ನೇ ಪಾಲುದಾರರ ಸಭೆ

Spread the love

ಕರ್ನಾಟಕ ರಾಜ್ಯ ಎಫ್‌ಐಪಿ 8ನೇ ಪಾಲುದಾರರ ಸಭೆ

ಉಡುಪಿ: ಕರ್ನಾಟಕ ರಾಜ್ಯ ಮೀನುಗಾರಿಕೆ ಸುಧಾರಣಾ ಯೋಜನೆ (ಎಫ್‌ಐಪಿ) ಅಡಿಯಲ್ಲಿ ಸ್ಮಾಲ್ ಪೆಲಾಜಿಕ್ ಪರ್ಸ್‌ಸೈನ್ ಮೀನುಗಾರಿಕೆ ಯೋಜನೆಯ 8ನೇ ಪಾಲುದಾರರ ಸಭೆ ಎರ್ಮಾಳಿನ ಪೆನಿನ್ಸುಲಾ ಡೆಲ್ ಮಾರ್ ಬೀಚ್ ರೆಸಾರ್ಟ್‌ನಲ್ಲಿ ಸೋಮವಾರ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಅವಂತಿ ಫೀಡ್ಸ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಅಲ್ಲೂರಿ ಇಂದ್ರಕುಮಾರ್ ವಹಿಸಿದ್ದರು. ಸಭೆಯಲ್ಲಿ ಸುಸ್ಥಿರ ಹಾಗೂ ಜವಾಬ್ದಾರಿಯುತ ಮೀನುಗಾರಿಕೆ ಪದ್ಧತಿಗಳು, ಸಮುದ್ರ ಆಹಾರದ ಪತ್ತೆಹಚ್ಚುವಿಕೆ ವ್ಯವಸ್ಥೆ ಹಾಗೂ ಭಾರತದ ಸಮುದ್ರ ಆಹಾರ ಸರಬರಾಜು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸಲಾಯಿತು.

ಕಳೆದ ಎರಡು ವರ್ಷಗಳಿಂದ ಕರ್ನಾಟಕ ರಾಜ್ಯ ಮೀನುಗಾರಿಕೆ ಸುಧಾರಣಾ ಯೋಜನೆಯಡಿ ಅಪಾಯದಲ್ಲಿರುವ, ಅಪರೂಪದ ಹಾಗೂ ಸಂರಕ್ಷಿತ (ಇಟಿಪಿ) ಜಾತಿಗಳ ಸಂರಕ್ಷಣೆ, ಜವಾಬ್ದಾರಿಯುತ ಮೀನುಗಾರಿಕೆ, ಸ್ವಚ್ಛತೆ, ಕಾರ್ಮಿಕರ ಕಲ್ಯಾಣ ಹಾಗೂ ಅನೈತಿಕ ಮೀನುಗಾರಿಕೆ ಪದ್ಧತಿಗಳ ತಡೆ ಕುರಿತು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೀನುಗಾರರು ಹಾಗೂ ಮೀನುಗಾರಿಕಾ ದೋಣಿಗಳಿಗೆ ಸಂರಕ್ಷಿತ ಜಾತಿಗಳ ಕುರಿತು ಜಾಗೃತಿ ಫಲಕಗಳನ್ನು ವಿತರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಎಫ್‌ಐಪಿಯ ಮುಖ್ಯಸ್ಥ ಉದಯಕುಮಾರ್ ಸಾಲ್ಯಾನ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಯೋಜನಾ ಸಂಯೋಜಕಿ ಡಾ. ನಿಮ್ನುವಲ್ ಪೀವ್ರೋಂಗ್ಗಾಮ್, ಐಸಿಎಆರ್-ಸಿಎಮ್‌ಎಫ್‌ಆರ್‌ಐ ಮಂಗಳೂರು ಕೇಂದ್ರದ ಮುಖ್ಯ ವಿಜ್ಞಾನಿ ಡಾ. ಸುಜಿತಾ ಥಾಮಸ್, ರಾಷ್ಟ್ರೀಯ ಕಾರ್ಯಪಡೆ ಸದಸ್ಯ ಗಣೇಶ್ ನಖವಾ, ದಕ್ಷಿಣ್ ಫೌಂಡೇಶನ್‌ನ ಡಾ. ನವೀನ್ ನಂಬೂದ್ರಿ, ದೇವಿ ಸೀಫುಡ್ಸ್ ಲಿಮಿಟೆಡ್‌ನ ಸರ್ಬ್ಪ್ರೀತ್ ಸಿಂಗ್, ಅವಂತಿ ಫೀಡ್ಸ್ ಲಿಮಿಟೆಡ್‌ನ ನಂದ ಕಿಶೋರ್ ಹಾಗೂ ಸೀಫುಡ್ ಟಾಸ್ಕ್ ಫೋರ್ಸ್‌ನ ಎ.ಬಿ. ಜೈನ್ ವಿವಿಧ ವಿಷಯಗಳ ಕುರಿತು ಮಾತನಾಡಿದರು.

ಸಭೆಯಲ್ಲಿ ಭಾರತೀಯ ಫಿಶ್‌ಮಿಲ್ ಮತ್ತು ಮೀನು ಎಣ್ಣೆ ರಫ್ತುದಾರರ ಸಂಘದ ಗೌರವಾಧ್ಯಕ್ಷ ಪ್ರಮೋದ್ ಮಧ್ವರಾಜ್, ಮೀನುಗಾರಿಕಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಮಹೇಶ್ ಕುಮಾರ್ ಯು., ಎಂಪಿಇಡಿಎ ಉಪನಿರ್ದೇಶಕ ಮನೋಜ್ ಕುಮಾರ್ ಟಿ.ಜಿ. ಹಾಗೂ ಜನತಾ ಗ್ರೂಪ್‌ನ ಅಧ್ಯಕ್ಷ ಆನಂದ್ ಸಿ. ಕುಂದರ್ ಉಪಸ್ಥಿತರಿದ್ದರು.

ರಮೇಶ್ ಎಂ.ಆರ್. ಸ್ವಾಗತಿಸಿ ಸಭೆಯ ಉದ್ದೇಶವನ್ನು ವಿವರಿಸಿದರು. ಚೇತನ್ ಕುಮಾರ್ ಸುವರ್ಣ ವಂದಿಸಿದರು. ಡಾ. ಶಿವರಕುಮಾರ್ ಮಗದ ಕಾರ್ಯಕ್ರಮ ನಿರೂಪಿಸಿದರು.

ಸಭೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳು, ಸಂಶೋಧನಾ ಸಂಸ್ಥೆಗಳು, ಸಮುದ್ರ ಆಹಾರ ಕೈಗಾರಿಕೆ, ರಫ್ತುದಾರರು, ಸುಸ್ಥಿರ ಮೀನುಗಾರಿಕೆಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಹಾಗೂ ಮೀನುಗಾರರ ಪ್ರತಿನಿಧಿಗಳು ಭಾಗವಹಿಸಿದ್ದರು.

ಯಶಸ್ವಿ ಫಿಶ್‌ಮಿಲ್ ಅಂಡ್ ಆಯಿಲ್ ಕಂಪನಿ ಉಡುಪಿ, ಯಶಸ್ವಿ ಫಿಶ್‌ಮಿಲ್ ಅಂಡ್ ಆಯಿಲ್ ಕಂಪನಿ ಎಸ್‌ಇಝೆಡ್ ಮಂಗಳೂರು, ಆಕಾಶ್ ಫಿಶ್‌ಮಿಲ್ ಅಂಡ್ ಫಿಶ್ ಆಯಿಲ್ ಕಂಪನಿ ಪ್ರೈವೇಟ್ ಲಿಮಿಟೆಡ್, ಮುಕ್ಕ ಪ್ರೋಟೀನ್ಸ್ ಲಿಮಿಟೆಡ್, ರಾಜ್ ಫಿಶ್‌ಮಿಲ್ ಅಂಡ್ ಆಯಿಲ್ ಕಂಪನಿ, ಜನತಾ ಫಿಶ್‌ಮಿಲ್ ಅಂಡ್ ಆಯಿಲ್ ಕಂಪನಿ ಹಾಗೂ ಬ್ಲೂ ಲೈನ್ಸ್ ಫುಡ್ಸ್ (ಇಂಡಿಯಾ) ಲಿಮಿಟೆಡ್ ಸಂಸ್ಥೆಗಳು ಎಫ್‌ಐಪಿಯ ಸದಸ್ಯ ಸಂಸ್ಥೆಗಳಾಗಿ ಭಾಗವಹಿಸಿವೆ.


Spread the love
Subscribe
Notify of

0 Comments
Inline Feedbacks
View all comments