ಯಕ್ಷಗಾನ ಪ್ರಸಂಗ ಕೃತಿಗಳನ್ನು ಸಾಹಿತ್ಯ ಕೃತಿಗಳೆಂದು ಪರಿಗಣಿಸಿ
ಯಕ್ಷಗಾನ ಪ್ರಸಂಗ ಕೃತಿಗಳನ್ನು ಸಾಹಿತ್ಯ ಕೃತಿಗಳೆಂದು ಪರಿಗಣಿಸಿ
ದೆಹಲಿ: ಕರ್ನಾಟಕದ ಕರಾವಳಿಯ ಕಲೆ ಯಕ್ಷಗಾನ. ಇದರ ಪ್ರಸಂಗ ಕೃತಿಯನ್ನು ಮತ್ತು ಕರ್ನಾಟಕ ಸರ್ಕಾರದ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಸಾಹಿತ್ಯ...
ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ – ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಡಿಜಿಟಲ್ ಯೂತ್ ಕಾರ್ಯಕರ್ತರಿಗೆ ಮಂಜುನಾಥ್ ಭಂಡಾರಿ ಸಲಹೆ
ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ – ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಡಿಜಿಟಲ್ ಯೂತ್ ಕಾರ್ಯಕರ್ತರಿಗೆ ಮಂಜುನಾಥ್ ಭಂಡಾರಿ ಸಲಹೆ
ಉಡುಪಿ: ಸಿಕ್ಕಿದ ಅವಕಾಶವನ್ನು ಉಪಯೋಗಿಸಿಕೊಂಡಾಗ ನಾಯಕನಾಗಲು ಸಾಧ್ಯ ಆದ್ದರಿಂದ ಡಿಕೆ ಶಿವಕುಮಾರ್ ಅವರ ಪದಗ್ರಹಣ ಸಮಾರಂಭ...
ಮ0ಗಳೂರು: ಜನವರಿ ಮಾಹೆ ಉದರದರ್ಶಕ ಶಸ್ತ್ರಚಿಕಿತ್ಸಾ ಶಿಬಿರಗಳು
ಮ0ಗಳೂರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜನವರಿ ಮಾಹೆಯಲ್ಲಿ ವಿವಿಧ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉದರದರ್ಶಕ ಶಸ್ತ್ರ ಚಿಕಿತ್ಸಾ ಶಿಬಿರ ವನ್ನು ಏರ್ಪಡಿಸಲಾಗಿದೆ. ಜ. 5...
ದಕ ಜಿಲ್ಲೆಯಲ್ಲಿ ಮುಂದುವರೆದ ಕೊರೋನಾ ಓಟ – 186 ಮಂದಿಗೆ ಪಾಸಿಟಿವ್ ದೃಢ
ದಕ ಜಿಲ್ಲೆಯಲ್ಲಿ ಮುಂದುವರೆದ ಕೊರೋನಾ ಓಟ – 186 ಮಂದಿಗೆ ಪಾಸಿಟಿವ್ ದೃಢ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪಾಸಿಟವ್ ದೃಢವಾಗುತ್ತಿರುವವರ ಸಂಖ್ಯೆ ಕಳೆದ ಎರಡು ವಾರಗಳಿಂದ ಗರಿಷ್ಠ ಮಟ್ಟದಲ್ಲಿ ಏರಿಕೆ ಯಾಗಿದ್ದು,...
ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಂಪೂರ್ಣ ಸಜ್ಜು – ಸಸಿಕಾಂತ್ ಸೆಂಥಿಲ್
ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಂಪೂರ್ಣ ಸಜ್ಜು: ಸಸಿಕಾಂತ್ ಸೆಂಥಿಲ್
ಮಂಗಳೂರು: ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದ್ದು ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಎಲ್ಲಾ ಸಿದ್ದತೆಮಾಡಿಕೊಳ್ಳಲಾಗಿದೆ ಎಂದು ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಮತದಾನಕ್ಕೆ ಜಿಲ್ಲೆಯಲ್ಲಿ ಕೈಗೊಳ್ಳಲಾದ ಪೂರ್ವ ತಯಾರಿಗೆ ಸಂಬಂಧಿಸಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಮತದಾನ ಪ್ರಕ್ರಿಯೆಗೆ 8,920 ಸಿಬ್ಬಂದಿ ಜಿಲ್ಲೆಯ 1861 ಮತಗಟ್ಟೆಗಳಲ್ಲಿ ಕಾರ್ಯ ನಿರ್ವಹಿಸಲು 8,920 ಸಿಬ್ಬಂದಿ ಸಿದ್ಧರಾಗಿದ್ದಾರೆ. ಸಿಬ್ಬಂದಿಯನ್ನು ವಿಧಾನ ಸಭಾ ಕ್ಷೇತ್ರಗಳಿಗೆ ತಲುಪಿಸಲು ಒಟ್ಟು 79 ವಾಹನಗಳು ಹಾಗೂ ವಿಧಾನ ಸಭಾ ಕ್ಷೇತ್ರಗಳಿಂದಸಂಬಂಧಪಟ್ಟ ಮತಗಟ್ಟೆಗಳಿಗೆ ತಲುಪಿಸಲು 668 ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಇದುವರೆಗೆ 15 ವಾಹನಗಳು (1.08 ಕೋಟಿ ರೂ. ವೌಲ್ಯ) ಹಾಗೂ 31 ಲಕ್ಷ ರೂ. ನಗದನ್ನು ವಿವಿಧಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದರು.
ಮತದಾನಕ್ಕೆ ಜಿಲ್ಲೆಯಲ್ಲಿ ಕೈಗೊಳ್ಳಲಾದ ಪೂರ್ವ ತಯಾರಿಗೆ ಸಂಬಂಧಿಸಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಈ ಅವಧಿಯಲ್ಲಿ 84,285.10 ಲೀಟರ್ ಮದ್ಯ (94.55 ಲಕ್ಷ ರೂ. ವೌಲ್ಯ) ವಶಪಡಿಸಿಕೊಳ್ಳಲಾಗಿದೆ ಎಂದರು.
ಅಬಕಾರಿ ಕಾನೂನು ಉಲ್ಲಂಘನೆಗೆ ಸಂಬಂಧಿಸಿ 587 ಪ್ರಕರಣಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸುವಿಧಾ ಮೂಲಕ 584 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 520 ಪ್ರಕರಣಗಳನ್ನುಸ್ವೀಕರಿಸಲಾಗಿದೆ ಎಂದು ಅವರು ಹೇಳಿದರು.
ಇಂದು ಸಂಜೆ (ಎ.16) 6 ಗಂಟೆಗೆ ಬಹಿರಂಗ ಚುನಾವಣಾ ಪ್ರಚಾರ ಅಂತ್ಯಗೊಳ್ಳಲಿದೆ. 6 ಗಂಟೆಯ ನಂತರ ಕ್ಷೇತ್ರದಿಂದ ಹೊರಗಿನ ಚುನಾವಣಾ ಪ್ರಚಾರಕರು ಜಿಲ್ಲೆಯಲ್ಲಿ ಇರುವಂತಿಲ್ಲ. ಈ ಬಗ್ಗೆ ಪರಿಶೀಲನೆನಡೆಸಲು ಮೇಲ್ವಿಚಾರಕರನ್ನು ಹೊಟೇಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ನಿಯೋಜಿಸಲಾಗಿದೆ. ಅವಧಿ ಮೀರಿ ಹೊರ ಕ್ಷೇತ್ರಗಳ ಪ್ರಚಾರಕರು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದುಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಉಪಸ್ಥಿತರಿದ್ದರು.
ಸೌಹಾರ್ದತೆಯೇ ದೇಶದ ಭವಿಷ್ಯ: ‘ಆಳ್ವಾಸ್ ಕ್ರಿಸ್ ಮಸ್’ ಆಚರಣೆಯಲ್ಲಿ ಡಾ.ಎಂ.ಮೋಹನ ಆಳ್ವ
ಸೌಹಾರ್ದತೆಯೇ ದೇಶದ ಭವಿಷ್ಯ: 'ಆಳ್ವಾಸ್ ಕ್ರಿಸ್ ಮಸ್' ಆಚರಣೆಯಲ್ಲಿ ಡಾ.ಎಂ.ಮೋಹನ ಆಳ್ವ
ಉನ್ನತ ಭರವಸೆಯೇ ಕ್ರಿಸ್ ಮಸ್ ಸಂದೇಶ: ಬಿಷಪ್
ಮೂಡುಬಿದಿರೆ: ಗೋದಲಿಯಲ್ಲಿ ಬಾಲ ಯೇಸು ಜನನದ ದರ್ಶನ, ಕ್ಯಾರೆಲ್ ಹಾಡಿದ ವಿದ್ಯಾರ್ಥಿಗಳ ಗುಂಪು, ನಡುವೆ...
ಸಂಘಪರಿವಾರವನ್ನು ಪಿ ಎಫ್ ಐ ನೊಂದಿಗೆ ಸಮೀಕರಿಸಿದ ಗೃಹಸಚಿವರ ಹೇಳಿಕೆ ಬಾಲೀಶತನದ್ದು: ಪಾಪ್ಯುಲರ್ ಫ್ರಂಟ್
ಸಂಘಪರಿವಾರವನ್ನು ಪಿ ಎಫ್ ಐ ನೊಂದಿಗೆ ಸಮೀಕರಿಸಿದ ಗೃಹಸಚಿವರ ಹೇಳಿಕೆ ಬಾಲೀಶತನದ್ದು: ಪಾಪ್ಯುಲರ್ ಫ್ರಂಟ್
ಮಂಗಳೂರು: ಸ್ವಾತಂತ್ರ್ಯಾ ನಂತರ ದೇಶದಲ್ಲಿ ಹಲವಾರು ಬಾಂಬ್ ಸ್ಫೋಟ ಮತ್ತು ವಂಶಹತ್ಯೆಗಳನ್ನು ನಡೆಸಿ ಭಯೋತ್ಪಾದನೆಯನ್ನು ನಡೆಸಿದ ಆರೆಸ್ಸೆಸ್‍ನೊಂದಿಗೆ ಪಾಪ್ಯುಲರ್...
ಕೊನೆಗೂ ಸಂಚಾರಕ್ಕೆ ಮುಕ್ತಗೊಂಡ ಕರಾವಳಿ ಫ್ಲೈಓವರ್!
ಕೊನೆಗೂ ಸಂಚಾರಕ್ಕೆ ಮುಕ್ತಗೊಂಡ ಕರಾವಳಿ ಫ್ಲೈಓವರ್!
ಉಡುಪಿ: ಕುಂಟುತ್ತ ಸಾಗುತ್ತಿದ್ದ ಮಂಗಳೂರು-ಕುಂದಾಪುರ-ಉಡುಪಿ-ಮಲ್ಪೆ ರಸ್ತೆಯ ಪ್ರಮುಖ ಸಂಪರ್ಕ ಕೇಂದ್ರವಾದ ಕರಾವಳಿ ಬೈಪಾಸ್ ಜಂಕ್ಷನ್ ಫ್ಲೈಓವರ್ ಕಾಮಗಾರಿ ಕೊನೆಗೂ ಅಂತಿಮ ಹಂತ ತಲುಪಿ, ಶುಕ್ರವಾರದಿಂದ ಪ್ರಾಯೋಗಿಕ ಸಂಚಾರಕ್ಕೆ...
ನಿವೃತ್ತ ಪವನಶಾಸ್ತ್ರಜ್ಞ ಜಿ. ಶ್ರೀನಿವಾಸನ್ ನಿಧನ
ನಿವೃತ್ತ ಪವನಶಾಸ್ತ್ರಜ್ಞ ಜಿ. ಶ್ರೀನಿವಾಸನ್ ನಿಧನ
ಮಂಗಳೂರು : ಬೆಜೈ-ಕಾಪಿಕಾಡ್ ನಿವಾಸಿ, ಹಿರಿಯ ನಿವೃತ್ತ ಪವನಶಾಸ್ತ್ರಜ್ಞ ಜಿ. ಶ್ರೀನಿವಾಸನ್ (78) ಅವರು ಸ್ವಗೃಹದಲ್ಲಿ ನಿಧನರಾದರು. ಅವರು ಸ್ವಲ್ಪ ಸಮಯದಿಂದ ಗಂಭೀರವಾದ ಕಾಯಿಲೆಯಿಂದ ಬಳಲುತ್ತಿದ್ದರು. ಇವರ...
ಅಂತರ್ ಜಿಲ್ಲಾ ಕಳವು ಆರೋಪಿಯ ಬಂಧನ: ಚಿನ್ನಾಭರಣ ವಶ
ಅಂತರ್ ಜಿಲ್ಲಾ ಕಳವು ಆರೋಪಿಯ ಬಂಧನ: ಚಿನ್ನಾಭರಣ ವಶ
ಕಾಪು: ಕೆಲವು ದಿನಗಳ ಹಿಂದೆ ಪಾದೂರು ಗ್ರಾಮದಲ್ಲಿ ನಡೆದ ಮಹಿಳೆಯ ಸರ ಅಪಹರಣ ಹಾಗೂ ಮನೆ ಕಳವು ಪ್ರಕರಣದ ಆರೋಪಿ ಯನ್ನು ಪೊಲೀಸರು ನ.1ರಂದು...



























