ಮಂಗಳೂರು: ಹಿಡಿಯುವ ಕೆಲಸ ಮಾಡಿಕೊಂಡಿದ್ದ ಯುವಕ ನಾಪತ್ತೆ
ಮಂಗಳೂರು: ತೋಟಬೆಂಗ್ರೆಯಲ್ಲಿ ವಾಸವಿದ್ದ ಶಾನೇಶ್(25) ಎಂಬವರು ಮೀನು ಹಿಡಿಯುವ ಕೆಲಸ ಮಾಡಿಕೊಂಡಿದ್ದು, ಫೆಬ್ರವರಿ 18 ರಂದು ಕಾಣೆಯಾಗಿರುವ ಬಗ್ಗೆ ಪಣಂಬೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾನೇಶ್ರವರು ಸುಮಾರು 4 ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಹಿಂದೆ ಹಲವು ಬಾರಿ ಮನೆ ಬಿಟ್ಟು ಹೋದವರು 2-3 ದಿನ ಬಿಟ್ಟು ಮನೆಗೆ ವಾಪಸ್ಸು ಬಂದಿದ್ದರು. ಆದರೆ ಫೆಬ್ರವರಿ 18 ರಂದು ಮನೆ ಬಿಟ್ಟು ಹೋದವರು ಈವರೆಗೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.
ಕಾಣೆಯಾದವರ ಚಹರೆ: ಸುಮಾರು 5.6 ಅಡಿ ಎತ್ತರ, ಗೋಧಿ ಮೈಬಣ್ಣ ಸಪೂರ ಶರೀರ ತಲೆ ಕೂದಲು ಕಪ್ಪು, ಗಡ್ಡ ಮೀಸೆ ಇರುತ್ತದೆ. ಬಿಳಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಉದ್ದ ತೋಳಿನ ಶರ್ಟ್ ಧರಿಸಿದ್ದರು. ತಮಿಳು, ತುಳು, ಕನ್ನಡ ಭಾಷೆ ಮಾತನಾಡುತ್ತಾರೆ.
ಕಾಣೆಯಾದವರ ಮಾಹಿತಿ ಪತ್ತೆಯಾದಲ್ಲಿ ಪಣಂಬೂರು ಪೋಲಿಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













