ಹಿರೇಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ಷಡಾಧಾರ ಪ್ರತಿಷ್ಠೆ ಭಕ್ತಿಭಾವದಿಂದ ಸಂಪನ್ನ

Spread the love

ಹಿರೇಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ಷಡಾಧಾರ ಪ್ರತಿಷ್ಠೆ ಭಕ್ತಿಭಾವದಿಂದ ಸಂಪನ್ನ

ಉಡುಪಿ: ಹಿರೇಬೆಟ್ಟುವಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ, ದೇವಾಲಯದ ಸಮಗ್ರ ಜೀರ್ಣೋದ್ಧಾರ ಪ್ರಕ್ರಿಯೆಯ ಪ್ರಮುಖ ಘಟ್ಟವಾದ ಶ್ರೀ ದೇವರ ಷಡಾಧಾರ ಪ್ರತಿಷ್ಠೆ ಹಾಗೂ ಆಧಾರ ಶಿಲೆಯ ಮೇಲೆ ರಜತ, ರತ್ನ ಮತ್ತು ಚಿನ್ನವನ್ನು ಒಳಗೊಂಡ ಶಿಲಕುಂಭ ಸ್ಥಾಪನೆ ಕಾರ್ಯಕ್ರಮವು ಭಕ್ತಿಭಾವ ಹಾಗೂ ವೈದಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಶ್ರೀ ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಡಾ. ಶ್ರೀ ಸತ್ಯಕೃಷ್ಣ ಭಟ್, ಮಂಗಳೂರು ಅವರ ನೇತೃತ್ವದಲ್ಲಿ ಕನ್ಯಾ ಲಗ್ನದ ಶುಭ ಮುಹೂರ್ತದಲ್ಲಿ ಷಡಾಧಾರ ಪ್ರತಿಷ್ಠೆ ನೆರವೇರಿಸಲಾಯಿತು. ಇದಕ್ಕೂ ಮುನ್ನ ದೇವತಾ ಪ್ರಾರ್ಥನೆ, ಪಂಚಗವ್ಯ ಶುದ್ಧಿ, ಪುಣ್ಯಾಹವಾಚನ, ಗಣಹೋಮ ಹಾಗೂ ವಾಸ್ತುಪೂಜೆ ಸೇರಿದಂತೆ ವಿವಿಧ ವೈದಿಕ ಧಾರ್ಮಿಕ ವಿಧಿವಿಧಾನಗಳು ಶ್ರದ್ಧಾಭಕ್ತಿಯಿಂದ ನಡೆದವು.

ದೇವಾಲಯದ ಜೀರ್ಣೋದ್ಧಾರದ ಅಂಗವಾಗಿ ನಡೆದ ನಿಧಿಕುಂಭ ಸ್ಥಾಪನೆ ವೇಳೆ ನೂರಾರು ಭಕ್ತರು ತಮ್ಮ ಭಕ್ತಿ ಸಮರ್ಪಣೆಯ ಸಂಕೇತವಾಗಿ ಬೆಳ್ಳಿ, ಚಿನ್ನ ಹಾಗೂ ಅಮೂಲ್ಯ ರತ್ನಗಳನ್ನು ಸಮರ್ಪಿಸಿ ಧಾರ್ಮಿಕ ಕಾರ್ಯಕ್ಕೆ ಸಹಕಾರ ನೀಡಿದರು. ಆಧಾರ ಶಿಲೆಯ ಮೇಲೆ ರಜತ, ರತ್ನ ಹಾಗೂ ಚಿನ್ನವನ್ನು ಒಳಗೊಂಡ ಶಿಲಕುಂಭವನ್ನು ಪ್ರತಿಷ್ಠಾಪಿಸಲಾಯಿತು.

ಬಳಿಕ ಶ್ರೀ ದೇವರಿಗೆ ಮಹಾಪೂಜೆ ಸಲ್ಲಿಸಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಊರಪರವೂರ ಭಕ್ತಾದಿಗಳು ಹಾಗೂ ಆಸ್ತಿಕ ಮಹಾಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಆಶೀರ್ವಾದ ಪಡೆದರು.

ದೇವಾಲಯದ ಸಮಗ್ರ ಜೀರ್ಣೋದ್ಧಾರ ಕಾರ್ಯಕ್ಕೆ ಎಲ್ಲ ಭಕ್ತರು ತನು-ಮನ-ಧನಗಳಿಂದ ಸಹಕರಿಸುವಂತೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ಸರ್ವ ಸದಸ್ಯರು, ಅರ್ಚಕವೃಂದ ಹಾಗೂ ಗ್ರಾಮಸ್ಥರು ಮನವಿ ಮಾಡಿದರು. ಈ ಮಹತ್ವದ ಧಾರ್ಮಿಕ ಕಾರ್ಯಕ್ರಮವು ಭಕ್ತಿಭಾವ, ವೈಭವ ಹಾಗೂ ಜನಸಾಮಾನ್ಯರ ಅಭೂತಪೂರ್ವ ಸಹಭಾಗಿತ್ವದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ದೇವಾಲಯದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ನಾಯಕ್ ಬೆಲ್ಪತ್ರೆ, ಖಜಾಂಚಿ ಚಂದ್ರಶೇಖರ್ ನಾಯಕ್, ಉಡುಪಿಯ ಶಾಸಕರಾದ ಯಶ್ಪಾಲ್ ಸುವರ್ಣ, ಕುತ್ಯಾರ್ ನವೀನ್ ಶೆಟ್ಟಿ, ನಗರ ಸಭೆಯ ಮಾಜಿ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ, ಜಯರಾಜ್ ಹೆಗ್ಡೆ ಮಣಿಪಾಲ, ನಟರಾಜ್ ಹೆಗ್ಡೆ ಹಿರಿಯಡ್ಕ , ಜಯಪ್ರಕಾಶ್ ಹೆಗ್ಡೆ ಶಿವಪುರ , ಸೇರಿದಂತೆ ಪ್ರಮುಖ ಪದಾಧಿಕಾರಿಗಳಾದ ಸೀತಾರಾಮ್ ಭಟ್, ನಿತ್ಯಾನಂದ ನಾಯಕ್, ದೇವಪ್ಪ ನಾಯಕ್, ಶ್ರೀಪತಿ ಭಟ್, ಜಯಪ್ರಕಾಶ್ ಆಚಾರ್ಯ, ಉಮೇಶ್ ಭಟ್, ಕೃಷ್ಣ ನಾಯ್ಕ್ ಸುರೇಂದ್ರ ನಾಯ್ಕ್, ಲಕ್ಷ್ಮಣ್ ನಾಯಕ್, ಪ್ರಕಾಶ್ ಭಟ್ , ಉಮೇಶ್ ನಾಯಕ್, ವಿಕ್ರಮ್ ಭಟ್, ಪುನೀತ್ ಆಚಾರ್ಯ, ಗಣೇಶ್ ನಾಯ್ಕ್, ಹರೀಶ್ ನಾಯ್ಕ್ , ರಾಜೇಶ್ ನಾಯಕ್ , ನಿತೀಶ್ ನಾಯ್ಕ್, ಡಾ.ಕೃಷ್ಣ ಮೂರ್ತಿ, ದಿನೇಶ್ ಪ್ರಭು, ವಸಂತ್ ನಾಯಕ್ , ಸುಂದರ ಮೂಲ್ಯ, ಚಂದ್ರಯ್ಯ ಆಚಾರ್ಯ, ಪುರಂದರ ಆಚಾರ್ಯ, ರಮೇಶ್ ನಾಯಕ್, ಗುರುನಂದ ನಾಯಕ್, ಗುರುದಾಸ್ ಭಂಡಾರಿ, ಸುಧೀರ್ ಶೆಟ್ಟಿ, ಶ್ಯಾಮ್ ನಾಯ್ಕ್, ಸುರೇಶ್ ನಾಯ್ಕ್, ಶೈಲೇಶ್ ಪೂಜಾರಿ, ಗುರುರಾಜ್ ಆಚಾರ್ಯ, ಶಶೀಂದ್ರ ಪೂಜಾರಿ, ಕೇಶವ್ ಭಂಡಾರಿ, ಗೋಪಾಲ್ ನಾಯಕ್, ಕೇಶವ್ ನಾಯಕ್, ನಂದಕುಮಾರ್,ಸುರೇಶ್ ಭಟ್, ಮಹದೇವ್ ಭಟ್, ಮುರುಳೀಧರ್ ಲಾಗ್ವಂಕರ್, ಪಾಂಡುರಂಗ ಲಗ್ವಾಂಕರ್, ಮಂದಾರ ಮೋಫ್, ಶಿಲ್ಪಿ ಕುಪ್ಪು ಸ್ವಾಮಿ,, ಶ್ರೀಧರ ಭಟ್, ಹರೀಶ್ ಶೆಟ್ಟಿ ,ಮಹೇಶ್ ಭಟ್, ಅಶೋಕ್ ನಾಯಕ್, ಶ್ರೀಧರ ನಾಯ್ಕ ಹರ್ಷಿತ್ ಆಚಾರ್ಯ, ರಮೇಶ್ ನಾಯಕ್ ಕಾಳಬೆಟ್ಟು, ವಾಸುದೇವ ನಾಯಕ್, ಬಾಲಕೃಷ್ಣ ಭಟ್, ಬಾಲಗಂಗಾಧರ್ ಲಾಗ್ವಾoಕರ್, ಶ್ರೀಧರ ನಾಯ್ಕ್, ಭಾಸ್ಕರ್ ಕುಲಾಲ್, ಸುಧೀರ್ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.


Spread the love
Subscribe
Notify of

0 Comments