ನೂತನ ಬಿಷಪ್ ಲೆಸ್ಲಿ ಡಿಸೋಜಾರಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಭಿನಂದನೆ

Spread the love

ನೂತನ ಬಿಷಪ್ ಲೆಸ್ಲಿ ಡಿಸೋಜಾರಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಭಿನಂದನೆ

ಉಡುಪಿ: ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಅತೀ ವಂ | ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯು ಅಧ್ಯಕ್ಷ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಬುಧವಾರ ಧರ್ಮಾಧ್ಯಕ್ಷರ ನಿವಾಸದಲ್ಲಿ ಭೇಟಿಯಾಗಿ ಶಾಲು ಹೊದಿಸಿ ಹಾರ ಹಾಕಿ ಅಭಿನಂದಿಸಲಾಯಿತು.

ನೂತನ ಬಿಷಪ್ರವರ ಸೇವಾ ಜೀವನವು ಸಮಾಜಕ್ಕೆ ಬೆಳಕಾಗಲಿ, ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಆಶಿಸಲಾಯಿತು. ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಬಿಷಪ್ರವರು ಪ್ರೀತಿ ಗೌರವದಿಂದ ಅಭಿನಂದಿಸಿದಕ್ಕೆ ತಮ್ಮ ಕೃತಜ್ಞತೆಯನ್ನು ತಿಳಿಸಿ ಎಲ್ಲರ ಮೇಲೆ ದೇವರ ಆಶೀರ್ವಾದ ಇರಲಿ ಎಂದು ಶುಭ ಹಾರೈಸಿದರು. ಮಾನವೀಯ ಧರ್ಮ ಎಲ್ಲಕ್ಕಿಂತಲೂ ಶ್ರೇಷ್ಠ. ಪರಸ್ಪರ ಶಾಂತಿ ಸೌಹಾರ್ದತೆಯಿಂದ ಬದುಕಿ ಶೋಷಿತರಿಗೆ, ಅಶಕ್ತರಿಗೆ ಸಹಾಯ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳಗಿಸೋಣ ಎಂದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ವಿಜಯ್ ಪೂಜಾರಿ, ನಾಯಕರಾದ ಮ್ಯಾಕ್ಸಿಮ್ ಡಿ’ಸೋಜಾ, ಮಾಜಿ ನಗರಸಭಾ ಸದಸ್ಯರಾದ ಪ್ರಕಾಶ್ ಅಂದ್ರಾದೆ, ಸಂಧ್ಯಾ ತಿಲಕ್ರಾಜ್, ಶಶಿರಾಜ್ ಕುಂದರ್, ಸುಕೇಶ್ ಕುಂದರ್, ಹೇಮಲತಾ ಹಿಲಾರಿ ಜತ್ತನ್ನ, ಗಣೇಶ್ ನೆರ್ಗಿ, ಲತಾ ಆನಂದ್ ಶೇರಿಗಾರ್, ಬ್ಲಾಕ್ ಕಾಂಗ್ರೆಸ್ನ ನಾಯಕರಾದ ಚಂದ್ರಮೋಹನ್, ಸತೀಶ್ ಕುಮಾರ್ ಮಂಚಿ, ಸತೀಶ್ ಕೊಡವೂರು, ಜಯವೀರ್ ಫೆಡ್ರಿಕ್ಸ್, ಶರತ್ ಶೆಟ್ಟಿ, ಮನೋಜ್ ಕರ್ಕೇರ, ವಿಲ್ಸನ್ ಸಿಕ್ವೇರಾ, ವನಿತಾ ಫೆರ್ನಾಂಡಿಸ್, ರಮೇಶ್ ಪಾಲ್, ಪ್ರೇಮಲತಾ ಸೋನ್ಸ್, ಜೋಸೆಫ್ ಪಿಂಟೋ, ಅನಿಲ್ ಗೊನ್ಸಾಲ್ವಿಸ್, ಲ್ಯಾನ್ಸಿ ಡಿ’ಸೋಜಾ, ದಯಾನಂದ್ ಡಿ ಕಿದಿಯೂರು, ವಿವಾನ್ ಫೆರ್ನಾಂಡಿಸ್, ಐರಿನ್ ಮೆನೆಜಸ್, ರಿಚಾರ್ಡ್ ಡಿ’ಸಿಲ್ವಾ, ರೋಸ್ಟನ್ ಡಿ’ಸಿಲ್ವಾ, ಪ್ರವೀಣ್ ಮಸ್ಕರೇನಸ್, ಜೇಮ್ಸ್ ಡೇನಿಸ್ ಡಿ’ಸೋಜಾ, ಸಾಯಿರಾಜ್ ಕಿದಿಯೂರು, ಸುಧಾಕರ್ ಪೂಜಾರಿ, ಅರುಣ್ ಡಿ’ಸೋಜಾ, ಸಂಜಯ್ ಆಚಾರ್ಯ, ಸುದೇಶ್ ಭಂಡಾರಿ, ಕಿರಣ್ ಉಪಸ್ಥಿತರಿದ್ದರು


Spread the love
Subscribe
Notify of

0 Comments
Inline Feedbacks
View all comments