ಉಡುಪಿ: ಯುವತಿಯರಿಗಾಗಿ ‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನ

Spread the love

ಉಡುಪಿ: ಯುವತಿಯರಿಗಾಗಿ ‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನ

ಉಡುಪಿ: ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಉಡುಪಿ ನಗರ ಹಾಗೂ ಪರ್ಕಳ ಘಟಕದ ವತಿಯಿಂದ ಯುವತಿಯರಿಗಾಗಿ ‘ದಿ ಕೇರಳ ಸ್ಟೋರಿ 2’ ಚಿತ್ರದ ಉಚಿತ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಭಾಗವಹಿಸಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಪ್ರಾಂತ ಪ್ರಚಾರ ಪ್ರಸಾರ ಪ್ರಮುಖ್ ಪ್ರದೀಪ್ ಸರಿಪಳ್ಳ, ಮಾಜಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಉದ್ಯಮಿಗಳಾದ ಕೃಷ್ಣ ಕುಲಾಲ್ ಮತ್ತು ಗುರುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಇದೇ ವೇಳೆ ಬಜರಂಗದಳ ಜಿಲ್ಲಾ ಸಹ ಸಂಯೋಜಕ ಮನೋಜ್ ಮಲ್ಪೆ, ನಗರ ಸುರಕ್ಷಾ ಪ್ರಮುಖ್ ದೀಕ್ಷಿತ್ ಶೆಟ್ಟಿ ಸೇರಿದಂತೆ ಅನೇಕ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಬಜರಂಗದಳ ಉಡುಪಿ ನಗರ ಸಂಯೋಜಕ ಪ್ರಾಣೇಶ್ ಪರ್ಕಳ ಸ್ವಾಗತಿಸಿ ವಂದಿಸಿದರು.


Spread the love
Subscribe
Notify of

0 Comments
Inline Feedbacks
View all comments