(Updated News) ಎಮ್.ಐ.ಟಿ ವಿದ್ಯಾರ್ಥಿಯ ಬಂಧನ ; ರೂ 15 ಲಕ್ಷ ಮೌಲ್ಯದ ಎಂ.ಡಿ.ಎಂ.ಎ ಮಾತ್ರೆ ವಶ

Spread the love

(Updated News) ಎಮ್.ಐ.ಟಿ ವಿದ್ಯಾರ್ಥಿಯ ಬಂಧನ ; ರೂ 15 ಲಕ್ಷ ಮೌಲ್ಯದ ಎಂ.ಡಿ.ಎಂ.ಎ ಮಾತ್ರೆ ವಶ

ಉಡುಪಿ: ಡ್ರಗ್ಸ್ ಜಾಲದ ವಿರುದ್ದ ತನಿಖೆ ಚುರುಕುಗೊಳಿಸಿರುವ ರಾಜ್ಯ ಪೊಲೀಸರು ಆಂತರಿಕ ಭದ್ರತಾ ವಿಭಾಗದ ಸೂಚನೆಯಂತೆ ಮಣಿಪಾಲ ಪೊಲೀಸರು ಸುಮಾರು ಹದಿನೈದು ಲಕ್ಷ ಮೌಲ್ಯದ ಎಂ.ಡಿ.ಎಂ. ಎ ಮಾತ್ರೆಗಳನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.

ಬಂಧಿತ ಯುವಕನನ್ನು ಉತ್ತರ ಭಾರತ ಮೂಲದ ಯುವಾಂಶು ಜೋಶಿ(20) ಎಂದು ಗುರುತಿಸಲಾಗಿದೆ. ಈತ ಮಣಿಪಾಲ ಎಂ ಐ ಟಿ ಕಾಲೇಜಿನ ಆರೋಪಿತನ Instrumentation And Control ವಿಭಾಗದ 7 ನೇ ಸೆಮಿಸ್ಟ್‌ ರ ವಿದ್ಯಾರ್ಥಿಯಾಗಿರುತ್ತಾನೆ

ಪ್ರಾಥಮಿಕ ಮೂಲಗಳ ಪ್ರಕಾರ ಮಣಿಪಾಲ ಪೊಲೀಸರು ಬಂಧಿತ ವ್ಯಕ್ತಿಯಿಂದ ಸುಮಾರು ಹತ್ತು ಲಕ್ಷ ರೂಪಾಯಿ ಮೌಲ್ಯದ ಎಂ.ಡಿ.ಎಂ. ಎ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಭಾನುವಾರ  ಉಡುಪಿ ಐಎಸ್ ಡಿ ಘಟಕದ ಪೊಲೀಸರು ಮತ್ತು ಮಣಿಪಾಲ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡು ಮಣಿಪಾಲದ ಶೀಂದ್ರಾ ಬ್ರಿಡ್ಜ್ ಬಳಿ ಮಾದಕ ವಸ್ತು M.D.M.A (ECSTASY) ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಹಿಮಾಂಶು ಜೋಶಿ ಯನ್ನು ಬಂಧಿಸಿ ಆತನಿಂದ ಒಟ್ಟು 498 ನಿಷೇಧಿತ ನಿದ್ರಾಜನಕ M.D.M.A (ECSTASY) ಮಾತ್ರೆ ಗಳನ್ನು ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡಿರುವ ಮಾತ್ರೆಗಳ ಅಂದಾಜು ಮೌಲ್ಯ 14,94,000/- ರೂ ಆಗಿರುತ್ತದೆ.

ಆರೋಪಿತನ Instrumentation And Control ವಿಭಾಗದ 7 ನೇ ಸೆಮಿಸ್ಟ್‌ ನ ಮಣಿಪಾಲ ಎಂಐಟಿ ಕಾಲೇಜಿನ ವಿದ್ಯಾರ್ಥಿ ಆಗಿರುತ್ತಾನೆ. ಈತನು ದ್ವಿಚಕ್ರ ವಾಹನದಲ್ಲಿ ಶೀಂದ್ರಾ ಬ್ರಿಡ್ಜ್ ಬಳಿ ನಿಷೇಧಿತ ಮಾತ್ರೆ ಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ಯಾಗ ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತನಿಂದ ಒಂದು ದ್ವಿಚಕ್ರ ವಾಹನ ಹಾಗೂ ಒಂದು ಮೊಬೈಲ್ ಫೋನ್ ನನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ.

ಸದರಿ ದಾಳಿಯನ್ನು ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯಾದ  ವಿಷ್ಣುವರ್ಧನ್ ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ   ಕುಮಾರ್ ಚಂದ್ರ ರವರ ಮಾರ್ಗದರ್ಶನದಲ್ಲಿ ಉಡುಪಿ ಐಎಸ್ ಡಿ ಘಟಕ ಪೊಲೀಸ್ ನಿರೀಕ್ಷಕ   ಪಿ ಎಸ್ ಮಧು, ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧಿಕ್ಷಕರು   ಟಿ ಆರ್ ಜೈಶಂಕರ್ , ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ ಗೌಡ, ಪೊಲೀಸ್ ಉಪನಿರೀಕ್ಷಕ ರಾಜ್ ಶೇಖರ್ ವಂದಲಿ, ಉಡುಪಿ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ಶ್ರೀ ನಾಗರಾಜ್ ಹಾಗೂ ಸಿಬ್ಬಂದಿಗಳಾದ ಶ್ರೀಶೈಲೇಶ್, ಹೆಚ್ ಸಿ   ದಿನೇಶ್ ಶೆಟ್ಟಿ, ಹೆಚ್ ಸಿ   ಥೋಮನ್ಸ್, ಹೆಚ್ ಸಿ   ಮಂಜುನಾಥ ಶೆಟ್ಟಿ, ಸಿಪಿಸಿ  ,ಸಿಪಿಸಿ   ಆದರ್ಶ ನಾಯ್ಕ ಅವರು ಭಾಗವಹಿಸುತ್ತಾರೆ,


Spread the love