ಓಷಿಯನ್ ಪರ್ಲ್ ನಲ್ಲಿ  ಕ್ರಿಸ್ಮಸ್ ಕೇಕ್ ಮಿಕ್ಸಿಂಗ್ ಸಂಭ್ರಮ

Spread the love

ಓಷಿಯನ್ ಪರ್ಲ್ ನಲ್ಲಿ  ಕ್ರಿಸ್ಮಸ್ ಕೇಕ್ ಮಿಕ್ಸಿಂಗ್ ಸಂಭ್ರಮ

ಮಂಗಳೂರು: ವರ್ಷಾಂತ್ಯದ ಮಹಾಹಬ್ಬವಾದ ಕ್ರಿಸ್‌ಮಸ್ ಸಡಗರಕ್ಕೆ ಸಿದ್ಧತೆಗಳು ಆರಂಭಗೊಂಡಿದ್ದು, ನಗರದ ಓಷಿಯನ್ ಪರ್ಲ್ ಹೊಟೇಲ್‌ನಲ್ಲಿ ಕ್ರಿಸ್ಮಸ್ ಕೇಕ್ ಮಿಕ್ಸಿಂಗ್ ಕಾರ್ಯಕ್ರಮ ಬುಧವಾರ ಸಂಭ್ರಮದಿಂದ ನಡೆಯಿತು.

ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭವಾಗಿದ್ದು, ಆಗಮಿಸಿದ ಗಣ್ಯರು, ಉದ್ಯಮಿಗಳು ಕೇಕ್ಸ್ ಮಿಕ್ಸಿಂಗ್ ಕಾರ್ಯಕ್ರಮದಲ್ಲಿ ಪಾಲು ಪಡೆದು ಕ್ರಿಸ್ ಮಸ್ ಸಡಗರಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಫಾ. ರಿಚರ್ಡ್ ಕುವೆಲ್ಲೋ ಮಾತನಾಡಿ, ಸಡಗರದ ಕ್ರಿಸ್ಮಸ್ ಹಬ್ಬ ಬರುತ್ತಿದೆ, ನಾವೆಲ್ಲ ಜತೆಗೂಡಿ ಈ ಸಂಭ್ರಮವನ್ನು ಹಂಚೋಣ. ಕೇಕ್ ಮಿಕ್ಸಿಂಗ್ ಅನ್ನುವಂತಹುದು ಪ್ರೀತಿಯ ಹಂಚಿಕೆ, ಮಾನವೀಯ ಸಂಬಂಧಗಳ ದ್ಯೋತಕ, ಸರ್ವಶಕ್ತನ ಆರಾಧನೆಯ ಪ್ರತೀಕ. ಈ ಸಡಗರದಲ್ಲಿ ಕೇಕ್ ಹಂಚುವ ಮೂಲಕ ಪರಸ್ಪರ ಪ್ರೀತಿ, ವಿಶ್ವಾಸ ಬೆಳೆಸೋಣ ಎಂದರು.

ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾತನಾಡಿ, ಮಂಗಳೂರು ಒಂದು ರೀತಿ ಸಾಂಪ್ರದಾಯಿಕತೆ, ಸಂಸ್ಕೃತಿಗೆ ಒತ್ತು ನೀಡುವ ನಗರ. ಕ್ರಿಸ್ಮಸ್ ಹಬ್ಬದ ಮುಂಚಿತವಾಗಿ ಕೇಕ್ ಮಿಕ್ಸಿಂಗ್ ಕಾರ್ಯಕ್ರಮವನ್ನು ಓಷಿಯನ್ ಪರ್ಲ್ ಸಂಸ್ಥೆ ವಿಭಿನ್ನವಾಗಿ ಆಚರಿಸಿರುವುದು ಖುಷಿ ನೀಡಿದೆ. ಇದರಿಂದಲೇ ಓಷಿಯನ್ ಪರ್ಲ್ ಎಲ್ಲರ ಪ್ರೀತಿ, ಅಭಿಮಾನದ ಸಂಸ್ಥೆಯಾಗಿ ಮಂಗಳೂರಿನ ಬ್ರ್ಯಾಂಡ್ ಆಗಿದೆ ಎಂದರು.

ಓಷಿಯನ್ ಪರ್ಲ್ನ ಉಪಾಧ್ಯಕ್ಷ ಬಿ.ಎನ್. ಗಿರೀಶ್ ಮಾತನಾಡಿ, ಓಷಿಯನ್ ಪರ್ಲ್ ಸಂಸ್ಥೆ ಪ್ರತಿಯೊಂದು ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದು, ಅದರಲ್ಲಿ ಕ್ರಿಸ್ಮಸ್ ಸಂಭ್ರಮವೂ ಒಂದಾಗಿದೆ. ಕ್ರಿಸ್ಮಸ್ ಸ್ಪೂರ್ತಿ ಸಂಭ್ರಮದ ಹಬ್ಬವಾಗಿದೆ. ಓಷಿಯನ್ ಪರ್ಲ್ ಸಂಸ್ಥೆ ಈ ಸಂಭಮದಲ್ಲಿ ಭಾಗಿಯಾಗಲು ಖುಷಿಪಡುತ್ತದೆ.

ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡೋ ಕುಲಾಸೊ, ಮಂಗಳೂರು ವಿಮಾನ ನಿಲ್ದಾಣದ ಭದ್ರತಾ ವಿಭಾಗ ಮುಖ್ಯಸ್ಥ ವೀರೇಂದ್ರ ಮೋಹನ್ ಜೋಶಿ, ಎಂಆರ್ ಪಿಎಲ್ ನ ಕೃಷ್ಣ ಹೆಗ್ಡೆ, ಡಾ. ಮರಿಯೋ, ಡಾ. ಶಿಶಿರ್, ಡಾ. ಮಂಜುನಾಥ್, ಸಂತೋಷ್ ರೈ, ಶ್ಯಾಮ್ ಸುಂದರ್ ಭಟ್, ವಿಜಯ್ ಪಿಳ್ಳೈ,

ರೋಹನ್ ಕಾರ್ಪೊರೇಷನ್ ಮ್ಯಾನೇಜಿಗ್ ಡೈರೆಕ್ಟರ್ ರೋಹನ್ ಮೊಂತೇರೋ, ಕ್ರೆಡೈ ಸಂಸ್ಥೆಯ ಅಧ್ಯಕ್ಷ ವಿನೋದ್ ಪಿಂಟೋ ಉಪಸ್ಥಿತರಿದ್ದರು.

ನಿರೂಪಕಿ ಲವಿಟಾ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.

ಕೇಕ್ ಮಿಕ್ಸಿಂಗ್ ಮಾಡಿ ಸಂಭ್ರಮಿಸಿದರು !

ಕಾರ್ಯಕ್ರಮ ಆರಂಭದಲ್ಲಿ ಗಣ್ಯರು, ಉದ್ಯಮಿಗಳು ಎಲ್ಲರೂ ಒಟ್ಟಾಗಿ ಬ್ರಾಂಡಿ, ವೈನ್‌ಗಳನ್ನು ಮಿಕ್ಸ್ ಮಾಡಿ ಸಾಮೂಹಿಕವಾಗಿ ಕೇಕ್ ಮಿಕ್ಸಿಂಗ್ ಚಾಲನೆ ನೀಡಿದರು.ಈ ಸಂದರ್ಭ ಕ್ರಿಸ್ ಮಸ್ ಸಂಗೀತ ಮುದ ನೀಡಿತು.

25 ಕೆ.ಜಿ. ಮಿಕ್ಸಿಂಗ್: ಕ್ರಿಸ್ ಮಸ್ ಸಂಭ್ರಮಕ್ಕೆ 25 ಕೆ.ಜಿ. ಕೇಕ್ ತಯಾರಿಸಲು ಅನುಕೂಲವಾಗುವಂತೆ ಕೇಕ್ ಉತ್ಪನ್ನಗಳ ಮಿಕ್ಸಿಂಗ್ ಮಾಡಲಾಯಿತು. ಅದರಲ್ಲಿ ಬಾದಾಮಿ, ದ್ರಾಕ್ಷಿ, ಗೇರುಬೀಜ, ಚೆರ್ರಿ ಸೇರಿದಂತೆ ನಾನಾ ಕೇಕ್ ತಯಾರಿ ವಸ್ತುಗಳಿದ್ದವು.


Spread the love
Subscribe
Notify of

0 Comments
Inline Feedbacks
View all comments