ಬೀಜಾಡಿ ಮಿತ್ರ ಸಂಗಮದಿಂದ 175 ಕಿಟ್ ವಿತರಣೆ
ಬೀಜಾಡಿ: ಜಿಲ್ಲಾ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಪುರಸ್ಕøತ ಬೀಜಾಡಿ ಗೋಪಾಡಿ ಮಿತ್ರ ಸಂಗಮ ಹಾಗೂ ರೋಟರಿ ಸಮುದಾಯ ದಳ ಬೀಜಾಡಿ ಗೋಪಾಡಿ ಇವರ ಆಶ್ರಯದಲ್ಲಿ ದಾನಿಗಳ ಸಹಕಾರದೊಂದಿಗೆ ಕೊರೊನಾ ಹಿನ್ನೆಲೆಯ ಲಾಕ್ಡೌನ್ ಪ್ರಯುಕ್ತ ಬೀಜಾಡಿ ಗೋಪಾಡಿ ಗ್ರಾಮದ ಅಶಕ್ತ 175 ಕುಟುಂಬಗಳಿಗೆ ಆಹಾರ ಸಾಮಾಗ್ರಿ ಕಿಟ್ ವಿತರಿಸುವ ಕಾರ್ಯಕ್ರಮ ಜರುಗಿತು.

ಬೀಜಾಡಿ ಮಿತ್ರಸೌಧದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಶಂಕರನಾರಾಯಣ ಬಾಯರಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಮಿತ್ರ ಸಂಗಮದ ಗೌರವಾಧ್ಯಕ್ಷ ಬಿ.ವಾದಿರಾಜ ಹೆಬ್ಬಾರ್ ನೇತೃತ್ವದಲ್ಲಿ ಅಶಕ್ತ 175 ಕುಟುಂಬಕ್ಕೆ ಅವರವರ ಮನೆಗೆ ತೆರಳಿ ಆಹಾರ ಸಾಮಾಗ್ರಿಗಳ ಕಿಟ್ ನೀಡಿವ ಮೂಲಕ ಮಾನವೀಯತೆ ಮೆರೆದರು. ಜತೆಗೆ ಮಣಿಪಾಲದ ಭಾರತೀಯ ವಿಕಾಸ್ ಟ್ರಸ್ಟ್ ನೀಡಿದ ಮ್ಕಾಸ್ ಸಾರ್ವಜನಿಕರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಿತ್ರ ಸಂಗಮದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ಚಂದ್ರ ಬಿ.ಎನ್., ಜತೆ ಕಾರ್ಯದರ್ಶಿ ಗಿರೀಶ್ ಕೆ.ಎಸ್., ರೋಟರಿ ಸಮುದಾಯ ದಳದ ಅಧ್ಯಕ್ಷ ಚಂದ್ರಶೇಖರ ಬೀಜಾಡಿ, ಕಾರ್ಯದರ್ಶಿ ರಾಜೇಶ್ ಆಚಾರ್ಯ, ಎರಡು ಸಂಸ್ಥೆಯ ಸದಸ್ಯರಾದ ನಾಗರಾಜ ಬೀಜಾಡಿ, ಅನುಪ್ ಕುಮಾರ್ ಬಿ.ಆರ್., ನಾಗರಾಜ ಬಿ.ಜಿ., ಶ್ರೀಕಾಂತ್ ಭಟ್, ಸುಭಾಶ್ ಪುತ್ರನ್, ಸದಾಶಿವ, ಗಿರೀಶ್ ಆಚಾರ್,ವಿನಯ ಹೆಬ್ಬಾರ್, ವಿವೇಕ್ ಹೆಬ್ಬಾರ್, ಪ್ರದೀಪ್ ದೇವಾಡಿಗ, ದೇವೇಂದ್ರ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.













![Spanish Ambassador to India Launches ‘The Great Reset [CTRL+ALT+HUMAN]’ in Mangaluru](https://i0.wp.com/www.mangalorean.com/wp-content/uploads/2026/02/The-great-reset.471.jpg?resize=100%2C70&ssl=1)