ಮೇ 23 – 24 : ಸಹ್ಯಾದ್ರಿ ಕಾರ್ನಿವಲ್ 2025
ವ್ಯವಹಾರ ಆಡಳಿತ ವಿಭಾಗ(MBA), ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ , ಬರುವ 23, 24 ಮೇ 2025, ರಂದು ಸಹ್ಯಾದ್ರಿ ಕಾರ್ನಿವಲ್ 2025 ಕಾಲೇಜಿನ ಕ್ಯಾಂಪಸ್ ನಲ್ಲಿ ನಡೆಸಲಿದೆ.
ವಿವಿಧ ಪದವಿಗಳಿಗೆ ನಡೆಯುವ ಈ ಬೃಹತ್ ಕಾರ್ಯಕ್ರಮದಲ್ಲಿ ಉದ್ಯೋಗ ಮೇಳ, ಮಾರ್ಕೆಟ್ ವರ್ಸ, ಸ್ಟುಡೆಂಟ್ ಕಾರ್ನರ್, ಸಹ್ಯಾದ್ರಿ ವಿಜ್ ಕ್ವಿಜ್ 2025, ಮ್ಯಾನೇಜ್ಮೆಂಟ್ ಫೆಸ್ಟ್ ಹಾಗೂ (ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ ) ಎಫ್ ಡಿ ಪಿ ನಡೆಯಲಿದೆ.
ಸುಮಾರು 50ಕ್ಕಿಂತಲೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುವ ಉದ್ಯೋಗ ಮೇಳದಲ್ಲಿ ಈಗಾಗಲೇ ಸಾವಿರಕ್ಕಿಂತಲೂ ಹೆಚ್ಚು ವಿವಿಧ ಪದವಿಯ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಮಾರ್ಕೆಟ್ ವರ್ಷ ಮತ್ತು ಸ್ಟೂಡೆಂಟ್ ಕಾರ್ನರ್ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವ್ಯವಹಾರ ಆಡಳಿತ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮವಾಗಿದೆ. ಸಹ್ಯಾದ್ರಿ ವಿಜ್ಕ್ ಕ್ವಿಜ್ ಕಳೆದ 10 ವರ್ಷಗಳಿಂದ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಕಾರ್ಯಕ್ರಮವಾಗಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್ಮೆಂಟ್ ಮಂಗಳೂರು ಚಾಪ್ಟರ್ ಇದರ ಸಹಾಯಯೋಗದೊಂದಿಗೆ “ ಸಂಶೋಧನೆಯಲ್ಲಿ ಗ್ರಂಥ ಪರಿಷ್ಕರಣ” ಎಂಬ ವಿಚಾರದ ಕುರಿತ ನಡೆಯುವ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ ದಲ್ಲಿ ವಿವಿಧ ಕಾಲೇಜುಗಳಿಂದ ಅಧ್ಯಾಪಕರು ಭಾಗವಹಿಸಲಿದ್ದಾರೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಯಸುವವರು ಈ ಕೆಳಗಿನ ಲಿಂಕ್ ( Registration Link: https://linktr.ee/Sahyadricarnival2025) ಮುಖಾಂತರ ತಮ್ಮ ಹೆಸರನ್ನು ನೋಂದಾಯಿಸಬೇಕಾಗಿ ಈ ಮೂಲಕ ಕಾರ್ಯಕ್ರಮದ ವ್ಯವಸ್ಥಾಪಕರು ತಿಳಿಸಿದ್ದಾರೆ