ಅಂತರ್ ರಾಜ್ಯ ದನ ಕಳವು ಆರೋಪಿಯ ಬಂಧನ

Spread the love

ಅಂತರ್ ರಾಜ್ಯ ದನ ಕಳವು ಆರೋಪಿಯ ಬಂಧನ

ಮಂಗಳೂರು: ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಪುಣ್ಯಕೋಟಿ ಅಮೃತಧಾರಾ ಗೋಶಾಲೆಯಲ್ಲಿ ಮತ್ತು ಪಾಂಡೇಶ್ವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದನ ಕಳವು ಮಾಡಿದ ಆರೋಪಿಗಳ ಪೈಕಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಕೋಣಾಜೆ ಪೋಲಿಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈ ಹಿಂದೆ 8 ಜನರನ್ನು ಬಂಧಿಸಲಾಗಿತ್ತು.

ಬಂಧಿತನ್ನನ್ನು ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮಂಜೇಶ್ವರ ಮಚ್ಛಂಪಾಡಿ ನಿವಾಸಿ ಅಬ್ದುಲ್ ಹುಸೈನ್ ಎಂದು ಗುರುತಿಸಲಾಗಿದ್ದು, ಆತನಿಂದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

ಈತನು ಮಂಗಳೂರು ದಕ್ಷಿಣ ಪೋಲಿಸ್ ಠಾಣಾ ವ್ಯಾಪ್ತಿಯ ಪಾಂಡೇಶ್ವರದ ಮಹಾಲಿಂಗೇಶ್ವರ ದೇವಸ್ಥಾನದ 2 ದನ ಮತ್ತು ಕರುವನ್ನು ಕಳವು ಮಾಡಿದ್ದು, ಈ ಕೃತ್ಯಕ್ಕೆ ರಿಟ್ಜ್ ಕಾರನ್ನು ಬಳಸಿಕೊಂಡಿರುವುದಾಗಿ ಒಪ್ಪಿಕೊಂಡಿರುತ್ತಾನೆ.

ಆರೋಪಿಯ ವಿರುದ್ದ ದನಕಳವಿಗೆ ಸಂಬಂಧಿಸಿದಂತೆ ಕೊಣಾಜೆ ಠಾಣೆಯಲ್ಲಿ 2, ಉಳ್ಳಾಲ ಠಾಣೆಯಲ್ಲಿ 3, ಮಂಗಳೂರು ಗ್ರಾಮಾಂತ ಪೋಲಿಸ್ ಠಾಣೆಯಲ್ಲಿ ಒಂದು, ಕಂಕನಾಡಿ ನಗದ ಪೊಲೀಸ್ ಠಾಣೆಯಲಲ್ಇ 2 ಪ್ರಕರಣಗಳು, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಅಲ್ಲದೆ ಕೇರಳ ರಾಜ್ಯದ ಕಾಸರಗೋಡು ಕುಂಬ್ಳೆಯಲ್ಲಿ 2 ಪ್ರಕರಣಗಳು ದಾಖಲಾಗಿರುತ್ತವೆ. ಈತನು ನೆತ್ತಿಲಪದವು, ಕಾಸರಗೋಡು ಮತ್ತು ವಿಟ್ಲ ಪರಿಸರದಲ್ಲಿ ಇನ್ನೂ ಕೆಲವು ದನ ಕಳವು ಮಾಡಿದ ಬಗ್ಗೆ ಮಾಹಿತಿ ಇದ್ದು ಈ ಬಗ್ಗೆ ತನಿಖೆ ಮುದುವರೆಸಲಾಗಿದೆ.


Spread the love