ಅಕ್ರಮ ಗಾಂಜಾ ಬೆಳೆಯುತ್ತಿರುವ ಕುರಿತು ಸಂಶಯ – ಸಖರಾಯಪಟ್ಟಣ ಪೊಲೀಸರಿಂದ ಕೂಂಬಿಂಗ್ ಕಾರ್ಯಾಚರಣೆ

Spread the love

ಅಕ್ರಮ ಗಾಂಜಾ ಬೆಳೆಯುತ್ತಿರುವ ಕುರಿತು ಸಂಶಯ – ಸಖರಾಯಪಟ್ಟಣ ಪೊಲೀಸರಿಂದ ಕೂಂಬಿಂಗ್ ಕಾರ್ಯಾಚರಣೆ

ಚಿಕ್ಕಮಗಳೂರು: ಜಿಲ್ಲೆಯ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ಗಾಂಜಾ ಗಿಡಗಳನ್ನು ಬೆಳೆಯುತ್ತಿದ್ದಾರೆ ಎಂಬ ಸಂಶಯದ ಮೇಲೆ ಠಾಣಾಧಿಕಾರಿ ಹರೀಶ್ ಆರ್ ಮತ್ತು ಅಧಿಕಾರಿಗಳ ತಂಡ ಹುಡುಕಾಟ ನಡೆಸಿದರು.

ಸಕರಾಯಪಟ್ಟಣ ಪೊಲೀಸ್ ಠಾಣಾ ಸರಹದ್ದಿನ ಗ್ರಾಮಗಳಾದ ಪಾದಮನೆ, ಅಮ್ಮನಾಳು, ಅಕ್ಲು ಹೊಳೆ, ಕೋಟೆ, ಹಳೆ ಸಿದ್ದರಹಳ್ಳಿ, ಹೊಸ ಸಿದ್ದರಹಳ್ಳಿ, ಕಡೆಗಳಲ್ಲಿ ಅಕ್ರಮವಾಗಿ ಮಾದಕ ಗಾಂಜಾ ಗಿಡಗಳನ್ನು ಬೆಳೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಉಸ್ತುವಾರಿ ಎಸ್ ಐ ಶಿವ ಕುಮಾರ್ ಹಾಗೂ ಪಂಚಾಯತ್ ವ್ಯಾಪ್ತಿಯ ಆರ್ ಐ, ವಿ ಎ ಮತ್ತು ಅರಣ್ಯ ರಕ್ಷಕರು, ವೀಕ್ಷರಿಗೆ ಮಾಹಿತಿ ನೀಡಿ ಅವರ ಸಹಕಾರದೊಂದಿಗೆ ಸೇರಿಕೊಂಡು ಅನುಮಾನಸ್ಪದ ಗ್ರಾಮಗಳಲ್ಲಿ ಅಕ್ರಮವಾಗಿ ಮಾದಕ ಗಾಂಜಾ ಗಿಡಗಳನ್ನು ಬೆಳೆಸುವ ಅನುಮಾನಸ್ಪದ ಸ್ಥಳಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು.

ಈ ವೇಳೆ ಸದರಿ ಗ್ರಾಮಗಳ ಬೀಟ್ ಸಿಬಂದಿಗಳಾದ ಸುರೇಶ್ ಎಚ್ ಸಿ ಮಧು, ಹಾಗೂ ಪಂಚಾಯತ್ ವ್ಯಾಪ್ತಿಯ ಆರ್ ಐ, ವಿ ಎ ಮತ್ತು ಅರಣ್ಯ ರಕ್ಷಕರು, ವೀಕ್ಷಕರು ಸಹಕರಿಸಿದರು.


Spread the love