ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹ್ಯಾಕಥಾನ್ ಕಾರ್ಯಾಗಾರ

Spread the love

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹ್ಯಾಕಥಾನ್  ಕಾರ್ಯಾಗಾರ

ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ  ಹ್ಯಾಕಥಾನ್  ಬಗ್ಗೆ ಎರಡು ದಿನಗಳಕಾರ್ಯಾಗಾರವನ್ನು ನಡೆಸಲಾಯಿತು .

ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರೊ ಹರೀಶ್ ಭಟ್ ಕಾರ್ಯಾಗಾರವನ್ನು ಉದ್ಘಾಟಿಸಿದರು . ಅವರು ಈ ಸಂದರ್ಭದಲ್ಲಿ ವೆಬ್ ಸೈಟ್ಗಳನ್ನು ರಚಿಸುವಾಗ ಅಳವಡಿಸಬೇಕಾದ ಸುರಕ್ಷತಾ ಕೋಡ್ ಗಳ ಬಗ್ಗೆ ಮಾಹಿತಿಯನ್ನು ಒದಗಿಸಿದರು . ಸಂಪನ್ಮೂಲ ವ್ಯಕ್ತಿಯಾಗಿಬೆಂಗಳೂರಿನ ಸಿನೋಪ್ಸಿಸ್ ಸಂಸ್ಥೆಯ ಹಿರಿಯ ತಾಂತ್ರಿಕ ಅಧಿಕಾರಿ ರಾಕೇಶ್ ಚಾಯೆಲ್ ಭಾಗವಹಿಸಿದ್ದರು .

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ , ವಿಭಾಗದ ಮುಖ್ಯಸ್ಥ ಮಂಜುನಾಥ್ ಕೊಟ್ಟಾರಿ ಮತ್ತು ಪ್ರಾಧ್ಯಾಪಕರುಉಪಸ್ಥಿತರಿದ್ದರು .

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸುಮಾರು 150  ಕ್ಕೂ ಅಧಿಕ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು  ಸಿಬಂದಿ ವರ್ಗದವರು  ಈಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡರು .


Spread the love